ಚೀನೀ ಸ್ಮಾರ್ಟ್ಫೋನ್ ತಯಾರಕ Xiaomi ಎರಡು ರೆಡ್ಮಿ ಸ್ಮಾರ್ಟ್ಫೋನ್ಗಳಿಗೆ ಆಂಡ್ರಾಯ್ಡ್ ಪೈ ಅಪ್ಡೇಟ್ ಔಟ್ ರೋಲಿಂಗ್ ಪ್ರಾರಂಭಿಸಿದೆ. ಅವೆಂದರೆ Redmi Note 5 Pro ಮತ್ತು Redmi 6 Pro ಫೋನ್ಗಳು. ಕಂಪನಿಯು ಈ ವರ್ಷದ ಮಾರ್ಚ್ನಲ್ಲಿ ಇದರ ಬೀಟಾ ಆವೃತ್ತಿಯನ್ನು ಮೊದಲ ಬಾರಿಗೆ ಪರಿಚಯಿಸಿದ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಹೊಸ ಅಪ್ಡೇಟ್ ನೀಡುತ್ತಿದೆ. ಈ Redmi 6 Pro ಫೋನಿನ ಆಂಡ್ರಾಯ್ಡ್ ಪೈ ಅಪ್ಡೇಟ್ 1.6GB ಮತ್ತು MIUI 10.3.2.0.PDMMIXM ನೀಡುತ್ತದೆ. ಮತ್ತು OS ಆವೃತ್ತಿಯು ಅಪ್ಲಿಕೇಶನ್ಗಳಿಗೆ ಫೇಸ್ ಅನ್ಲಾಕ್ ಬೆಂಬಲವನ್ನು ಸಹ ನೀಡುತ್ತದೆ. ಮತ್ತು ಲಾಕ್ ಸ್ಕ್ರೀನ್ ಮೇಲೆ ನೋಟಿಫಿಕೇಟಿನ್ ತೆರೆಯುವುದನ್ನು ನಿರ್ಬಂಧಿಸುತ್ತದೆ. ಇದು 2019 ರ ಮೇ ತಿಂಗಳಲ್ಲಿ ಸ್ಮಾರ್ಟ್ಫೋನ್ಗೆ ಸೆಕ್ಯೂರಿಟಿ ಪ್ಯಾಚ್ ಅನ್ನು ಒದಗಿಸುತ್ತದೆ. ಮತ್ತು ಮತ್ತೊಂದೆಡೆಯಲ್ಲಿ Redmi Note 5 Pro ಆಂಡ್ರಾಯ್ಡ್ ಪೈ ಆಧಾರದ MIUI 10.3.1.0.PEIMIXM ಅನ್ನು 1.6GB ಪಡೆಯುತ್ತದೆ. ಇದು 2019 ರ ಮೇ ಸೆಕ್ಯೂರಿಟಿ ಪ್ಯಾಚ್ನೊಂದಿಗೆ ಬರುತ್ತದೆ.
ಈ ಸ್ಮಾರ್ಟ್ಫೋನ್ 5.99 ಇಂಚಿನ ಐಪಿಎಸ್ LCD ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 1080 x 2160 ಪಿಕ್ಸೆಲ್ಗಳೊಂದಿಗೆ ಈ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ನಿಂದ ಪ್ರೊಟೆಕ್ಷನ್ ಒಳಗೊಂಡಿದೆ. ಇದರಲ್ಲಿ 12MP + 5MP ಡುಯಲ್ ರೇರ್ ಸೆಟಪ್ ನೀಡಲಾಗಿದೆ. ಇವು ಫೇಸ್ ಡಿಟೆಕ್ಷನ್ ಆಟೋಫೋಕಸ್ ಮತ್ತು Exmor-RS CMOS ಸೆನ್ಸರ್ಗಳ ಸಾಮರ್ಥ್ಯದ ಸಹಾಯದಿಂದ ಅದ್ಭುತ ಫೋಟೋಗ್ರಾಫಿಯ ಅನುಭವ ನೀಡುತ್ತದೆ. ಇದರ ಮುಂಭಾಗದಲ್ಲಿ 20MP Exmor Rs ಸೆನ್ಸಾರ್ ಮತ್ತು 2.0 ಅಪೆರ್ಚರ್ ವರ್ಕ್ ಅದ್ಭುತವಾದ ಸೆಲ್ಫಿಗಳನ್ನು ಒದಗಿಸುತ್ತದೆ. ಅಲ್ಲದೆ ಕ್ವಾಡ್ ಕೋರ್ ಕ್ರೊಯೋ 260 ಪ್ರೊಸೆಸರ್ ಒಳಗೊಂಡಿದ್ದು 1.8GHz ಮತ್ತು 1.6GHz ವೇಗವನ್ನು ನೀಡುತ್ತದೆ. ಅಡ್ರಿನೊ 509 ಜಿಪಿಯು ಜೊತೆಗೆ ಬಹು ಕಾರ್ಯಕ ಮತ್ತು ಗೇಮಿಂಗ್ ಅನುಭವವನ್ನು ಪಡೆಯಲು ಅದ್ದೂರಿಯ ಡಿಸೈನ್ ಮತ್ತು ನಿರ್ಮಾಣ ಹೊಂದಿದೆ. ಫೋನಿಗೆ ಪವರ್ ನೀಡಲು 4000mAh ಲೀ-ಪಾಲಿಮರ್ ಬ್ಯಾಟರಿಯಿಂದ ಅಗತ್ಯವಾದ ಪವರ್ ಒದಗಿಸಲಾಗುತ್ತದೆ. ಇದರಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದಾದ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಕೊನೆಯದಾಗಿ ಡ್ಯುಯಲ್ ಸಿಮ್ ಸ್ಲಾಟ್ಗಳು, ವೋಲ್ಟಿ, ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಮೈಕ್ರೊ ಯುಎಸ್ಬಿ 2.0 ಸ್ಲಾಟ್ ಒಳಗೊಂಡಿದೆ.
Redmi Note 5 Pro > 4GB/64GB = 11,897
Redmi Note 5 Pro > 6GB/64GB = 13,675
ಇದು ನಿಮಗೆ 5.84 ಇಂಚಿನ ಐಪಿಎಸ್ LCD ಡಿಸ್ಪ್ಲೇಯೊಂದಿಗೆ 1080 x 2280 ಪಿಕ್ಸೆಲ್ಗಳ ಸ್ಕ್ರೀನ್ ರೆಸೊಲ್ಯೂಶನ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ 12MP ಮತ್ತು 5MP ಲೆನ್ಸ್ಗಳನ್ನು ಹೊಂದಿರುವ ಡ್ಯುಯಲ್ ಕ್ಯಾಮರಾ ಸೆಟಪ್ನೊಂದಿಗೆ ಸಜ್ಜುಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಇಮೇಜ್ ಮತ್ತು ವಿಡಿಯೋಗಳನ್ನು ನೀಡಲು ಸಹಕರಿಸುತ್ತದೆ. ಈ ಫೋನಿಗೆ ಪವರ್ ನೀಡಲು 4000mAh ಲಿ-ಪಾಲಿಮರ್ ಬ್ಯಾಟರಿ ಸಾಕಷ್ಟು ಪ್ರಮಾಣದ ಬ್ಯಾಕಪ್ ಅನ್ನು ಒದಗಿಸುತ್ತದೆ. ಇದರ ಕನೆಕ್ಷನ್ ಬಗ್ಗೆ ಹೇಳಬೇಕೆಂದರೆ ವೋಲ್ಟಿ, ವೈ-ಫೈ ಬ್ಲೂಟೂತ್, GPS ಮೊಬೈಲ್ ಹಾಟ್ಸ್ಪಾಟ್, ಮೈಕ್ರೋ ಯುಎಸ್ಬಿ ಮತ್ತು ಬ್ಲೂಟೂತ್ನೊಂದಿಗೆ 4G ಆಯ್ಕೆಗಳೊಂದಿಗೆ ಬರುತ್ತದೆ. ಇದು 2GHz ವೇಗದಲ್ಲಿ ಕಾರ್ಟೆಕ್ಸ್ A53 ಆಕ್ಟಾ ಕೋರ್ ಪ್ರೊಸೆಸರ್ನಿಂದ ಚಾಲಿತವಾಗಿದೆ. ಅಡ್ರಿನೋ 506 ಜಿಪಿಯು ಜೊತೆಗೆ ಸಂಪೂರ್ಣ ಸಂರಚನೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 MSM8953 ಚಿಪ್ಸೆಟ್ನಲ್ಲಿ ನಡೆಯುತ್ತದೆ.
Redmi 6 Pro > 3GB/32GB = 8,999
Redmi 6 Pro > 4GB/64GB = 10,999
ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಸುದ್ದಿಗಳಿಗಾಗಿ ಡಿಜಿಟ್ ಕನ್ನಡ Instagram ಮತ್ತು Telegram ಅಪ್ಲಿಕೇಷನ್ಗಳಲ್ಲೂ ಲಭ್ಯ.