ಅತಿ ಹೆಚ್ಚಾಗಿ ಮಾರಾಟವಾದ ಮತ್ತು ಜನಪ್ರಿಯತೆಯನ್ನು ಗಳಿಸಿರುವ Xiaomi ಒಂದೇ ಫೋನ್ ಅನ್ನು ಕಂಪನಿ ಎರಡು ಬಾರಿ ಬಿಡುಗಡೆ ಮಾಡಿದೆ. Redmi Note 13 ಪ್ರಾರಂಭಿಸಿದ ನಂತರ ಈಗ ಕಂಪನಿಯು Redmi Note 13R Pro ಅನ್ನು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಹೊಸ ಬ್ಯಾಕ್ ಪ್ಯಾನೆಲ್ ವಿನ್ಯಾಸದೊಂದಿಗೆ ವಾಸ್ತವಿಕವಾಗಿ ಅದೇ ಹಾರ್ಡ್‌ವೇರ್ ಸ್ಪೆಕ್ಸ್‌ನೊಂದಿಗೆ ಮತ್ತೆ ಎಂಟ್ರಿ ಕೊಟ್ಟಿದೆ. ಈ ಫೋನ್ 12GB RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ಪವರ್ಫುಲ್ ಪ್ರೊಸೆಸರ್ ಮತ್ತು 108MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಚೀನಾದಲ್ಲಿ ಬಿಡುಗಡೆಯಾಗಿದೆ.
Also Read: ನಿಮ್ಮ Smartphone ಹಳೆದುಹೋದರೆ ಅಥವಾ ಯಾರಾದರೂ ಕದ್ದರೆ ಗಾಬರಿಯಾಗದೆ ಮೊದಲು ಈ ಕೆಲಸ ಮಾಡಿ!
Redmi Note 13R ಫೋನ್‌ನಲ್ಲಿ 6.67 ಇಂಚಿನ OLED ಡಿಸ್ಪ್ಲೇಯೊಂದಿಗೆ 2400 x 1800 ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇ 120Hz ನ ರಿಫ್ರೆಶ್ ದರವನ್ನು ಮತ್ತು 1000 nits ನ ಗರಿಷ್ಠ ಪ್ರಕಾಶಮಾನ ಮಟ್ಟವನ್ನು ಬೆಂಬಲಿಸುತ್ತದೆ. ಅಲ್ಲಾಡಿ 1920Hz PWM ಡಿಮ್ಮಿಂಗ್ ಅನ್ನು ಬೆಂಬಲಿಸುವುದರೊಂದಿಗೆ 10 ಬಿಟ್ ಪ್ಯಾನಲ್ ಬಣ್ಣವನ್ನು ನೀಡುತ್ತದೆ.
ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಒಳಗೆ ಫೋಟೋಗ್ರಾಫಿಗಾಗಿ ಕಂಪನಿಯು ಈ ಫೋನ್‌ನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡುತ್ತಿದೆ. ಇದು 108MP ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್ ಜೊತೆಗೆ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಒಳಗೊಂಡಿದೆ. ಅದೇ ಸಮಯದಲ್ಲಿ ಸೆಲ್ಫಿಗಾಗಿ ನೀವು ಈ ಫೋನ್‌ನಲ್ಲಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೋಡುತ್ತೀರಿ.
ಈ ಫೋನ್‌ನಲ್ಲಿ MediaTek Dimension 6080 ಚಿಪ್‌ಸೆಟ್ ಅನ್ನು ನೀಡುತ್ತಿದೆ. ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವೈ-ಫೈ 5, ಬ್ಲೂಟೂತ್ 5.3 ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಜಿಪಿಎಸ್‌ನಂತಹ ಆಯ್ಕೆಗಳನ್ನು ಹೊಂದಿದೆ. ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸಂಸಾರ್ ಹೊಂದಿರುವ ಈ ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಬ್ಯಾಟರಿಯು 33W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕಂಪನಿಯು ಈ ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 1999 ಯುವಾನ್ (ಸುಮಾರು 23,700 ರೂ.). ಈ ಫೋನ್ ಭಾರತೀಯ ಮಾರುಕಟ್ಟೆಯನ್ನು Poco X6 Neo ಆಗಿ ಪ್ರವೇಶಿಸಬಹುದು. ಕಂಪನಿಯು Redmi Note 13R Pro ಅನ್ನು ಮಿಡ್‌ನೈಟ್ ಬ್ಲ್ಯಾಕ್, ಟೈಮ್ ಬ್ಲೂ ಮತ್ತು ಮಾರ್ನಿಂಗ್ ಲೈಟ್ ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಯಾವ ಬೆಲೆಗೆ ಯಾವ ಹೆಸರಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಕಂಪನಿ ಇನ್ನು ಯಾವುದೇ ಮಾಹಿತಿ ನೀಡಿಲ್ಲ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ