200MP ಕ್ಯಾಮೆರಾದ Redmi Note 13 Series ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?

Updated on 14-Dec-2023
HIGHLIGHTS

ಮುಂಬರಲಿರುವ Redmi Note 13 Series ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

ಈ ಮೂಲಕ ಈ ಸೀರೀಸ್ ಮುಂದಿನ ತಿಂಗಳು ಅಂದ್ರೆ 4ನೇ ಜನವರಿ 2024 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ

ಇದರಲ್ಲಿ Redmi Note 13, Redmi Note 13 Pro ಮತ್ತು Redmi Note 13 Pro+ ವೇರಿಯೆಂಟ್‌ಗಳು ಬಿಡುಗಡೆಯಗಲಿವೆ.

ಭಾರತದಲ್ಲಿ ಅತಿ ಹೆಚ್ಚಾಗಿ ನಿರೀಕ್ಷಿತ ಮತ್ತು ಮುಂಬರಲಿರುವ Xiaomi ಸ್ಮಾರ್ಟ್ಫೋನ್ ಅಂದ್ರೆ Redmi Note 13 Series ಬಿಡುಗಡೆಯ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಈ ಸೀರೀಸ್ ಮುಂದಿನ ತಿಂಗಳು ಅಂದ್ರೆ 4ನೇ ಜನವರಿ 2024 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ ಎಂದು ಕಂಪನಿ ಈಗಾಗಲೇ ತಮ್ಮ ವೆಬ್‌ಸೈಟ್‌ ಮತ್ತು ಟ್ವಿಟ್ಟರ್​​ನಲ್ಲಿ ದೃಢಪಡಿಸಿದೆ. ಕಂಪನಿ ಈ ಸರಣಿಯಲ್ಲಿ ಒಟ್ಟಾರೆಯಾಗಿ 3 ವೇರಿಯೆಂಟ್‌ಗಳನ್ನು ಬಿಡುಗಡೆಗೊಳಿಸಲಿದ್ದು Redmi Note 13, Redmi Note 13 Pro ಮತ್ತು Redmi Note 13 Pro+ ಈ ಪಟ್ಟಿಗೆ ಸೇರಿವೆ. ಈ ಸರಣಿಯಲ್ಲಿನ ಎಲ್ಲಾ ಮೂರು ಮಾದರಿಗಳು 6.67 ಇಂಚಿನ 1.5K ಫುಲ್ HD+ AMOLED ಡಿಸ್ಪ್ಲೇ ಮತ್ತು 16MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾವನ್ನು ಹೊಂದಿವೆ.

Also Read: 395 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಡೇಟಾ ನೀಡುವ ಈ BSNL ಪ್ಲಾನ್ ಬೆಲೆ ಎಷ್ಟು?

Redmi Note 13 Series ಫೋನ್ಗಳ ನಿರೀಕ್ಷಿತ ವಿಶೇಷತೆಗಳು

ಈ ಸರಣಿಯ ಹೈಎಂಡ್ ಸ್ಮಾರ್ಟ್ಫೋನ್ಗಳ ಪ್ರೊಸೆಸರ್ ಸಹ ಕಂಪನಿ ಈಗಾಗಲೇ ಬಿಡುಗಡೆಗೊಳಿಸಿದ್ದು ಪ್ರಸ್ತುತ Redmi Note 13 ಮತ್ತು Redmi Note 13 Pro+ 5G ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 Ultra ಮತ್ತು 6080 ಚಿಪ್ ಹೊಂದಿದ್ದು ಇದರ ಕ್ರಮವಾಗಿ Redmi Note 13 Pro 5G ಸ್ಮಾರ್ಟ್ಫೋನ್ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇವುಗಳ ಮಾಹಿತಿಯನ್ನು ಕಂಪನಿ ಈಗಾಗಲೇ ಟ್ವೀಟ್ ಮತ್ತು ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ನೀಡಿದೆ. ಪ್ರಸ್ತುತ ಇವುಗಳ ಕ್ಯಾಮೆರಾ, ಬ್ಯಾಟರಿ, ಚಾರ್ಜಿಂಗ್ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಮುಂಬರಲಿರುವ ಈ Redmi Note 13 5G Series ಸ್ಮಾರ್ಟ್ಫೋನ್ಗಳಲ್ಲಿ ಟಾಪ್ ಎಂಡ್ ಸ್ಮಾರ್ಟ್ಫೋನ್ Redmi Note 13 Pro+ 5G ಭಾರತೀಯ ರೂಪಾಂತರಗಳು ತಮ್ಮ ಚೀನೀ ಕೌಂಟರ್ ಪಾರ್ಟ್ನಂತೆ (Chinese counterparts) ವಿಶೇಷಣಗಳನ್ನು ಹೊಂದುವ ನಿರೀಕ್ಷೆಗಳಿವೆ. ಈ ಫೋನ್ ಶ್ರೇಣಿಯು ಆಂಡ್ರಾಯ್ಡ್ 13 ಆಧಾರಿತ MIUI 14 ಅಲ್ಲಿ ಕಾರ್ಯನಿರ್ವಹಿಸಲಿದ್ದು 120Hz ನ ರಿಫ್ರೆಶ್ ದರದೊಂದಿಗೆ 6.67 ಇಂಚಿನ 1.5K ಪೂರ್ಣ HD+ AMOLED ಡಿಸ್ಪ್ಲೇಗಳನ್ನು ಹೊಂದಲಿವೆ.

Redmi Note 13 Series ನಿರೀಕ್ಷಿತ ಬೆಲೆ

ಈ ಲೇಟೆಸ್ಟ್ Redmi Note 13 ಬೆಲೆ ಚೀನಾದಲ್ಲಿ CNY 1,199 (ಸುಮಾರು ರೂ. 13,900) ನಿಂದ ಪ್ರಾರಂಭವಾಗುತ್ತದೆ. ಆದರೆ Redmi Note 13 Pro ನ ಬೆಲೆ CNY 1,499 (ಸುಮಾರು ರೂ. 17,400) ನಿಂದ ಪ್ರಾರಂಭವಾಗುತ್ತದೆ. Redmi Note 13 Pro+ ಇದಕ್ಕೆ ವಿರುದ್ಧವಾಗಿ CNY 1,999 (ಸುಮಾರು ರೂ. 22,800) ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಭಾರತೀಯ ರೂಪಾಂತರಗಳು ಇದೇ ರೀತಿಯ ಬೆಲೆಯನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಸೋರಿಕೆಯು ನೋಟ್ 13 ಪ್ರೊ ಮಾದರಿಗಳ ಯುರೋಪಿಯನ್ ಬೆಲೆಯನ್ನು ಸೂಚಿಸುತ್ತದೆ. ಸೋರಿಕೆಯ ಪ್ರಕಾರ Redmi Note 13 Pro ಬೆಲೆ EUR 450 (ಸುಮಾರು ರೂ. 40,700), ಆದರೆ Redmi Note 13 Pro+ ಯು 500 (ಸುಮಾರು ರೂ. 45,000) ಬೆಲೆಯೊಂದಿಗೆ ಬರಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :