ಭಾರತದ ಜನಪ್ರಿಯ ಮತ್ತು ನಂಬರ್ ಒನ್ ಸ್ಮಾರ್ಟ್ಫೋನ್ ಮಾರಾಟದ ಬ್ರಾಂಡ್ Xiaomi ಅಂತಿಮವಾಗಿ ತನ್ನ ಮುಂಬರಲಿರುವ ಹೊಸ Redmi Note 13 ಸರಣಿಯ ಬಿಡುಗಡೆಯನ್ನು ಘೋಷಿಸಿದೆ. Redmi Note 13 ಸರಣಿಯು ಈ ತಿಂಗಳು ಅಂದರೆ ಸೆಪ್ಟೆಂಬರ್ 2023 ರಲ್ಲಿ ಮೊದಲಿಗೆ ಚೀನಾದಲ್ಲಿ ಬಿಡುಗಡೆಯಾಗಲಿದೆ. Redmi ಇದರ ಹೊಸ ಬ್ರ್ಯಾಂಡ್ ಪೋಸ್ಟರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದು Redmi Note 13 Pro+ 5G ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಮುಂಬರುವ Redmi Note 13 ಸರಣಿಗಾಗಿ ದೊಡ್ಡ ಕಂಪನಿಗಳು ಒಟ್ಟಿಗೆ ಕೆಲಸ ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ. ಹೊಸ Redmi Series ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಹೊಸ ಟೀಸರ್ ಪೋಸ್ಟರ್ ಈ ಫೋನ್‌ಗಳ ಕ್ಯಾಮೆರಾ ಮತ್ತು ಪ್ರೊಸೆಸರ್‌ನ ವಿವರಗಳನ್ನು ಸಹ ಬಹಿರಂಗಪಡಿಸಿದೆ. ಫೋನ್ 6.67 ಇಂಚಿನ OLED ಡಿಸ್ಪ್ಲೇಯನ್ನು 1.5K ಜೊತೆಗೆ ತರುವ ನಿರೀಕ್ಷೆಗಳಿದ್ದು ಫಾಸ್ಟ್ 5G ಕನೆಕ್ಟಿವಿಟಿಯನ್ನು ಹೊಂದಿದೆ. Redmi Note 13 Pro+ 5G ಮೊದಲ ಬಾರಿಗೆ 18GB RAM ನೊಂದಿಗೆ ಬರುವ ನಿರೀಕ್ಷೆಯಿದೆ. ಆದರೆ Redmi Note 13 Pro+ 5G ಸ್ಮಾರ್ಟ್ಫೋನ್ 16GB RAM ವರೆಗೆ ಪ್ಯಾಕ್ ಮಾಡುತ್ತದೆ. TENAA ಪಟ್ಟಿಯು ಸ್ಮಾರ್ಟ್ಫೋನ್ ನಾಲ್ಕು RAM ಮತ್ತು ಸ್ಟೋರೇಜ್ ಆಯ್ಕೆಗಳನ್ನು ಸೂಚಿಸಿದೆ.
ಪೋಸ್ಟರ್ ಪ್ರಕಾರ Redmi Note 13 Pro+ 5G ಪ್ರೈಮರಿಯಾಗಿ 200MP ಮೆಗಾಪಿಕ್ಸೆಲ್ Samsung ISOCELL HP3 ಡಿಸ್ಕವರಿ ಆವೃತ್ತಿಯ ಕ್ಯಾಮೆರಾ ಸೆನ್ಸರ್ ಕಸ್ಟಮ್ ಆವೃತ್ತಿಯನ್ನು ಬಳಸಲಾಗುತ್ತದೆ. ಈ ಸೆನ್ಸರ್ 1/1.4 ಇಂಚಿನ ಸೈಜ್ ಹೊಂದಿದೆ. Redmi Note 13 Pro+ ನ ಪೋಸ್ಟರ್ 4nm MediaTek Dimensity 7200-Ultra ನೊಂದಿಗೆ ಬರುವ ಮೊದಲ ಸ್ಮಾರ್ಟ್ಫೋನ್ ಇದಾಗಿದೆ. ಹೊರತಾಗಿ ಹ್ಯಾಂಡ್‌ಸೆಟ್ ಆರ್ಮ್ ಮಾಲಿ-ಜಿ610 ಜಿಪಿಯು ಮತ್ತು ಪವರ್-ಎಫಿಷಿಯಂಟ್ ಎಐ ಪ್ರೊಸೆಸರ್ ಅನ್ನು ಹೊಂದಿರುತ್ತದೆ.
ಇದನ್ನೂ ಓದಿ: ಆಪಲ್‌ನ 'Wonderlust' ಈವೆಂಟ್ ನಾಳೆ ಆರಂಭ: ಬಿಡುಗಡೆಗಳನ್ನು ಲೈವ್‌ಸ್ಟ್ರೀಮ್ ಮಾಡುವುದು ಹೇಗೆ?
ಈ ಸ್ಮಾರ್ಟ್ಫೋನ್ ಫಾಸ್ಟ್ ಮತ್ತು ಅತ್ಯುತ್ತಮವಾದ 200MP ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾವನ್ನು ಹೊಂದಿರುತ್ತದೆ. ವರದಿಗಳ ಪ್ರಕಾರ Redmi Note 13 Pro+ 5G ಸ್ಮಾರ್ಟ್ಫೋನ್ 200MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸಹ ಹೊಂದಿರಬಹುದು. Redmi ಹೊಸ ಸರಣಿಗಾಗಿ Xiaomi, MediaTek, Redmi ಜೊತೆಗೆ ಕೆಲಸ ಮಾಡಿದೆ ಮತ್ತು ಫೋನ್‌ನಲ್ಲಿನ ಮೂಲಭೂತ ಇಮೇಜಿಂಗ್ ಆರ್ಕಿಟೆಕ್ಚರ್ ಅನ್ನು ಬದಲಾಯಿಸಲು ಜಂಟಿ ಆಪ್ಟಿಮೈಸೇಶನ್ ಅನ್ನು ನಡೆಸುತ್ತಿದೆ. ಮತ್ತು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡನ್ನೂ ಫೋನ್‌ನಲ್ಲಿ ಅಪ್‌ಗ್ರೇಡ್ ಮಾಡಲಾಗುತ್ತಿದೆ. ಇದಲ್ಲದೇ Xiaomi ಯ ಇಮೇಜಿಂಗ್ ತಂತ್ರಜ್ಞಾನದಂತಹ ಇತರ ಮಾಡ್ಯೂಲ್‌ಗಳನ್ನು ಸಂಯೋಜಿಸುವ ಮೂಲಕ ಸ್ಮಾರ್ಟ್ಫೋನ್ ಶ್ರೇಣಿಯು ಪ್ರೀಮಿಯಂ ಫೋಟೋಗ್ರಫಿ ಅನುಭವವನ್ನು ನೀಡುತ್ತದೆ.