Xiaomi ಶೀಘ್ರದಲ್ಲೇ ತನ್ನ Redmi Note 13 ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಕಂಪನಿಯು ಮೂರು ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. Redmi Note 13 Pro ಸ್ಮಾರ್ಟ್‌ಫೋನ್ ಅನ್ನು 200MP ಪ್ರೈಮರಿ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಒದಗಿಸಬಹುದು. ಕಂಪನಿಯು Redmi Note 13 5G ಸರಣಿಯ ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. ಈ ಫೋನ್‌ಗಳು ಜನವರಿ 4 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ವಾಸ್ತವವಾಗಿ ಈ ಫೋನ್‌ಗಳನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಒಂದಿಷ್ಟು ಬೆಸ್ಟ್ ಫೀಚರ್ಗಳ ಬಗ್ಗೆ ಮಾಹಿತಿ ಇದೆ.
Also Read: 8GB RAM ಮತ್ತು Dimensity 6080 ಪ್ರೊಸೆಸರ್‌ನ Lava Storm 5G ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ
ಈ ಫೋನ್‌ಗಳು ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. ಎಲ್ಲಡೆ ಈಗಲೇ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಪ್ರಕಾರ Redmi Note 13 Pro 5G ಬಾಕ್ಸ್ ಬೆಲೆ 32,999 ರೂಗಳಿಗೆ ನಿರೀಕ್ಷಿಸಬಹುದು. ಈ ಬೆಲೆ ಫೋನ್‌ನ 12GB RAM + 256GB ಸ್ಟೋರೇಜ್ ರೂಪಾಂತರವಾಗಿದೆ. ಏಕೆಂದರೆ ಚೀನಾದಲ್ಲಿ ಕಂಪನಿಯು ಈ ಫೋನ್ ಅನ್ನು 1799 ಯುವಾನ್ (ಅಂದಾಜು ರೂ. 21,500) ಬೆಲೆಗೆ ಬಿಡುಗಡೆ ಮಾಡಿದೆ.
ಮುಂಬರಲಿರುವ ಈ ಸ್ಮಾರ್ಟ್ಫೋನ್ ಸುಮಾರು 25,000 ಸಾವಿರದವರೆಗಿನ ಬಜೆಟ್‌ನಲ್ಲಿ ಈ ಫೋನ್ ಭಾರತದಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲಾದ್ರ್ ಪ್ರಸ್ತುತ ಜಾಹೀರಾಗಳಿಂದ ಈ ಮಾಹಿತಿ ಸ್ಪಷ್ಟವಾಗಿದೆ. ಆದರೆ ಅದರ ಪ್ಲಸ್ ರೂಪಾಂತರ ಅಂದರೆ Redmi Note 13 Pro+ 5G ಸ್ಮಾರ್ಟ್‌ಫೋನ್ ರೂ 25 ಸಾವಿರಕ್ಕಿಂತ ಹೆಚ್ಚಿನ ವಿಭಾಗದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಈ ಸರಣಿಯಲ್ಲಿ ಸ್ಟ್ಯಾಂಡರ್ಡ್ ರೂಪಾಂತರವನ್ನು ಸಹ ಬಿಡುಗಡೆ ಮಾಡಲಿಬಹುದು.
ಮುಂಬರಲಿರುವ Redmi Note 13 Pro ಸೀರೀಸ್ ವಿಶೇಷಣಗಳು ಒಂದಕ್ಕೊಂದು ಹೋಲುತ್ತವೆ. ಈ ಫೋನ್‌ಗಳಲ್ಲಿ ಕಂಪನಿಯು 6.67 ಇಂಚಿನ AMOLED ಡಿಸ್ಪ್ಲೇಯನ್ನು ಒದಗಿಸುತ್ತದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಬಳಸಲಾಗುವುದು. Qualcomm Snapdragon 7s Gen 2 ಪ್ರೊಸೆಸರ್ ಅನ್ನು Pro ವೇರಿಯಂಟ್‌ನಲ್ಲಿ ಮತ್ತು MediaTek Dimensity 7200 Ultra ಅನ್ನು ಪ್ಲಸ್ ರೂಪಾಂತರದಲ್ಲಿ ನೀಡಬಹುದು. ಆಂಡ್ರಾಯ್ಡ್ 13 ಆಧಾರಿತ MIUI 14 ನೊಂದಿಗೆ ಸ್ಮಾರ್ಟ್ಫೋನ್ ಪ್ರಾರಂಭವಾಗುತ್ತವೆ. ಇದು 200MP ಮುಖ್ಯ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ