Redmi Note 13 Series ಮತ್ತು Vivo X100 Series ಬಿಡುಗಡೆಗೆ ಡೇಟಾ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

Updated on 28-Dec-2023
HIGHLIGHTS

ಮುಂಬರಲಿರುವ Redmi Note 13 Series ಮತ್ತು Vivo X100 Series ಸ್ಮಾರ್ಟ್‌ಫೋನ್‌ಗಳು - 2024

ಲೇಟೆಸ್ಟ್ ಫೀಚರ್ಗಳೊಂದಿಗೆ ಆಕರ್ಷಕ ಡಿಸೈನಿಂಗ್‌ನೊಂದಿಗೆ ಉತ್ತಮ ಬೆಲೆ ಮತ್ತು ಆಫರ್ಗಳೊಂದಿಗೆ ಬರುವ ನಿರೀಕ್ಷೆಗಳಿವೆ.

Redmi ಮತ್ತು Vivo ಫೋನ್‌ಗಳು ಒಂದೇ ದಿನ 4ನೇ ಜನವರಿ 2024 ರಂದು ಬಿಡುಗಡೆಗೊಳಿಸಲು ಈಗಾಗಲೇ ದಿನಾಂಕವನ್ನು ನೀಡಿವೆ.

ಭಾರತದಲ್ಲಿ ಅತಿ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ ಬ್ರಾಂಡ್‌ಗಳಲ್ಲಿ Redmi ಮತ್ತು Vivo ಮುಂದೆ ನಿಂತಿವೆ. ಹೊಸ 2024 ವರ್ಷದಲ್ಲಿ ಈ Redmi ಮತ್ತು Vivo ಕಂಪನಿಗಳು ತಮ್ಮ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಒಂದೇ ದಿನ 4ನೇ ಜನವರಿ 2024 ರಂದು ಬಿಡುಗಡೆಗೊಳಿಸಲು ಈಗಾಗಲೇ ದಿನಾಂಕವನ್ನು ನೀಡಿವೆ. ಈ ಮುಂಬರಲಿರುವ Redmi Note 13 Series ಮತ್ತು Vivo X100 Series ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಮತ್ತು ಲೇಟೆಸ್ಟ್ ಫೀಚರ್ಗಳೊಂದಿಗೆ ಆಕರ್ಷಕ ಡಿಸೈನಿಂಗ್‌ನೊಂದಿಗೆ ಉತ್ತಮ ಬೆಲೆ ಮತ್ತು ಆಫರ್ಗಳೊಂದಿಗೆ ಬರುವ ನಿರೀಕ್ಷೆಗಳಿವೆ.

Also Read: ಉಚಿತ Disney+ Hotstar ಜೊತೆಗೆ Unlimited ಕರೆ ಮತ್ತು 5G ಡೇಟಾ ನೀಡುವ ಈ Airtel ಪ್ಲಾನ್ ಬೆಲೆ ಎಷ್ಟು?

Redmi Note 13 Series ನಿರೀಕ್ಷಿತ ಫೀಚರ್ಗಳು

ಈ ಸ್ಮಾರ್ಟ್ಫೋನ್ ಸರಣಿಯ ಕೆಲವು ವರದಿಗಳ ಪ್ರಕಾರ ಫೋನ್ 6.67 ಇಂಚಿನ ಪಂಚ್-ಹೋಲ್ FHD+ 120Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಪ್ರೈಮರಿ 108MP ಸೆನ್ಸರ್ ಲೆನ್ಸ್ ಹೊಂದಿದ್ದು ಮತ್ತೊಂದು 8MP ಅಲ್ಟ್ರಾವೈಡ್ ಹಾಗೂ ಕೊನೆಯ 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 16MP ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ.

ಇದು LPDDR4x RAM ಮತ್ತು UFS 2.2 ಸ್ಟೋರೇಜ್‌ನೊಂದಿಗೆ MediaTek Dimensity 6080 ಚಿಪ್‌ನೊಂದಿಗೆ ಬರುವ ನಿರೀಕ್ಷೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೊ SD ಕಾರ್ಡ್ ಸ್ಲಾಟ್‌ನೊಂದಿಗೆ ಬರುತ್ತದೆ. ಇದು 33W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

Vivo X100 Series ನಿರೀಕ್ಷಿತ ಫೀಚರ್ಗಳು

Vivo X100 ಮತ್ತು X100 Pro ಎರಡೂ ಸ್ಮಾರ್ಟ್‌ಫೋನ್‌ಗಳು 6.78 ಇಂಚಿನ ಕರ್ವ್ OLED ಡಿಸ್ಪ್ಲೇಯನ್ನು 1.5K ರೆಸಲ್ಯೂಶನ್ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 3000 ನಿಟ್‌ಗಳನ್ನು ತಲುಪುವ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರ ಮುಂಭಾಗದಲ್ಲಿರುವ ಪಂಚ್-ಹೋಲ್ ಕಟೌಟ್‌ನಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಪವರ್ ಮಾಡಲು ಡೈಮೆನ್ಸಿಟಿ 9300 ಚಿಪ್ ಜೊತೆಗೆ LPDDR5x RAM ಮತ್ತು UFS 4.0 ಸ್ಟೋರೇಜ್ ಹೊಂದಿದೆ.

ಫೋನ್ ಆಂಡ್ರಾಯ್ಡ್ 14 ಅನ್ನು ಬಾಕ್ಸ್‌ನಿಂದ ಹೊರಗೆ ಪಡೆಯುತ್ತೀರಿ. ಈ ಎರಡು ಮಾದರಿಗಳಲ್ಲಿ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು 50-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ (OIS) ಲೆನ್ಸ್ ಜೊತೆಗೆ ಅಲ್ಟ್ರಾ-ವೈಡ್ ಲೆನ್ಸ್ (150° FOV) ಮತ್ತು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (OIS) ಹೊಂದಿದೆ. ಕೊನೆಯದಾಗಿ 120W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಗಳಿವೆ.

Redmi Note 13 ಮತ್ತು Vivo X100 Series ಬೆಲೆ

ಈ ಸ್ಮಾರ್ಟ್ಫೋನ್ ಬ್ರಾಂಡ್‌ಗಳ ಸುಮಾರು 5000 ರೂಗಳಿಂದ 50,000 ರೂಗಳವರೆಗಿನ ಶ್ರೇಣಿಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಹೊಂದಿವೆ. ಪ್ರಸ್ತುತ ಈ ಸ್ಮಾರ್ಟ್ಫೋನಗಳ ಕೆಲವೊಂದು ಫೀಚರ್ ಮತ್ತು ಬೆಲೆ ಬಿಡುಗಡೆಯಾಗಿದ್ದು ಸದ್ಯಕ್ಕೆ ಇದರ ಯಾವುದೇ ಮಾಹಿತಿಗಳು ಖಚಿತವಾಗಿಲ್ಲದ ಕಾರಣ ಬಿಡುಗಡೆವರೆಗೆ ಕಾಯುವುದು ನಮ್ಮ ನಿಮ್ಮ ಅನಿವಾರ್ಯವಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :