200MP ಕ್ಯಾಮೆರಾದ Redmi Note 13 5G Series ಇಂದು ಲಾಂಚ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

200MP ಕ್ಯಾಮೆರಾದ Redmi Note 13 5G Series ಇಂದು ಲಾಂಚ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?
HIGHLIGHTS

ಭಾರತದಲ್ಲಿ ಇಂದು Redmi Note 13 5G Series ಬಿಡುಗಡೆಯಾಗಲು ಸಜ್ಜಾಗಿದೆ

Redmi Note 13 5G, Redmi Note 13 5G Pro ಮತ್ತು Redmi Note 13 5G Pro+ ಬಿಡುಗಡೆಯಾಗಲಿವೆ

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ AMOLED ಡಿಸ್‌ಪ್ಲೇಯನ್ನು ಹೊಂದಿವೆ

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ Redmi ಕಂಪನಿ ಬಹು ನಿರೀಕ್ಷೆಯಲ್ಲಿದ್ಧ ಸ್ಮಾರ್ಟ್ಫೋನ್ ಸರಣಿಯನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಕಂಪನಿ Redmi Note 13 5G Series ಅನ್ನು ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ Redmi Note 13 5G, Redmi Note 13 5G Pro ಮತ್ತು Redmi Note 13 5G Pro+ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು 4ನೇ ಜನವರಿ 2024 ರಂದು ಮಧ್ಯಾಹ್ನ 12:00ಕ್ಕೆ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಈವೆಂಟ್ ವೀಕ್ಷಿಸಬಹುದು. ಪ್ರಸ್ತುತ ಈ ಲೇಖನದಲ್ಲಿ ಕೇವಲ Redmi Note 13 5G ಮಾಹಿತಿಯನ್ನು ನಿರೀಕ್ಷಿಸಿ ವಿವರಿಸಲಾಗಿದೆ.

Also Read: ಭಾರತೀಯ ರೈಲ್ವೆಯ ಎಲ್ಲಾ ಸೇವೆಯನ್ನು ಒಂದೇ ವೇದಿಕೆಯಲ್ಲಿ ತರಲು Super App ಅಪ್ಲಿಕೇಶನ್ ಶುರು

Redmi Note 13 5G ಡಿಸ್ಪ್ಲೇ

ಈ ಸರಣಿಯ ಫೋನ್ಗಳು 93.3 ಶೇಕಡಾ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಕರ್ವ್ ಮತ್ತು ಸೂಪರ್ ಥಿನ್ ಬೆಜೆಲ್‌ಗಳೊಂದಿಗೆ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು Xiaomi ಈಗಾಗಲೇ ದೃಢಪಡಿಸಿದೆ. ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ AMOLED ಡಿಸ್‌ಪ್ಲೇಯನ್ನು ಹೊಂದಿವೆ ಎಂದು ಟೀಸರ್‌ಗಳು ಖಚಿತಪಡಿಸುತ್ತವೆ.

Redmi Note 13 5G Series to launch today

Redmi Note 13 5G ಡಿಸೈನ್

Redmi Note 13 ಸರಣಿಯ ಟೀಸರ್‌ಗಳು Note 13 Pro ಮತ್ತು Note 13 Pro+ ಮಾದರಿಗಳಲ್ಲಿ ಸುಂದರವಾದ ನೀಲಿಬಣ್ಣದ ಛಾಯೆಯನ್ನು ಬಹಿರಂಗಪಡಿಸುತ್ತವೆ. ಟೀಸರ್ ಎರಡು ಮಾದರಿಗಳು ನೀಡುವ ನೇರಳೆ ಬಣ್ಣದ ರೂಪಾಂತರಗಳನ್ನು ಸಹ ಬಹಿರಂಗಪಡಿಸುತ್ತದೆ. ಹೆಚ್ಚುವರಿಯಾಗಿ Redmi Note 13 5G ಸರಣಿಯು ಕೇವಲ 7.6 mm ದಪ್ಪ ಮತ್ತು 173.5 ಗ್ರಾಂ ತೂಕದೊಂದಿಗೆ ಸೂಪರ್ ತೆಳ್ಳಗಿರುತ್ತದೆ ಎಂದು ದೃಢಪಡಿಸಿದೆ. Redmi Note 13 5G ಆರ್ಕ್ಟಿಕ್ ವೈಟ್ ಬಣ್ಣದ ಆಯ್ಕೆಯಲ್ಲಿ ಬಂದ್ರೆ Redmi Note 13 Pro ಕೊರಲ್ ಪರ್ಪಲ್ ಮತ್ತು ಫ್ಯೂಶನ್ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಬರುತ್ತದೆ.

Redmi Note 13 5G ಚಿಪ್ಸೆಟ್

Redmi Note 13 5G ಸುಮಾರು 20GB RAM ವರೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಗಮನಾರ್ಹವಾಗಿ ಇದು ಕಂಪನಿಯ ವಿಸ್ತೃತ RAM ವೈಶಿಷ್ಟ್ಯವನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ಗಳು ಗರಿಷ್ಠ 12GB RAM ಆನ್‌ಬೋರ್ಡ್‌ನೊಂದಿಗೆ ಬರಬಹುದು ಎಂದು ನಿರೀಕ್ಷಿಸಬಹುದು ಮತ್ತು ಉಳಿದ 8GB RAM ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿನ ಸ್ಟೋರೇಜ್ ಸ್ಥಳದಿಂದ RAM ಎರವಲು ಪಡೆಯಲಾಗುತ್ತದೆ. ಹೆಚ್ಚುವರಿಯಾಗಿ Redmi Note 13 Pro ಮತ್ತು Redmi Note 13 Pro+ ಬಹುಶಃ Qualcomm Snapdragon ಚಿಪ್‌ಸೆಟ್‌ನಿಂದ ಚಾಲಿತವಾಗಲಿರುವ ನಿರೀಕ್ಷೆಗಳಿವೆ.

ರೆಡ್ಮಿ Note 13 5G ಬ್ಯಾಟರಿ

Redmi Note 13 5G ಸರಣಿಯಲ್ಲಿನ ಬ್ಯಾಟರಿ ಗಾತ್ರವನ್ನು Xiaomi ಇನ್ನೂ ದೃಢೀಕರಿಸದಿದ್ದರೂ ಸ್ಮಾರ್ಟ್‌ಫೋನ್‌ಗಳು 33W ಟರ್ಬೊ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ ಎಂದು ಕಂಪನಿ ದೃಢಪಡಿಸಿದೆ. ಇದು ಯಾವ ರೀತಿಯ ಚಾರ್ಜಿಂಗ್ ವೇಗವನ್ನು ತರುತ್ತದೆ ಎಂದು ನಮಗೆ ಪ್ರಸ್ತುತ ತಿಳಿದಿಲ್ಲ ಆದರೆ ಟ್ವಿಟ್ಟರ್ ಟೀಸರ್‌ಗಳಿಂದ ಕಂಪನಿ ಟರ್ಬೊ ಚಾರ್ಜ್ ಬ್ಯಾಟರಿಯನ್ನು 0 ರಿಂದ 100 ಪ್ರತಿಶತದಷ್ಟು 33 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ತಿಯಾಗಿ ಮಾಡುತ್ತದೆಂದು ನಿರೀಕ್ಷಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo