16GB RAM ಮತ್ತು Powerful ಪ್ರೊಸೆಸರ್‌ನೊಂದಿಗೆ Redmi K70 Series ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ

16GB RAM ಮತ್ತು Powerful ಪ್ರೊಸೆಸರ್‌ನೊಂದಿಗೆ Redmi K70 Series ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ
HIGHLIGHTS

Redmi K70 ಸರಣಿಯ ಸ್ಮಾರ್ಟ್ಫೋನ್ಗಳನ್ನು ಚೀನಾದಲ್ಲಿ ಅಧಿಕೃತವಾಗಿ ಕೈಗೆಟಕುವ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ.

ಹೊಸ OLED ಡಿಸ್ಪ್ಲೇ, ಹೈಪರ್ಓಎಸ್ ಕಸ್ಟಮ್ ಸ್ಕಿನ್ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತವೆ

ಭಾರತದಲ್ಲಿ ಈ ಫೋನ್ಗಳ ಬಿಡುಗಡೆಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ

ಅತಿ ನಿರೀಕ್ಷಿತ ಮತ್ತು ಹೆಚ್ಚು ಸದ್ದು ಮಾಡುತ್ತಿದ್ದ Redmi K70 Series ಸ್ಮಾರ್ಟ್ಫೋನ್ಗಳನ್ನು ಕಂಪನಿ 29ನೇ ನವೆಂಬರ್ 2023 ರಂದು ಚೀನಾದಲ್ಲಿ ಅಧಿಕೃತವಾಗಿ ಕೈಗೆಟಕುವ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಶ್ರೇಣಿಯು ಒಟ್ಟು 3 ಮಾದರಿ Redmi K70, Redmi K70 Pro ಮತ್ತು Redmi K70e ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನೊಂದಿಗೆ ಉತ್ತಮ RAM ಮತ್ತು ಉತ್ತಮ ಬ್ಯಾಟರಿಯೊಂದಿಗೆ ನಡೆಯುತ್ತದೆ. ಆದರೆ Redmi K70e ಮಾತ್ರ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಭಾರತದಲ್ಲಿ ಈ ಫೋನ್ಗಳ ಬಿಡುಗಡೆಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಹೊಸ OLED ಡಿಸ್ಪ್ಲೇ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಈ ಸ್ಮಾರ್ಟ್ಫೋನ್ಗಳ ಬಗ್ಗೆ ತಿಳಿಯೋಣ.

Also Read: AMOLED ಡಿಸ್ಪ್ಲೇಯೊಂದಿಗೆ Noise ColorFit Pro ಸೀರೀಸ್‌ನ ಸ್ಮಾರ್ಟ್ ವಾಚ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Redmi K70e ಸ್ಮಾರ್ಟ್ಫೋನ್ ವಿವರಗಳು  

ಮೊದಲಿಗೆ ಈ ಸರಣಿಯ Redmi K70e ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುವುದಾದರೆ 6.67 ಇಂಚಿನ 1.5K OLED 12 ಬಿಟ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಫೋನ್ OIS ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು LED ಫ್ಲ್ಯಾಷ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ ಮುಂಭಾಗದ ಪಂಚ್  ಹೋಲ್ ಕಟೌಟ್‌ನಲ್ಲಿ 16MP ಸೇಸೆನ್ಸೋರ್ ಅನ್ನು ಹೊಂದಿದೆ. 

ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಪ್ರೊಸೆಸರ್‌ನೊಂದಿಗೆ ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ 16GB LPDDR5X RAM ಮತ್ತು 1TB UFS 4.0 ಸ್ಟೋರೇಜ್ ಅನ್ನು ಹೊಂದಿದ್ದು ಆಂಡ್ರಾಯ್ಡ್ 14 ಆಧಾರಿತ ಹೈಪರ್‌ಓಎಸ್ ಕಸ್ಟಮ್ ಸ್ಕಿನ್‌ನಿಂದ ಹೊರಗೆ ಚಲಿಸುತ್ತದೆ. ಕೊನೆಯದಾಗಿ ಫೋನ್ 90W ಫಾಸ್ಟ್ ವೈರ್ಡ್ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತಾ 5G, 4G LTE, Wi-Fi, ಬ್ಲೂಟೂತ್, GPS, ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಿಂಕ್‌ಗಾಗಿ USB ಟೈಪ್-C ಪೋರ್ಟ್ ಹೊಂದಿದೆ.

Redmi K70 Series

Redmi K70 ಮತ್ತು Redmi K70 Pro ಸ್ಮಾರ್ಟ್‌ಫೋನ್‌ಗಳ ವಿವರಗಳು

ಇವೇರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ 6.67 ಇಂಚಿನ 2K OLED 12-ಬಿಟ್ TCL CSOT C8 ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‌ನೊಂದಿಗೆ ಡಾಲ್ಬಿ ವಿಷನ್, HDR ವಿಷನ್ ಕಟ್‌ಔಟ್ ಡಿಸ್ಪ್ಲೇಯನ್ನು ಹೊಂದಿವೆ. ಕ್ಯಾಮೆರಾದಲ್ಲಿ Redmi K70 ಫೋನ್ 50MP ಪ್ರೈಮರಿ ಸೆನ್ಸರ್ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇವೇರಡರ ಮುಂಭಾಗದಲ್ಲಿ 16MP ಕ್ಯಾಮರಾ ಸೆನ್ಸರ್ ಅನ್ನು ಹೊಂದಿವೆ. ಆದರೆ Redmi K70 Pro ಫೋನ್ ನಿಮಗೆ OIS ಜೊತೆಗೆ 50MP ಪ್ರೈಮರಿ ಸೆನ್ಸರ್ ಮತ್ತು 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP 2X ಪೋಟ್ರೇಟ್ ಲೆನ್ಸ್ ಅನ್ನು ಒಳಗೊಂಡಿದೆ.

Redmi K70 ಸ್ಮಾರ್ಟ್ಫೋನ್ Qualcomm Snapdragon 8 Gen 2 ಚಿಪ್‌ಸೆಟ್‌ನೊಂದಿಗೆ ಬಂದ್ರೆ Redmi K70 Pro ಫೋನ್ Qualcomm Snapdragon 8 Gen 3 ಅನ್ನು ಹೊಂದಿದ್ದು 16GB LPDDR5x RAM ಮತ್ತು ಸುಮಾರು 1TB UFS 4.0 ಸ್ಟೋರೇಜ್ ಅನ್ನು ಹೊಂದಿದೆ. ಇದರೊಂದಿಗೆ ಫೋನ್ ಹೆಚ್ಚುವರಿಯಯಾಗಿ 4GB ವರ್ಚುವಲ್ RAM ಗೆ ಬೆಂಬಲವನ್ನು ಹೊಂದಿದೆ. ಇವೇರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ HyperOS ಕಸ್ಟಮ್ ಸ್ಕಿನ್‌ನಿಂದ ನಡೆಯುತ್ತವೆ. ಇವೇರಡು ಸ್ಮಾರ್ಟ್‌ಫೋನ್‌ಗಳು 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿವೆ. ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಟಿರಿಯೊ ಸ್ಪೀಕರ್‌ಗಳು, ಹ್ಯಾಪ್ಟಿಕ್‌ಗಳಿಗಾಗಿ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು ಐಆರ್ ಬ್ಲಾಸ್ಟರ್ ಹೊಂದಿವೆ. 

Redmi K70 Series ಫೋನ್‌ಗಳ ಬೆಲೆ ಮತ್ತು ಲಭ್ಯತೆ 

12GB RAM 256GB ಸ್ಟೋರೇಜ್ RMB 2499 (ಭಾರತದಲ್ಲಿ ರೂ.29,900)

16GB RAM 256GB ಸ್ಟೋರೇಜ್ RMB 2699 (ಭಾರತದಲ್ಲಿ ರೂ.32,300)

16GB RAM 512GB ಸ್ಟೋರೇಜ್ RMB 2999 (ಭಾರತದಲ್ಲಿ ರೂ.35,900)

16GB RAM 1024GB ಸ್ಟೋರೇಜ್ RMB 3399 (ಭಾರತದಲ್ಲಿ ರೂ.40,900)

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo