ಭಾರತದಲ್ಲಿ ಸ್ಮಾರ್ಟ್ಫೋನ್ ಮಾರಾಟಗಾರರಲ್ಲಿ ಒಬ್ಬರಾದ Redmi ತನ್ನ ಮುಂಬರಲಿರುವ Redmi K60 Ultra ಸ್ಮಾರ್ಟ್ಫೋನ್ ಅನ್ನು ಅಂತಿಮವಾಗಿ 15K OLED ಸ್ಕ್ರೀನ್ ಮತ್ತು ಡೈಮೆನ್ಸಿಟಿ 9200 ಪ್ರೊಸೆಸರ್ ಜೊತೆಗೆ 50MP ಕ್ಯಾಮೆರಾವನ್ನು OIS ಕ್ಯಾಮೆರಾದೊಂದಿಗೆ ಪ್ರೀಮಿಯಂ ಫೀಚರ್ಳನ್ನು ಪ್ಯಾಕ್ ಮಾಡಿ ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಜೊತೆಗೆ ಈ ಹ್ಯಾಂಡ್‌ಸೆಟ್ ಅನ್ನು ಚೀನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ Xiaomi MIX Fold 3, Xiaomi Band 8 Pro ಮತ್ತು Xiaomi Pad 6 ಅನ್ನು ಬಿಡುಗಡೆ ಮಾಡಿದೆ. ಅಲ್ಲಿ ಅಡ್ವಾನ್ಸ್ Xiaomi CyberDog 2 ಅನ್ನು ಸಹ ಬಿಡುಗಡೆಗೊಳಿಸಿದೆ. ಆದರೆ ಭಾರತದಲ್ಲಿ ಈ Redmi K60 Ultra ಸ್ಮಾರ್ಟ್ಫೋನ್ ಬಿಡುಗಡೆಯ ಕುರಿತು Xiaomi ಇನ್ನು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಸದ್ಯಕ್ಕೆ Redmi K60 Ultra ಸ್ಮಾರ್ಟ್ಫೋನ್ ಚೀನಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಸ್ಮಾರ್ಟ್‌ಫೋನ್‌ನ ಜಾಗತಿಕ ಮಾರಾಟವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಚೀನಾದಲ್ಲಿ ಬಿಡುಗಡೆಯಾದ Redmi K60 Ultra ಸ್ಮಾರ್ಟ್‌ಫೋನ್ ಇದರ ಮೊದಲ 24GB ಸ್ಮಾರ್ಟ್ಫೋನ್ ಬೆಳೆಯನ್ನು ಭಾರತಕ್ಕೆ ಹೋಲಿಸಿ ನೋಡುವುದುದಾದರೆ ಇದರ ಬೆಲೆಗಳು ಈ ಕೆಳಗಿನಂತಿವೆ.
12GB – 256GB > CNY 2,599 (ಸುಮಾರು ₹30,000 ರೂಗಳು)
16GB – 256GB > CNY 2,799 (ಸುಮಾರು ₹32,000 ರೂಗಳು)
16GB – 512GB > CNY 2,999 (ಸುಮಾರು ₹34,350 ರೂಗಳು)
16GB – 1024GB > CNY 3,299 (ಸುಮಾರು ₹38,000 ರೂಗಳು)
24GB – 1024GB > CNY 3,599 (ಸುಮಾರು ₹41,200 ರೂಗಳು)
ಈ ಹೊಸ Redmi K60 Ultra ಸ್ಮಾರ್ಟ್ಫೋನ್ 6.67 ಇಂಚಿನ AMOLED ಸ್ಕ್ರೀನ್ ಅನ್ನು 144Hz ರಿಫ್ರೆಶ್ ರೇಟ್ ಜೊತೆಗೆ ಬರುತ್ತದೆ. Redmi K60 Ultra ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಅನ್ನು 24GB LPDDR5X RAM ಜೊತೆಗೆ ಚಾಲಿಸುತ್ತದೆ. Xiaomi ಈ ಫೋನ್ ವೈಲ್ಡ್‌ಬೂಸ್ಟ್ 2.0 ತಂತ್ರಜ್ಞಾನದೊಂದಿಗೆ ಬರಲಿದೆ ಎಂದು ಘೋಷಿಸಿದೆ. ಇದು ಸ್ಮಾರ್ಟ್‌ಫೋನ್ ಅನ್ನು 3 ಡಿಗ್ರಿ ಸೆಲ್ಸಿಯಸ್‌ನಿಂದ ತಂಪಾಗಿರಿಸುತ್ತದೆ ಎಂದು ಕಂಪನಿ ಹೇಳುತ್ತಿದೆ.
ಅಲ್ಲದೆ Redmi K60 Ultra ಸ್ಮಾರ್ಟ್ಫೋನ್ 50 ಮೆಗಾಪಿಕ್ಸೆಲ್ IMX800 ಸೋನಿ ಸೆನ್ಸರ್ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ನೇತೃತ್ವದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. Redmi K60 Ultra ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ ಡಿಸ್ಪ್ಲೇಯ ಮೇಲ್ಭಾಗದಲ್ಲಿ ಪಂಚ್-ಹೋಲ್ ವಿನ್ಯಾಸದಲ್ಲಿ ಇರಿಸಲಾದ 16-ಮೆಗಾಪಿಕ್ಸೆಲ್ ಅನ್ನು ಹೊಂದಿರುತ್ತದೆ.