Redmi K30S ಸ್ಮಾರ್ಟ್ಫೋನ್ 144Hz ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ

Redmi K30S ಸ್ಮಾರ್ಟ್ಫೋನ್ 144Hz ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ
HIGHLIGHTS

Redmi K30S ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ

Redmi K30S ಫೋನ್ Mi 10T ಯ ರೀಬ್ರಾಂಡ್ ಆಗಿ ಕಾಣುವ ನಿರೀಕ್ಷೆ

Redmi K30S ಸ್ನಾಪ್ಡ್ರಾಗನ್ 865 ಪ್ರೊಸೆಸರ್ನೊಂದಿಗೆ ಬರುತ್ತದೆ.

ಕಳೆದ ಕೆಲವು ವಾರಗಳ ಸೋರಿಕೆ ಮತ್ತು ಟೀಸರ್ಗಳ ನಂತರ Redmi K30S ಅಧಿಕೃತವಾಗಿ ಬಿಡುಗಡೆಯಾಗಿದೆ. ಇದು ಈಗಾಗಲೇ ಬಿಡುಗಡೆಯಾಗಿರುವ Redmi K30, Redmi K30 Pro ಮತ್ತು ಇತ್ತೀಚೆಗೆ ಬಿಡುಗಡೆಯಾದ Redmi K30 Ultra ಸ್ಮಾರ್ಟ್ಫೋನ್ ಬಿಡುಗಡೆಯಾದ ನಂತರ ಇವುಗಳ ಹೈ-ಎಂಡ್ ಸ್ಪೆಸಿಫಿಕೇಶನ್‌ಗಳೊಂದಿಗೆ ಕಂಪನಿ ಈ Redmi K30S ಸ್ಮಾರ್ಟ್ಫೋನ್ ಅನ್ನು 144Hz ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆಗೊಳಿಸಿದೆ.

Redmi K30S ಅನ್ನು ಚೀನಾದಲ್ಲಿ Mi 10T ಯ ಮರುಬಳಕೆಯ ಮಾದರಿಯಾಗಿ ಬಿಡುಗಡೆ ಮಾಡಲಾಗಿದ್ದು ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು ಮತ್ತು ಇದೀಗ ಚೀನಾದಲ್ಲಿ ಲಭ್ಯವಿತ್ತು. ಫೋನ್ 144Hz ಡಿಸ್ಪ್ಲೇ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 SoC ಯೊಂದಿಗೆ ಬರುತ್ತದೆ. ಇಮೇಜ್ಗಳನ್ನು ಕ್ಲಿಕ್ ಮಾಡಲು ಟ್ರಿಪಲ್ ರಿಯರ್ ಕ್ಯಾಮೆರಾಗಳಿವೆ. Redmi K30S ಅನ್ನು ಚೀನಾದಲ್ಲಿ 128GB ಸ್ಟೋರೇಜ್ ರೂಪಾಂತರಕ್ಕೆ ಸಿಎನ್‌ವೈ 2,599 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು 256GB ರೂಪಾಂತರವು ಸಿಎನ್‌ವೈ 2,799 ಬೆಲೆಯಲ್ಲಿ ಲಭ್ಯವಿದೆ.

ನವೆಂಬರ್ 11 ರಿಂದ ಈ ಫೋನ್ ಚೀನಾದಲ್ಲಿ ಇಂಟರ್ ಸ್ಟೆಲ್ಲಾರ್ ಬ್ಲ್ಯಾಕ್ ಮತ್ತು ಮೂನ್ಲೈಟ್ ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ ಎಂದು ಘೋಷಿಸಲಾಗಿದೆ. ಈ ಸಾಧನದ ವಿಶೇಷಣಗಳಿಗೆ ಸಂಬಂಧಿಸಿದಂತೆ Redmi K30S ಸ್ನಾಪ್ಡ್ರಾಗನ್ 865 ಪ್ರೊಸೆಸರ್ನೊಂದಿಗೆ ಬರುತ್ತದೆ. ಇದನ್ನು 256GB RAM ನೊಂದಿಗೆ ಜೋಡಿಸಲಾಗಿದೆ. ಸಾಧನದಲ್ಲಿನ ಡಿಸ್ಪ್ಲೇ 144Hz ರಿಫ್ರೆಶ್ ರೇಟ್ ಪ್ಯಾನಲ್ 7 ಹಂತದ ಹೊಂದಿಕೊಳ್ಳಬವುದಾದ ರಿಫ್ರೆಶ್ ಅಲ್ಗಾರಿದಮ್‌ಗೆ ಬೆಂಬಲವನ್ನು ನೀಡುತ್ತದೆ. Qualcomm Snapdragon 865 ಪ್ರೊಸೆಸರ್ ಇರುವುದರಿಂದ 5G ನೆಟ್ವರ್ಕ್ಗಳಿಗೆ ಬೆಂಬಲ ಇರುತ್ತದೆ.

ಕ್ಯಾಮೆರಾಗಳ ವಿಷಯದಲ್ಲಿ Redmi K30S ತನ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ತರುತ್ತದೆ ಇದು 64MP ಮೆಗಾಪಿಕ್ಸೆಲ್ ಪ್ರೈಮರಿ Sony IMX682 ಸಂವೇದಕವನ್ನು 13MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ನೊಂದಿಗೆ ಜೋಡಿಸಿದೆ. 13MP ಮೆಗಾಪಿಕ್ಸೆಲ್ 123-ಡಿಗ್ರಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಸಹ ಇದೆ. ಸೆಲ್ಫಿಗಳನ್ನು ಕ್ಲಿಕ್ ಮಾಡಲು ಫೋನ್ ಮುಂಭಾಗದಲ್ಲಿ 20MP  ಮೆಗಾಪಿಕ್ಸೆಲ್ ಲೆನ್ಸ್‌ನೊಂದಿಗೆ ಬರುತ್ತದೆ.

ಸಂಪರ್ಕಕ್ಕಾಗಿ Redmi K30S ಸ್ಮಾರ್ಟ್ಫೋನ್ 5G, 4G, ಎಲ್ ಟಿಇ, ವೈ-ಫೈ 6, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್, ಇನ್ಫ್ರಾರೆಡ್ (ಐಆರ್), ಎನ್ಎಫ್ಸಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ನೊಂದಿಗೆ ಬರುತ್ತದೆ. ಇದಲ್ಲದೆ ಫೋನ್ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕದಂತಹ ಸಂವೇದಕಗಳನ್ನು ಸಹ ತರುತ್ತದೆ. Xiaomi ಫೋನ್ ಅನ್ನು 5000mAh ಬ್ಯಾಟರಿಯೊಂದಿಗೆ ಹೊಂದಿದ್ದು ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸದ್ಯಕ್ಕೆ ಫೋನ್ ಭಾರತಕ್ಕೆ ಬರುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಆದಾಗ್ಯೂ ದೇಶದಲ್ಲಿ ಇದೀಗ ಘೋಷಿಸಲಾದ Mi 10T Pro ಸ್ಮಾರ್ಟ್ಫೋನ್ ಕಾಯುವಿಕೆ ಸ್ವಲ್ಪ ಉದ್ದವಾಗಬಹುದು.

 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo