Xiaomi Redmi K30 5G: ಅಧಿಕೃತ ಸ್ಮಾರ್ಟ್ಫೋನ್ ಬಾಕ್ಸ್ ಸೋರಿಕೆ

Xiaomi Redmi K30 5G: ಅಧಿಕೃತ ಸ್ಮಾರ್ಟ್ಫೋನ್ ಬಾಕ್ಸ್ ಸೋರಿಕೆ

ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಮಾರಾಟಗಾರನಾದ Xiaomi ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Redmi K30 ಸರಣಿಯ ಎರಡು ಫೋನ್ಗಳಾದ Redmi K30 4G ಮತ್ತು Redmi K30 5G ಫೋನನ್ನು ಬಿಡುಗಡೆ ಮಾಡಿತು. ಸ್ಟ್ಯಾಂಡರ್ಡ್ Redmi K30 ಈಗಾಗಲೇ Xiaomi ಹೊಂ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಆದರೆ 5G ರೂಪಾಂತರ ಯಾವಾಗ ಮಾರಾಟವಾಗಲಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಇದನ್ನು 7ನೇ ಜನವರಿ 2020 ರಿಂದ ಈ ಫೋನ್ ಖರೀದಿಗೆ ಲಭ್ಯವಾಗಲಿದೆ ಎಂದು ಖಚಿತಪಡಿಸಿದ್ದಾರೆ. ವಾಸ್ತವವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಆಸಕ್ತಿ ಹೊಂದಿರುವವರು ಚೀನಾದ ಮಿ ಸ್ಟೋರ್‌ಗಳಲ್ಲಿ ಜನವರಿ 1 ರಿಂದಲೇ ವೈಯಕ್ತಿಕವಾಗಿ ಫೋನನ್ನು ಪ್ರೀ ಆರ್ಡರ್ ಮಾಡಬವುದು. ಅಲ್ಲದೆ 

ವೀಬೊ ಪೋಸ್ಟ್ನಲ್ಲಿ Xiaomi ಗ್ರಾಹಕರು 1ನೇ ಜನವರಿ 2020 ರಿಂದ ಈ 5G ರೂಪಾಂತರಕ್ಕೆ ಆರ್ಡರ್ಗಳನ್ನು ನೀಡಲು ಪ್ರಾರಂಭಿಸಬಹುದು ಎಂದು ಘೋಷಿಸಿದರು. ಈ ಪೋಸ್ಟ್ ಚೀನಾದಾದ್ಯಂತ ನಿರ್ದಿಷ್ಟ ಸ್ಥಳಗಳ ಪಟ್ಟಿಯನ್ನು ಸಹ ಹೊಂದಿದೆ. ಅಲ್ಲಿ ಗ್ರಾಹಕರು ತಮ್ಮ ಸಾಧನವನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ. ಈ ಪೂರ್ವ ಆರ್ಡರ್ ಸಮಯದಲ್ಲಿ ಆಯ್ಕೆ ಮಾಡಲು ಒಟ್ಟು 35 Xiaomi ಸ್ಟೋರ್ ಸ್ಥಳಗಳನ್ನು ಪಟ್ಟಿ ಒಳಗೊಂಡಿದೆ. ಸ್ಮಾರ್ಟ್ಫೋನ್ ಅನ್ನು ಮೊದಲೇ ಆರ್ಡರ್ ಮಾಡುವವರು ಉಡುಗೊರೆಯನ್ನು ಸ್ವೀಕರಿಸುತ್ತಾರೆ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ ಇದು ಸೀಮಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಮತ್ತು ಆ ಉಡುಗೊರೆ ಏನೆಂಬುದರ ಬಗ್ಗೆ ಯಾವುದೇ ಮಾತುಗಳಿಲ್ಲ.

ಈ Xiaomi Redmi K30 5G ಸ್ಮಾರ್ಟ್ಫೋನಿನ ಕೆಲವು ಸ್ಪೆಸಿಫಿಕೇಷನ್ ಮಾಹಿತಿ ನೋಡಬೇಕೆಂದರೆ ಇದು ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಶೂಟರ್ ಆಗಿದ್ದು f/ 1.9 ಅಪರ್ಚರ್ ಮತ್ತು ಫೇಸ್ ಡಿಟೆಕ್ಟ್ ಆಟೋಫೋಕಸ್ ಹೊಂದಿದೆ. ನಂತರ 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮೂರನೇ ಮತ್ತು ನಾಲ್ಕನೇಯದಾಗಿ 2MP ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಒಳಗೊಂಡಿದೆ. ಇದರ ಫ್ರಂಟ್ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು 20MP ಮತ್ತು 2MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಲಾಗಿದೆ. 

ಇದರಲ್ಲಿ 4500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ಫೋನ್ ಇದು ಕೆಂಪು, ನೀಲಿ, ನೇರಳೆ ಮತ್ತು ಬಿಳಿ ಬಣ್ಣದಲ್ಲಿ ಖರೀದಿಸಲು ಲಭ್ಯವಿರುತ್ತದೆ. ಇದು 6GB RAM ಮತ್ತು 64GB ಸ್ಟೋರೇಜ್ ಮೂಲ ಮಾದರಿಗೆ RMB 1,999 (ಸುಮಾರು 20,500) ನಿಂದ ಪ್ರಾರಂಭವಾಗುತ್ತದೆ. 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ನಿಮ್ಮನ್ನು RMB 2,899 (ಸುಮಾರು 29,600 ರೂ.) ನಿಂದ ಶುರುವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo