ಭಾರತದಲ್ಲಿ Xiaomi ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ Redmi K20 ಮತ್ತು Redmi K20 Pro ಇಂದು ಮೊದಲ ಬಾರಿಗೆ ಮಾರಾಟಕ್ಕೆ ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ 21,999 ರೂಗಳ ಆರಂಭಿಕ ಬೆಲೆಯಲ್ಲಿ ಬರುವ ಈ ಸ್ಮಾರ್ಟ್‌ಫೋನ್‌ಗಳು Xiaomi ಅಧಿಕೃತ ಆನ್‌ಲೈನ್ ಸ್ಟೋರ್ ಮಿ.ಕಾಂ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಲಭ್ಯವಿರುತ್ತವೆ. ಇವೇರಡು ಸ್ಮಾರ್ಟ್ಫೋನ್ಗಳು ಮಿ ಹೋಮ್ ಸ್ಟೋರ್‌ಗಳ ಮೂಲಕ ಆಫ್‌ಲೈನ್‌ನಲ್ಲಿ ಲಭ್ಯವಿರುತ್ತಾವೆ. ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ಎರಡೂ ಕ್ಯಾಶ್ ಬ್ಯಾಕ್, ರಿಯಾಯಿತಿಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತಿವೆ.
ಈ ಎರಡು Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳ ಸ್ಟೋರೇಜ್ ಎರಡೇರಡು ರೂಪಾಂತರಗಳಿವೆ. Redmi K20 ಯ ಮೂಲ ರೂಪಾಂತರವು 64GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಮತ್ತು ಇದರ ಬೆಲೆ 21,999 ರೂಗಳಾಗಿವೆ. ಮತ್ತೊಂದು 128GB ಸ್ಟೋರೇಜ್ ಅನ್ನು ಪ್ಯಾಕ್ ಮಾಡುವ ಎರಡನೇ ಸ್ಟೋರೇಜ್ ರೂಪಾಂತರದ ಬೆಲೆ 23,999 ರೂಗಳಾಗಿವೆ. ಈ ಎರಡೂ ರೂಪಾಂತರಗಳು ಕೇವಲ 6GB ಯ RAM ಆಯ್ಕೆಯಲ್ಲಿ ಮಾತ್ರ ಬರುತ್ತವೆ. ಇದರ ನಂತರ Redmi K20 Pro ಸ್ಮಾರ್ಟ್ಫೋನ್ ಸಂಬಂಧಿಸಿದಂತೆ 6GB + 128GB ರೂಪಾಂತರವು 27,999 ರೂಗಳಲ್ಲಿ ಬರುತ್ತದೆ. ಮತ್ತು ಇದರ 8GB + 256GB ರೂಪಾಂತರದ ಬೆಲೆ 30,999 ರೂಗಳಲ್ಲಿ ಲಭ್ಯವಿದೆ.
Redmi K20 >6GB / 128GB = 23,999
Redmi K20 Pro > 6GB/128GB = 27,999
Redmi K20 Pro > 8GB/256GB = 30,999
ಈ ಸ್ಮಾರ್ಟ್ಫೋನ್ಗಳ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳಿಗೆ ಮಿ.ಕಾಮ್ 1,000 ರೂಗಳ ಅಲ್ಲದೆ ಏರ್ಟೆಲ್ ಗ್ರಾಹಕರು 249 ರೂ ಅಥವಾ 299 ಮೌಲ್ಯದ ಪ್ರತಿ ರೀಚಾರ್ಜ್‌ನಲ್ಲಿ 100% ಹೆಚ್ಚಿನ ಡೇಟಾವನ್ನು ಪಡೆಯುತ್ತಾರೆ. Xiaomi ಮಿ ಎಕ್ಸ್‌ಚೇಂಜ್ ಕಾರ್ಯಕ್ರಮದ ಭಾಗವಾಗಿ ಹ್ಯಾಂಡ್‌ಸೆಟ್‌ಗಳನ್ನು ಸಹ ನೀಡುತ್ತಿದೆ. ಮಿ ಪ್ರೊಟೆಕ್ಟ್ ಇನ್ಶುರೆನ್ಸ್ 1,099 ರಿಂದ ಪ್ರಾರಂಭವಾಗುತ್ತದೆ ಮತ್ತು ಮಿ ಸ್ಕ್ರೀನ್ ಪ್ರೊಟೆಕ್ಟ್ 899 ರೂಗಳಲ್ಲಿ ಲಭ್ಯವಿದೆ. Redmi K20 Pro ಫ್ಲಿಪ್‌ಕಾರ್ಟ್ ತಿಂಗಳಿಗೆ 4,667 ರೂಗಳ ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಮತ್ತು Redmi K20 ನಲ್ಲಿ 3,667 ರೂಗಳೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 5% ಕ್ಯಾಶ್ ಬ್ಯಾಕ್‌ನಲ್ಲಿ ಖರೀದಿಸಬಹುದು.
ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇರಡು ಸ್ಪೆಸಿಫಿಕೇಷನ್ಗಳನ್ನು ಹೊರತುಪಡಿಸಿ ಹೆಚ್ಚಾಗಿ ವ್ಯತ್ಯಾಸಗಳಿಲ್ಲ. ಈ ಸ್ಮಾರ್ಟ್ಫೋನ್ಗಳು ಕಾರ್ಬನ್ ಬ್ಲ್ಯಾಕ್, ಗ್ಲೇಸಿಯರ್ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತವೆ. 6.39 ಇಂಚಿನ FHD+ ಅಮೋಲೆಡ್ ಸ್ಕ್ರೀನ್ ಜೊತೆಗೆ 91.6% ಸ್ಕ್ರೀನ್-ಟು-ಬಾಡಿ ಅಸ್ಪೆಟ್ ರೇಷುವಿನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು 48MP ಸೋನಿ IMX 586 ಸೆನ್ಸರ್ f/ 1.75 ಅಪರ್ಚರ್ 13MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2MP ಆಪ್ಟಿಕಲ್ ಜೂಮ್ ಹೊಂದಿರುವ 8MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 20MP ಪಾಪ್-ಅಪ್ ಸೆಲ್ಫಿ ಕ್ಯಾಮೆರಾದೊಂದಿಗೆ ಕ್ಯಾಮೆರಾ ಎಡ್ಜ್ ಲೈಟಿಂಗ್ ಸಿಸ್ಟಮ್ CELS ಯೊಂದಿಗೆ ಬರುತ್ತಾವೆ. Xiaomi ಹೇಳುವಂತೆ ಉತ್ತಮ ಸೆಲ್ಫಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇವೆರಡೂ 4000mAh ನ ಒಂದೇ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿವೆ. ವ್ಯತ್ಯಾಸಗಳ ವಿಷಯದಲ್ಲಿ Redmi K20 Pro ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ನಿಂದ ಚಾಲಿತವಾಗಿದ್ದರೆ Redmi K20 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ Redmi K20 Pro ಸ್ಮಾರ್ಟ್ಫೋನ್ 27W ಸೋನಿಕ್ಚಾರ್ಜ್ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ ಬಂದರೆ Redmi K20 ಸ್ಮಾರ್ಟ್ಫೋನ್ 18W ಬೆಂಬಲದೊಂದಿಗೆ ಬರುತ್ತದೆ.