ಚೀನಾದಲ್ಲಿ ಮುಂದಿನ ವಾರ ಅಂದ್ರೆ ಮೇ 28ಕ್ಕೆ Xiaomi ತನ್ನ ಮತ್ತೋಂದು ಹೊಸ ಪ್ರಮುಖ ಫೋನನ್ನು ಪ್ರಾರಂಭಿಸುತ್ತಿದೆ ಎಂದು ವ್ಯಾಪಕವಾಗಿ ವರದಿಯಾಗಿದೆ. ಈ ಮುಂಬರುವ ಸಾಧನವನ್ನು Redmi K20 ಎಂದು ಕರೆಯಲಾಗುವುದು. ಈ ವದಂತಿಗಳನ್ನು ನಂಬಬೇಕಾದರೆ ಅದು ಭಾರತದಲ್ಲಿ ಇದು Poco F2 ಫೋನಾಗಿ ಬಿಡುಗಡೆಯಾಗುವ ನಿರೀಕ್ಷಿಯಿದೆ. ಈ ಸೋರಿಕೆಯು ಇಲ್ಲಿಯವರೆಗೆ ಒಂದು ಸಾಧನದ ಪವರ್ಹೌಸ್ಗೆ ಸುಳಿವು ನೀಡಿತು ಮತ್ತು ಈಗ Redmi K20 ಫೋನ್ ಅಧಿಕೃತವಾಗಿ ಕಾಣುವ ಫೋಟೋವನ್ನು ಆನ್ಲೈನ್ನಲ್ಲಿ ಬಿಡುಗಡೆಗೊಳಿಸಿದೆ.
ಈ ಹೊಸ Redmi K20 ಫೋಟೋವನ್ನು ವೈಬೊದಲ್ಲಿ ಪೋಸ್ಟ್ ಮಾಡಲಾಗಿದ್ದು ಸಂಪೂರ್ಣ ಬ್ಯಾಕ್ ಪ್ಯಾನೆಲ್ ಅನ್ನು ತೋರಿಸುತ್ತದೆ. ಗಾಜಿನ ಪ್ಯಾನಲ್ ಮತ್ತು ಸುಂದರ ಗ್ರೇಡಿಯಂಟ್ ಪೇಂಟ್ ರಚಿತಗೊಂಡಿರುವುದು ಮೊದಲ ವಿಷವಾಗಿದೆ. ಇದರ ಕೆಳಭಾಗದಲ್ಲಿ ರೆಡ್ಮಿ ಲೋಗೊ ಮತ್ತು ಎಡಭಾಗದಲ್ಲಿ ಪವರ್ ಬಟನ್ ಮತ್ತು ಬಲ ತುದಿಯಲ್ಲಿರುವ ವಾಲ್ಯೂಮ್ ರಾಕರ್ ಅನ್ನು ಸಹ ನೀವು ಈ ಚಿತ್ರದಲ್ಲಿ ನೋಡಬವುದು.
ಇದರ ಮೇಲ್ಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಮಾಡ್ಯೂಲ್ ಸಹ ಕಂಡುಬರುತ್ತದೆ. ಮೂರು ಕೆಮರಾ ಸಂವೇದಕಗಳನ್ನು ಕೇಂದ್ರದಲ್ಲಿ ಇರಿಸಲಾಗುತ್ತದೆ. ಇದರ ಕ್ಯಾಮೆರಾ ಸೆಟಪ್ 48MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ 13MP ಮೆಗಾಪಿಕ್ಸೆಲ್ ಸೆಕೆಂಡರಿ ಅಲ್ಟ್ರಾ ವೈಡ್ ಕ್ಯಾಮರಾ ಮತ್ತು ಮೂರನೇಯದಾಗಿ 8MP ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಇದರ ಫ್ರಂಟಲ್ಲಿ 20MP ನೀಡಿರುವುದಾಗಿ ನಿರೀಕ್ಷಿಸಲಾಗಿದೆ. ಇದು ಪ್ರತಿ ಸೆಕೆಂಡಿಗೆ 960 ಚೌಕಟ್ಟುಗಳು ಸೂಪರ್ ಸ್ಲೋ ಮೋಶನ್ ವೀಡಿಯೊ ರೆಕಾರ್ಡಿಂಗ್ ಸಹ ಬೆಂಬಲಿಸುತ್ತದೆ.
ಇದರಲ್ಲಿ 6.39 ಇಂಚಿನ FHD + OLED ಡಿಸ್ಪ್ಲೇಯನ್ನು 19.5: 9 ಅಸ್ಪೆಟ್ ರೇಷುವಿನೊಂದಿಗೆ ನಿರೀಕ್ಷಿಸಲಾಗಿದೆ. ಇದರ ಹುಡ್ ಅಡಿಯಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಚಿಪ್ಸೆಟ್ ಹೊಂದಿರಬವುದು. ಮತ್ತು ಅದರ ಬೆಲೆ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ಗಳ ಪೈಕಿಯ ಶ್ರೇಣಿಯಲ್ಲಿ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರಲ್ಲಿ 4000mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್ಗಾಗಿ ಬೆಂಬಳಿಸುವ ನಿರೀಕ್ಷಿಸಲಾಗಿದೆ. ಇದು 18W ಫಾಸ್ಟ್ ಚಾರ್ಜಿಂಗ್ ಅಥವಾ 27W ಫಾಸ್ಟ್ ಚಾರ್ಜಿಂಗ್ನೊಂದಿಗೆ ನೋಡಲು ಆಸಕ್ತಿದಾಯಕವಾಗಿದೆ.