Redmi K20 Pro ಮತ್ತು Redmi K20 ಇಂದು ಭಾರತದಲ್ಲಿ ಲಾಂಚ್, ಇಲ್ಲಿಂದ ಇದರ ಲೈವ್ ಸ್ಟ್ರೀಮ್ ನೋಡಿ

Redmi K20 Pro ಮತ್ತು Redmi K20 ಇಂದು ಭಾರತದಲ್ಲಿ ಲಾಂಚ್, ಇಲ್ಲಿಂದ ಇದರ ಲೈವ್ ಸ್ಟ್ರೀಮ್ ನೋಡಿ
HIGHLIGHTS

Redmi K20 Pro ಸ್ಮಾರ್ಟ್ಫೋನ್ AI ಆಧಾರಿತ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರ ಮೊದಲ ಸೆನ್ಸರ್ 48MP ಮೆಗಾಪಿಕ್ಸೆಲ್ ಸೋನಿ IMX 586 ನೊಂದಿಗೆ ಬರುತ್ತದೆ.

Redmi K20 ನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳೂ ಇವೆ ಆದರೆ ಪ್ರೈಮರಿ ಕ್ಯಾಮೆರಾ ಸೆನ್ಸರ್ ಸೋನಿ IMX 582 ಆಗಿದೆ.

Redmi K20 Proನಲ್ಲಿ 27w ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು Redmi K20 ನಲ್ಲಿ 18w ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.

Redmi K20 Pro ಮತ್ತು Redmi K20 ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಅವುಗಳನ್ನು ಈಗಾಗಲೇ ಮೊದಲು ಚೀನಾದ ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಎರಡೂ ಫೋನ್‌ಗಳನ್ನು ಉತ್ತಮ ದೊಡ್ಡ ಆರ್ಕ್ ಬಾಡಿ ಮತ್ತು ಪಾಪ್-ಅಪ್ ಸೆಲ್ಫಿ ಕ್ಯಾಮೆರಾಕ್ಕಾಗಿ ಆಲ್ ನ್ಯೂ 3D ಯೊಂದಿಗೆ ಪ್ರಸ್ತುತಪಡಿಸಲಾಗಿದೆ. ಇದಲ್ಲದೆ ಈ ಫೋನ್‌ಗಳಲ್ಲಿ ಬಳಕೆದಾರರು ತಮ್ಮೆಡೆಗೆ ಆಕರ್ಷಿಸುವಂತಹ ಸಾಕಷ್ಟು ಅಂಶಗಳನ್ನು ಒಳಗೊಂಡಿದೆ. ಕಂಪನಿಯು ತನ್ನ "K" ಸರಣಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಿದೆ. ಭಾರತದಲ್ಲಿ ಯಾವ ಬೆಲೆಗೆ ಬಿಡುಗಡೆಯಾಗಲಿದೆ ಎಂಬುದನ್ನು ಇಂದು ಬಿಡುಗಡೆಯಾಗುವವವರೆಗೆ ಕಾಡು ನೋಡಬೇಕಿಗಿದೆ. ಇವು ಎಂದು ಬೆಳಿಗ್ಗೆ 11: 30 ಕ್ಕೆ ಬಿಡುಗಡೆಯಾಗಲಿದೆ. ಇದರ ಲೈವ್ ಸ್ಟ್ರೀಮಿಂಗ್ ಕಂಪನಿಯ ಅಧಿಕೃತ ವೆಬ್‌ಸೈಟ್ Mi.com ಮತ್ತು YouTube ಮತ್ತು ಕಂಪನಿಯ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ವೀಕ್ಷಿಸಬವುದು.

Redmi K20 Pro ಮತ್ತು Redmi K20 ನಿರೀಕ್ಷಿತ ಬೆಲೆ:

ಭಾರತೀಯ ಬೆಲೆ ಚೀನಾದಲ್ಲಿ ಬಿಡುಗಡೆಯಾದ ರೂಪಾಂತರಗಳ ಅಕ್ಕ ಪಕ್ಕದಲ್ಲೇ ಇರುತ್ತದೆ. Redmi K20 Pro ಸ್ಮಾರ್ಟ್ಫೋನ್ 6GB ಯ RAM  ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 2,499 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 24,900 ರೂಪಾಯಿಗಳು. ಇದರ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರಗಳ ಬೆಲೆ 2,599 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ 25,900 ರಷ್ಟಿದೆ. ಅದೇ ಸಮಯದಲ್ಲಿ 8GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರಗಳ ಬೆಲೆ 2,999 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ 27,900 ರಷ್ಟಿದೆ. 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರಗಳ ಬೆಲೆ 2,499 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 29,900 ರೂಪಾಯಿಗಳಾಗಿವೆ.

Redmi K20 ಸ್ಮಾರ್ಟ್ಫೋನ್ 6GB ಯ RAM ಮತ್ತು 64GB ಸ್ಟೋರೇಜ್  ರೂಪಾಂತರಗಳ ಬೆಲೆ 1,999 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 19,900 ರೂಗಳಾಗಿವೆ. ಅದೇ ಸಮಯದಲ್ಲಿ ಅದರ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರಗಳ ಬೆಲೆ 2,099 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 20,900 ರೂಪಾಯಿಗಳು. ಇದರ 8GB ಯ RAM ಮತ್ತು 256GB ಯ ಸ್ಟೋರೇಜ್ ರೂಪಾಂತರಗಳ ಬೆಲೆ 2,599 ಚೈನೀಸ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 25,900 ರೂಪಾಯಿಗಳಾಗಿವೆ.

Redmi K20 Pro ಮತ್ತು Redmi K20 ಸ್ಪೆಸಿಫಿಕೇಷನ್: 

ಈ ಎರಡೂ ಫೋನ್‌ಗಳು 6.39 ಇಂಚಿನ ಫುಲ್ HD ಜೊತೆಗೆ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ಬರುತ್ತವೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1080×2340 ಆಗಿದೆ. ಇದರ ಆಕಾರ ಅನುಪಾತ 19.5: 9 ಆಗಿದ್ದು ಅದೇ ಸಮಯದಲ್ಲಿ ಸ್ಕ್ರೀನ್ ಟು ಬಾಡಿ ಅನುಪಾತ 91.9 ಆಗಿದೆ. ಇವುಗಳಲ್ಲಿ ಇನ್ ಡಿಸ್ಪ್ಲೇ  ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದೆ. ಸ್ನಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿRedmi K20 Pro ಎಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ Redmi K20  ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Redmi K20 Pro ಸ್ಮಾರ್ಟ್ಫೋನ್ AI ಆಧಾರಿತ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರ ಮೊದಲ ಸೆನ್ಸರ್ 48MP ಮೆಗಾಪಿಕ್ಸೆಲ್ ಸೋನಿ IMX 586 ನೊಂದಿಗೆ ಬರುತ್ತದೆ. ಅದೇ ಸಮಯದಲ್ಲಿ ಎರಡನೇ 13MP ಮೆಗಾಪಿಕ್ಸೆಲ್‌ಗಳು ಮತ್ತು ಮೂರನೆಯದು 8MP  ಮೆಗಾಪಿಕ್ಸೆಲ್‌ಗಳು. Redmi K20 ನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳೂ ಇವೆ ಆದರೆ ಪ್ರೈಮರಿ ಕ್ಯಾಮೆರಾ ಸೆನ್ಸರ್ ಸೋನಿ IMX 582 ಆಗಿದೆ. ಎರಡು ಫೋನ್‌ಗಳಲ್ಲಿ 20MP ಮೆಗಾಪಿಕ್ಸೆಲ್‌ಗಳ ಸೆಲ್ಫಿ ಕ್ಯಾಮೆರಾ ಇದೆ. ಎರಡೂ ಫೋನ್‌ಗಳು ಫೇಸ್ ಅನ್ಲಾಕ್ ಬೆಂಬಲದೊಂದಿಗೆ ಇವೆ. ಎರಡೂ ಫೋನ್‌ಗಳಿಗೆ ಪವರ್ ನೀಡಲು 4000mAh ಬ್ಯಾಟರಿಯನ್ನು ಒದಗಿಸಲಾಗಿದೆ. Redmi K20 Proನಲ್ಲಿ 27w ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು Redmi K20 ನಲ್ಲಿ 18w ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo