Xiaomi ಯ ಉಪ-ಬ್ರಾಂಡ್ ಆಗಿರುವ Redmi India ತನ್ನ ಮುಂಬರುವ Redmi Note 11T 5G ಸ್ಮಾರ್ಟ್‌ಫೋನ್‌ಗಾಗಿ 5G ಪ್ರಯೋಗಗಳನ್ನು ನಡೆಸಲು ರಿಲಯನ್ಸ್ ಜಿಯೋ ಜೊತೆ ಕೈಜೋಡಿಸಿದೆ ಎಂದು ಸೋಮವಾರ ಪ್ರಕಟಿಸಿದೆ. ಭವಿಷ್ಯದಲ್ಲಿ ಸಿದ್ಧವಾಗಿರುವ 5G ಸ್ಮಾರ್ಟ್‌ಫೋನ್‌ಗಳಿಗೆ ಪ್ರವೇಶವನ್ನು ಲಭ್ಯವಾಗಿಸುವ ರೀತಿಯಲ್ಲಿ ಗ್ರಾಹಕರಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಜಿಯೋ ಜೊತೆಗೆ ಇತ್ತೀಚೆಗೆ ನಾವು ನಡೆಸಿರುವ ಪ್ರಯೋಗವು 5G ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಸೂಚನೆಯಾಗಿದ್ದು ಇದರ ಫಲಿತಾಂಶವು ಡಿವೈಸ್‌ನ ನಿಜವಾದ ಸಾಮರ್ಥ್ಯ ಬಹಿರಂಗಪಡಿಸುತ್ತದೆ ಹಾಗೂ ಉತ್ತಮ ಗುಣಮಟ್ಟದ 5G ಅನುಭವವನ್ನು ಬಳಕೆದಾರರಿಗೆ ವಾಸ್ತವಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಕಂಪನಿಯು Redmi Note 11T 5G ಸ್ಮಾರ್ಟ್‌ಫೋನ್ ಅನ್ನು ಕಠಿಣ ಲ್ಯಾಬ್ ಪ್ರಯೋಗಗಳಿಗಾಗಿ ಬಳಸಲಾಗಿದೆ. ಅಲ್ಲಿ ಅದು ಹೆಚ್ಚಿನ ಡೌನ್‌ಲೋಡ್ ವೇಗವನ್ನು ಪಡೆಯುವ ಮೂಲಕ ನಾಕ್ಷತ್ರಿಕ ಫಲಿತಾಂಶಗಳನ್ನು ಸಾಧಿಸಿದೆ ಎಂದು ಹೇಳಿದೆ. ಆದಾಗ್ಯೂ ಪರೀಕ್ಷೆಯ ಸಮಯದಲ್ಲಿ ಸಾಧಿಸಿದ ವೇಗವನ್ನು ಬಹಿರಂಗಪಡಿಸಲಾಗಿಲ್ಲ. ಭಾರತದಲ್ಲಿ ಬಿಡುಗಡೆಯಾಗಲಿರುವ Redmi Note 11T 5G ಏಳು SA ಬ್ಯಾಂಡ್‌ಗಳನ್ನು n1/ n3/ n5/n8/ n28/ n40/ n78 ಬೆಂಬಲಿಸುತ್ತದೆ. ಮತ್ತು ನಾಲ್ಕು NSA ಬ್ಯಾಂಡ್‌ಗಳು n1/n3/n40/n78 ಬೆಂಬಲಿಸುತ್ತದೆ.
ರಿಲಯನ್ಸ್ ಜಿಯೋ ಜೊತೆಗಿನ 5G ಪ್ರಯೋಗಗಳು ಅಂತಿಮ ಬಳಕೆದಾರರಿಗೆ ವರ್ಧಿತ 5G ಅನುಭವವನ್ನು ನೀಡಲು ಸ್ಮಾರ್ಟ್‌ಫೋನ್ ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ಆದಾಗ್ಯೂ ಕಂಪನಿಗಳು ಬಿಡುಗಡೆ ಮಾಡದಿರುವ ವೇಗವು ಯೋಚಿಸಬೇಕಾದ ಸಂಗತಿಯಾಗಿದೆ. Redmi Note 11T 5G ಭಾರತದಲ್ಲಿ ಕೈಗೆಟುಕುವ ಶ್ರೇಣಿಯ ಅಡಿಯಲ್ಲಿ ನಿರೀಕ್ಷಿಸಲಾಗಿದೆ. ಇದರ ಪೂರ್ವವರ್ತಿಯಾದ Redmi Note 10 ಸರಣಿಯ ಸಾಧನಗಳು ಹೆಚ್ಚಾಗಿ 10,000 ರಿಂದ 20,000 ರೂಗಳಲ್ಲಿ ಈ Redmi Note 11 ಸರಣಿಯಲ್ಲೂ ಇದನ್ನು ನಿರೀಕ್ಷಿಸಬಹುದು.
ಈ ಸ್ಮಾರ್ಟ್‌ಫೋನ್ ಗ್ರಾಹಕರ ಸ್ಮಾರ್ಟ್‌ಫೋನ್ ಅನುಭವ ಸಜ್ಜುಗೊಳಿಸಲು ಸಂಪೂರ್ಣ ತಯಾರಿ ನಡೆಸಿದ್ದು ನವೆಂಬರ್ 30ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. Redmi Note 11T 5G ಡಿವೈಸ್ ಪೂರ್ಣ ಎಚ್‌ಡಿ (HD) (1080 A- 2400p) ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಎಂಬುದಾಗಿ ಕಂಪನಿ ಹೇಳಿಕೊಂಡಿದ್ದು 6nm ಕ್ಲಾಸ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 6nm ಪ್ರೊಸೆಸರ್ ಜೊತೆಗೆ Mali-G57 MC2 GPU ಅನ್ನು ಡಿವೈಸ್ ಒಳಗೊಂಡಿದೆ. 5000mAh ಬ್ಯಾಟರಿಯೊಂದಿಗೆ 33W ವೇಗದ ಚಾರ್ಜರ್ ಒಳಗೊಂಡಿದೆ. Redmi Note 11T 5G ಡ್ಯುಯಲ್ ಕ್ಯಾಮೆರಾ 50ಎಮ್‌ಪಿ (f/1.8)A ಜೊತೆಗೆ 8ಎಮ್‌ಪಿ (f/2.2) ಜೊತೆಗೆ ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್ ಒಳಗೊಂಡಿರುವ ನಿರೀಕ್ಷೆಯಿದೆ. ಮುಂಭಾಗದಲ್ಲಿ, ಇದು 16MP (f/2.45) ಸ್ನ್ಯಾಪರ್ ಹೊಂದಿದೆ.
Redmi Note 11T 5G ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-C ಅನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿ ದೊರಕಿದೆ. ಫೋನ್‌ನಲ್ಲಿ ಸಂವೇದಕಗಳು ಅಕ್ಸೆಲೆರೋಮೀಟರ್, ಆ್ಯಂಬಿಯೆಂಟ್ ಲೈಟ್ ಸೆನ್ಸಾರ್, ದಿಕ್ಸೂಚಿ/ಮ್ಯಾಗ್ನೆಟೋಮೀಟರ್, ಸಾಮೀಪ್ಯ ಸಂವೇದಕ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿರುತ್ತವೆ ಎಂಬ ವದಂತಿಗಳಿವೆ. ಡಿವೈಸ್ ಅಕ್ವಾಮರೀನ್ ನೀಲಿ, ಗಾಢ ಕಪ್ಪು ವರ್ಣ, ಹಾಗೂ ಶ್ವೇತ ವರ್ಣಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ.