Xiaomi ಮುಂದಿನ ಪೀಳಿಗೆಯ ನೋಟ್ 9 ಸರಣಿಯನ್ನು ಪ್ರಾರಂಭಿಸಿದ ನಂತರ ಶಿಯೋಮಿ ತನ್ನ ನಿಯಮಿತ 9 ಸರಣಿಯಲ್ಲಿ ಮೊದಲ ಸ್ಮಾರ್ಟ್‌ಫೋನ್ ಘೋಷಿಸಿದೆ. ಈ Redmi 9 ಫೋನ್ ನಾಲ್ಕು ಹಿಂದಿನ ಕ್ಯಾಮೆರಾಗಳು 5020 mAh ಬ್ಯಾಟರಿ ಮತ್ತು 64GB ವರೆಗೆ ಸ್ಟೋರೇಜ್ ಮತ್ತು 6.53 ಇಂಚಿನ ಪೂರ್ಣ ಎಚ್‌ಡಿ + ಡಿಸ್ಪ್ಲೇಯನ್ನು ತರುತ್ತದೆ. ಇದು ಕಳೆದ ವರ್ಷ ಬಿಡುಗಡೆಯಾದ ಕಂಪನಿಯ ಜನಪ್ರಿಯ Redmi 8 ರ ಉತ್ತರಾಧಿಕಾರಿಯಾಗಿದ್ದು ಪ್ರಸ್ತುತ ಭಾರತದಲ್ಲಿ ಇದರ ಬೆಲೆ 9,499 ರೂಗಳಾಗಿವೆ.
ಹ್ಯಾಂಡ್‌ಸೆಟ್‌ನ ಬೆಲೆ ಆಕ್ರಮಣಕಾರಿಯಾಗಿ 9 149 ಆಗಿದ್ದು ಇದು ಪ್ರವೇಶ ಮಟ್ಟದ 3 GB + 32 GB ಸ್ಟೋರೇಜ್ ಆವೃತ್ತಿಗೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 12,800 ರೂಗಳಾಗಿವೆ. ಮತ್ತು ಟಾಪ್-ಎಂಡ್ 4 GB + 64 GB ರೂಪಾಂತರಕ್ಕೆ €179 (ಸರಿಸುಮಾರು 15,400 ರೂಗಳಾಗಿವೆ) ಆಗಿದೆ. ಈ Redmi 9 ಸ್ಮಾರ್ಟ್ಫೋನ್ ಕಾರ್ಬನ್ ಗ್ರೇ, ಸನ್ಸೆಟ್ ಪರ್ಪಲ್ ಮತ್ತು ಓಷನ್ ಗ್ರೀನ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಲಭ್ಯತೆಯನ್ನು ಇನ್ನೂ ಪ್ರಕಟಿಸಬೇಕಾಗಿಲ್ಲ.
ಈ ಸ್ಮಾರ್ಟ್ಫೋನ್ 6.53 ಇಂಚಿನ FHD+ ಡಿಸ್ಪ್ಲೇಯನ್ನು 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್ 19: 5: 9 ಅಸ್ಪೆಟ್ ರೇಷು 400 ನಿಟ್ಸ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ. ಹುಡ್ ಅಡಿಯಲ್ಲಿ ಇದು ಮೀಡಿಯಾ ಟೆಕ್ ಹೆಲಿಯೊ G80 ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ 3GB + 32GB ಮತ್ತು 4GB + 64GB ಸ್ಟೋರೇಜ್ ಮಾದರಿಗಳಿವೆ. ಮೀಸಲಾದ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸಂಗ್ರಹಣೆಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ.
ಇದು ಆಂಡ್ರಾಯ್ಡ್ 10 ನಲ್ಲಿ MIUI 11 ಕಸ್ಟಮ್ ಸ್ಕಿನ್ ಮತ್ತು ಪ್ಯಾಕ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ ಫೋನ್ 13MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ ಒಳಗೊಂಡ ಕ್ವಾಡ್-ಕ್ಯಾಮೆರಾ ಮಾಡ್ಯೂಲ್ ಅನ್ನು ಪಡೆಯುತ್ತದೆ. ಇದರ ಕ್ರಮವಾಗಿ ಫ್ರವ್ನ್ ಅಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಲೆನ್ಸ್ ಒಳಗೊಂಡಿದೆ.
ಇದಲ್ಲದೆ ರೆಡ್ಮಿ 9 ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸ್ಕ್ಯಾನರ್, ಡ್ಯುಯಲ್-ಬ್ಯಾಂಡ್ ವೈ-ಫೈ, ಎಫ್ಎಂ ರೇಡಿಯೋ, ಬ್ಲೂಟೂತ್ 5.0, 4G LTE, NFC ಮತ್ತು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮತ್ತು 10W ಚಾರ್ಜರ್ ಹೊಂದಿರುವ 5020mAh ಬ್ಯಾಟರಿ ಸಹ ಇದೆ.