ಭಾರತದಲ್ಲಿ Xiaomi ಕಂಪನಿಯ ಸಬ್ ಬ್ರಾಂಡ್ ಆಗಿರುವ Redmi ತನ್ನ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್‌ಫೋನ್ Redmi 8A Dual ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಕಡಿಮೆ ಬೆಲೆಯಲ್ಲಿ ಡ್ಯುಯಲ್ ಬ್ಯಾಕ್ ಕ್ಯಾಮೆರಾದೊಂದಿಗೆ ಬರುವ ಕಂಪನಿಯ ಮೊದಲ ಸ್ಮಾರ್ಟ್ಫೋನ್ ಆಗಿದ್ದು ಈಗಾಗಲೇ ಬಿಡುಗಡೆಯಾಗಿರುವ Redmi 8A ಫೋನಿನ ಯಶಸ್ಸಿನ ಮಾದರಿ ಇದಾಗಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯನ್ನು ಕೇವಲ 6,499 ರೂಗಳಿಂದ ಶುರುವಾಗುತ್ತದೆ.
ಈ Redmi 8A Dual ಸ್ಮಾರ್ಟ್ಫೋನ್ USB ಟೈಪ್ ಸಿ ಪೋರ್ಟ್, ಫಾಸ್ಟ್ ಚಾರ್ಜಿಂಗ್ ಮತ್ತು ಗೊರಿಲ್ಲಾ ಗ್ಲಾಸ್ v5 ಪ್ರೊಟೆಕ್ಷನ್ ನಂತಹ ಕೂಲ್ ವೈಶಿಷ್ಟ್ಯಗಳನ್ನು ಹೊಂದಿರುವ ಅದರ ವಿಭಾಗದ ಮೊದಲ ಸ್ಮಾರ್ಟ್ಫೋನ್ ಇದಾಗಿದೆ. ಈ ಫೋನ್ ಸೀ ಬ್ಲೂ, ಸ್ಕೈ ವೈಟ್ ಮತ್ತು ಮಿಡ್ನೈಟ್ ಗ್ರೇ ಎಂಬ ಮೂರು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಕಂಪನಿಯು Redmi 9A ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಬಹುದೆಂದು ವರದಿಗಳು ಬಂದಿದ್ದವು ಆದರೆ ಇದರ ಹೊರತಾಗಿ ಕಂಪನಿ ಹೊಸ ರೆಡ್ಮಿ ಪವರ್ ಬ್ಯಾಂಕ್ ಅನ್ನು ಸಹ ಪ್ರಾರಂಭಿಸಿದೆ.
ಈ ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಈ ಫೋನ್ 6.22 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ವಾಟರ್ ಡ್ರಾಪ್ ನೋಚ್ನೊಂದಿಗೆ ಬರುತ್ತದೆ. ಫೋನ್ 2Ghz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 439 ಪ್ರೊಸೆಸರ್ ಹೊಂದಿದೆ. ಫೋನ್‌ನಲ್ಲಿ 2GB ಮತ್ತು 3GB ಯ ಸಾಧಾರಣ RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್ ಬರುತ್ತದೆ. ಈ ಫೋನ್ Vo-WiFi ನ ವೈಶಿಷ್ಟ್ಯವನ್ನೂ ಹೊಂದಿದೆ.
ಇದರ ಫೋಟೋಗ್ರಾಫಿಗಾಗಿ ಡ್ಯುಯಲ್ ಎರಡು ಹಿಂದಿನ ಕ್ಯಾಮೆರಾಗಳನ್ನು ನೀಡಲಾಗಿದೆ. ಇದು 13MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಮತ್ತೊಂದು ಸೆನ್ಸರ್ ಹೊಂದಿದೆ. ಇದರ ಬ್ಯಾಕ್ ಕ್ಯಾಮೆರಾ Eye ಸೀನ್ ಡಿಟೆಕ್ಷನ್ ಮತ್ತು Eye ಪೋರ್ಟ್ರೇಟ್ ಮೋಡ್‌ನೊಂದಿಗೆ ಬರುತ್ತದೆ. ಅದ್ರ ಮುಂಭಾಗದಲ್ಲಿ ಈ ಫೋನ್ 8MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ನ ಬ್ಯಾಟರಿ ಸಹ ಸಾಕಷ್ಟು ಶಕ್ತಿಯುತವಾಗಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. Redmi 8A Dual ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜ ಜೊತೆಗೆ USB ಟೈಪ್ ಸಿ ರಿವರ್ಸ್ ಚಾರ್ಜಿಂಗ್ ಫೀಚರ್ ಸಹ ಹೊಂದಿದೆ.
ಈ ಸ್ಮಾರ್ಟ್ಫೋನ್ 2GB ಯ RAM ಮತ್ತು 3GB ಯ RAM ಎಂಬ ಎರಡು ರೂಪಾಂತರಗಳಲ್ಲಿ ಬರಲಿದೆ. 2GB RAM ರೂಪಾಂತರದ ಬೆಲೆ 6,499 ರೂಗಳಾದರೆ 3GB RAM ರೂಪಾಂತರದ ಬೆಲೆ 6,999 ರೂಗಳಾಗಿವೆ. ಇದಲ್ಲದೆ ಕಂಪನಿಯ ಅಧಿಕೃತ ವೆಬ್‌ಸೈಟ್ ಮಿ.ಕಾಮ್ ಮತ್ತು ಆನ್‌ಲೈನ್ ಪಾಲುದಾರ ಅಮೆಜಾನ್ ಇಂಡಿಯಾದಿಂದ ಫೋನ್ ಮಾರಾಟವಾಗಲಿದೆ. ಈ ಸ್ಮಾರ್ಟ್ಫೋನಿನ ಮೊದಲ ಮಾರಾಟ ಇದೇ ಫೆಬ್ರವರಿ 18 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.