5,999 ರೂಗಳ Redmi 7A ಸ್ಮಾರ್ಟ್ಫೋನಲ್ಲಿದೆ IMX486 ಕ್ಯಾಮೆರಾ ಸೆನ್ಸರ್ ಮತ್ತು ಸ್ನ್ಯಾಪ್ಡ್ರಾಗನ್ 439 ಪ್ರೊಸೆಸರ್
Redmi 7A ಸ್ಪರ್ಧೆಯು ಈಗಾಗಲೇ ಮಾರುಕಟ್ಟೆಯಲ್ಲಿರುವ Realme C2 ಸ್ಮಾರ್ಟ್ಫೋನಿಗೆ ಸಮಾನವಾಗಿದೆ.
2GB + 16GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 5,999 ರೂಗಳಾದರೆ 2GB + 32GB ಸ್ಟೋರೇಜ್ ರೂಪಾಂತರದ ಬೆಲೆ 6,199 ರೂಗಳಾಗಿವೆ.
ಚೀನಾದ ಸ್ಮಾರ್ಟ್‌ಫೋನ್ ಕಂಪನಿ Xiaomi ತನ್ನ ಬಜೆಟ್ ಸ್ಮಾರ್ಟ್‌ಫೋನ್ Redmi 7A ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಡಿಮೆ ಬೆಲೆಯ ಫೋನ್ ಅನೇಕ ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ಹಣಕ್ಕೆ ತಕ್ಕ ಫೋನ್‌ಗಳ ಮೌಲ್ಯವನ್ನು ನೀಡುತ್ತದೆ. ಈ ಸ್ಮಾರ್ಟ್ "ದೇಶ್ ಕಾ ಸ್ಮಾರ್ಟ್ಫೋನ್" ಎಂದು ಸಹ ಕಂಪನಿ ಹೇಳುತ್ತದೆ. ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ವಿಶ್ವಾಸ ಹೊಂದಿದೆ. ಮತ್ತು ಅದರ ಮೇಲೆ ಎರಡು ವರ್ಷಗಳ ಖಾತರಿಯನ್ನು ಸಹ ನೀಡುತ್ತಿದೆ. ಇದಕ್ಕೂ ಮುಂಚೆಯೇ ಕಂಪನಿಯು ಈಗಾಗಲೇ ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ Redmi 7, Note 7s ಮತ್ತು Note 7 Pro ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ.
ಇದನ್ನು Xiaomi ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆ ಮಾಡಿದ Redmi 6A ಸ್ಮಾರ್ಟ್ಫೋನಿನ ಅಪ್ಗ್ರೇಡ್ ಆವೃತ್ತಿಯಾಗಿ ಬಿಡುಗಡೆ ಮಾಡಿತು. Redmi 7A ಸ್ಮಾರ್ಟ್ಫೋನ್ 2GB + 16GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 5,999 ರೂಗಳಾದರೆ 2GB + 32GB ಸ್ಟೋರೇಜ್ ರೂಪಾಂತರದ ಬೆಲೆ 6,199 ರೂಗಳಾಗಿವೆ. ಇದನ್ನು ಜುಲೈನಲ್ಲಿ ಈ ಫೋನ್ ಖರೀದಿಸುವ ಬೆಲೆಯಲ್ಲಿ ನಿಮಗೆ 200 ರೂಪಾಯಿ ರಿಯಾಯಿತಿ ಸಿಗುತ್ತದೆ. Redmi 7A ಸ್ಪರ್ಧೆಯು ಈಗಾಗಲೇ ಮಾರುಕಟ್ಟೆಯಲ್ಲಿರುವ Realme C2 ಸ್ಮಾರ್ಟ್ಫೋನಿಗೆ ಸಮಾನವಾಗಿದೆ.
ನೀವು ಈ ಫೋನ್ ಅನ್ನು ಕೈಯಲ್ಲಿ ತೆಗೆದುಕೊಂಡಾಗ ನೀವು ನೋಡಬಹುದಾದ ಮೊದಲನೆಯದು ಅಂಶವೆಂದರೆ ಇದು ಹಳೆಯ ಫೋನ್ಗಳ ವಿನ್ಯಾಸವನ್ನು ಪಡೆದಿರುವುದು. ಮೇಲೆ ಮತ್ತು ಕೆಳಭಾಗದಲ್ಲಿ ದಪ್ಪದಾದ ಬೆಝಲ್ ಕಂಡುಬರುತ್ತದೆ. ಅದು ಇತರ ಸೆಗ್ಮೆಂಟ್ ಫೋನ್‌ಗಳಲ್ಲಿಯೂ ಕಂಡುಬರುತ್ತದೆ ಆದರೆ ಇದರಲ್ಲಿ ಹೆಚ್ಚಾಗಿದೆ. ಇದರ ಬ್ಯಾಕ್ ಪ್ಯಾನಲ್ ಸ್ವಲ್ಪ ವಿಭಿನ್ನವಾಗಿದೆ ಏಕೆಂದರೆ ಇದು ಲಂಬವಾದ ಹಿಂಭಾಗದ ಕ್ಯಾಮೆರಾ ಸೆಟಪ್ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 439 ಪ್ರೊಸೆಸರ್ ಹೊಂದಿದೆ. ಇದು ಆಕ್ಟಾ-ಕೋರ್ ಸಿಪಿಯು ಮತ್ತು ಅಡ್ರಿನೊ 505 ಜಿಪಿಯು ಹೊಂದಿದೆ.
ಈ Redmi 7A ದೊಡ್ಡದಾದ ಬ್ಯಾಟರಿ ಮತ್ತು ಅಪ್‌ಗ್ರೇಡ್ ಸ್ಪೆಸಿಫಿಕೇಶನ್ ಹೊಂದಿರುವ ಮೂಲದ ಫೋನ್ ಆಗಿದೆ. ಇದು ಕಾಂಪ್ಟಿಟರ್ ಗಿಂತ ಉತ್ತಮ ಚಿಪ್‌ಸೆಟ್ ಮತ್ತು 2PI ಲೇಪನವನ್ನು ಒದಗಿಸುತ್ತದೆ. ಫೋನಿನ ಕಾರ್ಯಕ್ಷಮತೆಯ ಬಗ್ಗೆ ಇದರ ಸಂಪೂರ್ಣವಾದ ವಿಮರ್ಶೆಯಲ್ಲಿ ನಾನು ನಿಮಗೆ ತಿಳಿಸುತ್ತೇನೆ. ಭಾರತದಲ್ಲಿ ಈ ಫೋನ್‌ನ ಮೊದಲ ಸೆಲ್ ಅನ್ನು ಜುಲೈ 11 ರಿಂದ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು Mi.ಕಾಮ್, ಫ್ಲಿಪ್‌ಕಾರ್ಟ್ ಮತ್ತು Mi ಹೋಮ್ ಸ್ಟೋರ್‌ನಿಂದ ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile