Redmi 14C 5G Launched in India: ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ರೆಡ್ಮಿ (Redmi) ಇಂದು 6ನೇ ಜನವರಿ 2025 ರಂದು ತನ್ನ ಲೇಟೆಸ್ಟ್ Redmi 14C 5G ಸ್ಮಾರ್ಟ್ ಫೋನ್ ಅನ್ನು ಅಧಿಕೃತವಾಗಿ ಗ್ಲಾಸ್ ಬ್ಯಾಕ್‌ನೊಂದಿಗೆ 3 ಬಣ್ಣದ ಆಯ್ಕೆಗಳಲ್ಲಿ ಅನಾವರಣಗೊಳಿಸಿದೆ. ಈ Redmi 14C 5G ಸ್ಮಾರ್ಟ್ ಫೋನ್ 120Hz ರೆಸಲ್ಯೂಶನ್‌ನೊಂದಿಗೆ 6.88 ಇಂಚಿನ ಡಿಸ್‌ಪ್ಲೇ ಮತ್ತು ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರ ಆರಂಭಿಕ ಕೇವಲ ₹9,999 ರೂಗಳಿಗೆ ನಿಗದಿಪಡಿಸಿದ್ದು ಇದರ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಿರಿ.
ಇಂದು ಬಿಡುಗಡೆಯಾಗಿರುವ Redmi 14C 5G ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ ₹9,999 ರೂಗಳಾಗಿದ್ದು ಇದರ ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ₹10,999 ರೂಗಳಾಗಿದೆ.
ಇದರ ಕೊನೆಯ ರೂಪಾಂತರ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ₹11,999 ರೂಗಳಾಗಿದೆ ಬಿಡುಗಡೆಯಾಗಿದೆ. ಈ ಫೋನ್ ಸ್ಟಾರ್‌ಲೈಟ್ ಬ್ಲೂ, ಸ್ಟಾರ್‌ಡಸ್ಟ್ ಪರ್ಪಲ್ ಮತ್ತು ಸ್ಟಾರ್‌ಗೇಜ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ ಈ Redmi 14C 5G ಮೊದಲ ಮಾರಾಟವನ್ನು Amazon, Flipkart, Mi.com ಮತ್ತು Xiaomi ಸ್ಟೋರ್ಗಳ ಮೂಲಕ 10ನೇ ಜನವರಿ 2025 ರಿಂದ ಮಧ್ಯಾಹ್ನ 12:00 IST ಕ್ಕೆ ಪ್ರಾರಂಭವಾಗಲಿದೆ.
Also Read: iPhone 16 ಮೇಲೆ ಬರೋಬ್ಬರಿ ₹11000 ರೂಗಳ ಜಬರ್ದಸ್ತ್ ಡಿಸ್ಕೌಂಟ್! ಹೊಸ ಬೆಲೆ ಮತ್ತು ಆಫರ್ಗಳೇನು?
ಈ ಲೇಟೆಸ್ಟ್ Redmi 14C 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.88 ಇಂಚಿನ HD+ (720×1640 ಪಿಕ್ಸೆಲ್‌ಗಳು) LCD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Redmi 14C 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಹ್ಯಾಂಡ್ಸೆಟ್ 8MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದೆ.
Redmi 14C 5G ಸ್ಮಾರ್ಟ್ಫೋನ್ 4nm Snapdragon 4 Gen 2 ಹೊಂದಿದ್ದು LPDDR4X RAM ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ಆನ್‌ಬೋರ್ಡ್ RAM ಅನ್ನು ವಾಸ್ತವಿಕವಾಗಿ 12GB ವರೆಗೆ ವಿಸ್ತರಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬೀಡೌ, ವೈ-ಫೈ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಇದರಲ್ಲಿ 5160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವುದರೊಂದಿಗೆ 33W ಇನ್‌ಬಾಕ್ಸ್ ಚಾರ್ಜರ್ ಸಹ ನೀಡುತ್ತಿದೆ.