50MP ಪ್ರೈಮರಿ ಕ್ಯಾಮೆರಾದ Redmi 13C ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

ಭಾರತದಲ್ಲಿ ರೆಡ್ಮಿ ಫೋನ್ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಶೀಘ್ರದಲ್ಲೇ ತಮ್ಮ C ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. 5000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ Redmi 13C ಅನ್ನು ಭಾರತದಲ್ಲಿ ಡಿಸೆಂಬರ್ 6 ರಂದು ಬಿಡುಗಡೆ ಮಾಡುವುದನ್ನು ಕಂಪನಿ ಖಚಿತಪಡಿಸಿದೆ. ಆದ್ದರಿಂದ ಈವರೆಗೆ ಈ ಸ್ಮಾರ್ಟ್ಫೋನ್ ಬಗ್ಗೆ ಹೊರ ಬಂದಿರುವ ಮಾಹಿತಿಗಳೊಂದಿಗೆ ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳನ್ನು ತಿಳಿಯೋಣ.
Also Read: Tips and Tricks: ನಿಮ್ಮ ಹಳೆ ಸ್ಮಾರ್ಟ್ಫೋನ್ ಅನ್ನು ಸೂಪರ್ ಫಾಸ್ಟ್ ಮಾಡಲು ಈ ಟಿಪ್ಸ್ ಅನುಸರಿಸಿ ಸಾಕು!
Redmi 13C ವಿಶೇಷಗಳಗಳೇನು?
ಮುಂಬರಲಿರುವ ಈ ಸ್ಮಾರ್ಟ್‌ಫೋನ್ 6.74 ಇಂಚಿನ HD+ LCD ಡಿಸ್‌ಪ್ಲೇಯನ್ನು 90Hz ರಿಫ್ರೆಶ್ ರೇಟ್‌ನೊಂದಿಗೆ ಒಳಗೊಂಡಿರುವ ನಿರೀಕ್ಷೆಯಿದೆ. ಇದು ಬಳಕೆದಾರರಿಗೆ ರೋಮಾಂಚಕ ಮತ್ತು ಸುಗಮ ದೃಶ್ಯ ಅನುಭವವನ್ನು ನೀಡುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 50MP ಪ್ರೈಮರಿ ಸೆನ್ಸರ್, 2MP ಮ್ಯಾಕ್ರೋ ಶೂಟರ್ ಮತ್ತು ಹೆಚ್ಚುವರಿ ಆಕ್ಸಿಲರಿ ಸೆನ್ಸರ್ ಲೆನ್ಸ್ ಅನ್ನು ಒಳಗೊಂಡಿರುತ್ತದೆ ಎಂದು ವದಂತಿಗಳಿವೆ. ಮುಂಭಾಗದಲ್ಲಿ ಸ್ಮಾರ್ಟ್ಫೋನ್ ಸೆ;ಸೆಲ್ಫಿ ಮತ್ತು ವಿಡಿಯೋ ಕರೆಗಳಗಾಗಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದುವ ಸಾಧ್ಯತೆಯಿದೆ.
Unveiling the all-new #Redmi13C in a captivating #StarShineDesign, infusing the cosmos into your palm.
— Redmi India (@RedmiIndia) November 27, 2023
Get ready to witness this cosmic beauty with the perfect blend of innovation.
Launching on 6th December 2023.
Know more: https://t.co/UntV8tJCLx pic.twitter.com/H7KFHmTmZY
Redmi 13C ಸ್ಮಾರ್ಟ್ಫೋನ್ ಜಾಗತಿಕ ರೂಪಾಂತರವು 12nm MediaTek Helio G85 ಪ್ರೊಸೆಸರ್ನಿಂದ ಚಾಲಿತವಾದರೆ ಇದರ ಕ್ರಮವಾಗಿ ಭಾರತೀಯ ಮಾದರಿಯು MediaTek Helio G99 ಪ್ರೊಸೆಸರ್ನಿಂದ ನಡೆಯುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಸಾಫ್ಟ್‌ವೇರ್‌ಗಾಗಿ ಆಂಡ್ರಾಯ್ಡ್ 13-ಆಧಾರಿತ MIUI 14 ಆಯ್ಕೆಯು ಲೇಟೆಸ್ಟ್ ಫೀಚರ್ಸ ಮತ್ತು ಅಪ್‌ಡೇಟ್‌ಗಳೊಂದಿಗೆ ಬಳಕೆದಾರ ಇಂಟರ್ಫೇಸ್ ಅನ್ನು ಖಾತ್ರಿಗೊಳಿಸಲು ಸಿದ್ಧವಾಗಿದೆ.
ಇದರಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಫೋನ್ USB Type-C ಚಾರ್ಜಿಂಗ್ ಪೋರ್ಟ್‌ನೊಂದಿಗೆ ಮೂಲಕ 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಫೋನ್ ಜಾಗತಿಕ ಮಾರುಕಟ್ಟೆಗಳಿಗೆ Helio G85 ಪ್ರೊಸೆಸರ್ನಿಂದ ಚಾಲಿತವಾಗಿದೆ. POCO C65 ನಂತೆಯೇ ಆದರೆ ಆನ್‌ಲೈನ್ ಪಟ್ಟಿಯಲ್ಲಿ ಮಾದರಿಯು ಕಾಣಿಸಿಕೊಂಡ ನಂತರ ಇದು ಭಾರತಕ್ಕೆ Helio G99 ಪ್ರೊಸೆಸರ್ನಿಂದ ಬರುವ ವದಂತಿಗಳಿವೆ.
ರೆಡ್ಮಿ 13C ಬೆಲೆ ಮತ್ತು ಲಭ್ಯತೆ
ಇದರ ಬಗ್ಗೆ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಸಹ ಮಾಡಿದ್ದು ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾಹಿತಿ ನೋಡುವುದುದಾದರೆ ಇದನ್ನು ಭಾರತದಲ್ಲಿ ಒಟ್ಟು 3 ವೇರಿಯೆಂಟ್‌ಗಳಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಅವೆಂದರೆ 4GB + 64GB, 6GB + 128GB, 6GB + 256GB ಸ್ಟೋರೇಜ್ ವೇರಿಯೆಂಟ್ನೊಂದಿಗೆ ಸುಮಾರು 11,999 ರೂಗಳಿಂದ ಶುರುವಾಗುವ ನಿರೀಕ್ಷೆಗಳಿವೆ. ಆದರೆ ಇದರ ರೂಪಾಂತರ ಮತ್ತು ಬೆಲೆಗೆ ಬಗ್ಗೆ ಕಂಪನಿ ಇನ್ನೂ ಯಾವುದೇ ಮಾಹಿತಿಗಳನ್ನು ನೀಡದ ಕಾರಣ ಡಿಸೆಂಬರ್ 6 ವರೆಗೆ ಕಾಯಬೇಕಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile