Redmi 12 ಭಾರತದಲ್ಲಿ ಆ. 1ಕ್ಕೆ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Redmi 12 ಫೋನ್ ಜೇಡ್ ಬ್ಲಾಕ್, ಮೂನ್‌ಸ್ಟೋನ್ ಸಿಲ್ವರ್ ಮತ್ತು ಪಾಸ್ಟಲ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ
Redmi 12 ಹಿಂಭಾಗದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಯೂನಿಟ್ ಉತ್ತಮವಾಗಿ ಆಕರಿಸಲಾಗಿದೆ.
Redmi 12 ಭಾರತದಲ್ಲಿ ಈ ಸ್ಮಾರ್ಟ್ಫೋನ್ Amazon ಮತ್ತು Flipkart ಮೂಲಕ ಖರೀದಿಗೆ ಲಭ್ಯವಿರುತ್ತದೆ.
Redmi ಇಂಡಿಯಾ ತನ್ನ ಸರಣಿ ಟ್ವೀಟ್‌ಗಳಲ್ಲಿ Redmi 12 ಭಾರತೀಯ ವೇರಿಯಂಟ್ ಬಣ್ಣ ಆಯ್ಕೆಗಳನ್ನು ಅದರ ಬಿಡುಗಡೆಗೆ ಮುಂಚಿತವಾಗಿ ದೃಢಪಡಿಸಿದೆ. ಫೋನ್ ಜೇಡ್ ಬ್ಲಾಕ್, ಮೂನ್‌ಸ್ಟೋನ್ ಸಿಲ್ವರ್ ಮತ್ತು ಪಾಸ್ಟಲ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಬೆಳ್ಳಿಯ ಆಯ್ಕೆಯು ಅದರ ಮೇಲೆ ಬೆಳಕು ಬಿದ್ದಾಗ ಮಳೆಬಿಲ್ಲಿನಂತಹ ನೆರಳು ನೀಡುತ್ತದೆ. ಮಾದರಿಯು ಫ್ಲಾಟ್ ಪ್ಯಾನಲ್, ಬಾಗಿದ ಅಂಚುಗಳು ಮತ್ತು ಹೊಳಪು, ಲೋಹೀಯ ಮುಕ್ತಾಯದೊಂದಿಗೆ ಕಂಡುಬರುತ್ತದೆ. ಹಿಂಭಾಗದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಯೂನಿಟ್ ಉತ್ತಮವಾಗಿ ಆಕರಿಸಲಾಗಿದೆ.
Redmi 12 ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
Redmi 12 ನ ಮೂಲ 4GB + 128GB ವೇರಿಯಂಟ್ ಕೆಲವು ಯುರೋಪಿಯನ್ ಮಾರುಕಟ್ಟೆಗಳಲ್ಲಿ EUR 199 (ಸುಮಾರು ರೂ. 17,000) ನಲ್ಲಿದೆ. ಫೋನ್ ಥೈಲ್ಯಾಂಡ್‌ನಲ್ಲಿ 8GB + 128GB ಆಯ್ಕೆಯು THB 5,299 (ಸುಮಾರು ರೂ. 12,500) ನಲ್ಲಿ ಪಟ್ಟಿಮಾಡಲಾಗಿದೆ. ಹ್ಯಾಂಡ್‌ಸೆಟ್‌ನ ಗ್ಲೋಬಲ್ ವೇರಿಯಂಟ್ ಅನ್ನು ಮಿಡ್‌ನೈಟ್ ಬ್ಲ್ಯಾಕ್, ಪೋಲಾರ್ ಸಿಲ್ವರ್ ಮತ್ತು ಸ್ಕೈ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರುವ ನಿರೀಕ್ಷೆ. ಅಲ್ಲದೆ ಭಾರತದಲ್ಲಿ ಈ ಸ್ಮಾರ್ಟ್ಫೋನ್ Amazon ಮತ್ತು Flipkart ಮೂಲಕ ಖರೀದಿಗೆ ಲಭ್ಯವಿರುತ್ತದೆ.
You asked and here it is, #XiaomiFans!
Introducing the perfect blend of beauty & innovation, #Redmi 12 with crystal glass design and our style icon @DishPatani.
Launching on 1st August.
Get notified: https://t.co/Nma0jKE9Ye pic.twitter.com/7bAuQ4dAW7— Redmi India (@RedmiIndia) July 10, 2023
Redmi 12 ನಿರೀಕ್ಷಿತ ವಿಶೇಷತೆಗಳು
ಮುಂಬರಲಿರುವ ಹೊಸ Redmi 12 ಸ್ಮಾರ್ಟ್ಫೋನ್ ನಿಮಗೆ ಗ್ಲೋಬಲ್ ವೇರಿಯಂಟ್ ನಾವು ಭಾರತದಲ್ಲಿ ಪಡೆಯುತ್ತಿದ್ದರೆ ನೀವು ಈ ಕೆಳಗಿನ ವಿಶೇಷಣಗಳನ್ನು ನಿರೀಕ್ಷಿಸಬಹುದು. Redmi 12 ಸ್ಮಾರ್ಟ್ಫೋನ್ 6.79 ಇಂಚಿನ ಫುಲ್ HD+ (1080 x 2460 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು 90Hz ವರೆಗಿನ ರಿಫ್ರೆಶ್ ದರದೊಂದಿಗೆ ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ. ಜಾಗತಿಕ ರೂಪಾಂತರವು MediaTek Helio G88 SoC ಯಿಂದ 8GB ವರೆಗೆ LPDDR4X RAM ಮತ್ತು 256GB ವರೆಗಿನ eMMC 5.1 ಇಂಟರ್ನಲ್ ಸ್ಟೋರೇಜ್ ಅನ್ನು ಜೋಡಿಸಲ್ಪಟ್ಟಿದೆ.
ಕೊನೆಯದಾಗಿ Redmi 12 ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 8MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು ಮ್ಯಾಕ್ರೋ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಸೆನ್ಸರ್ ಜೊತೆಗೆ ಬರುತ್ತದೆ. ಅಲ್ಲದೆ ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಕೊನೆಯದಾಗಿ 18W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile