Redmi 12 5G: ಭಾರತದಲ್ಲಿ Xiaomi ಲೇಟೆಸ್ಟ್ ಸ್ಮಾರ್ಟ್ಫೋನ್ ಮುಂದಿನ ವಾರ ಬಿಡುಗಡೆ! ನಿರೀಕ್ಷೆಗಳೇನು?

Redmi 12 5G: ಭಾರತದಲ್ಲಿ Xiaomi ಲೇಟೆಸ್ಟ್ ಸ್ಮಾರ್ಟ್ಫೋನ್ ಮುಂದಿನ ವಾರ ಬಿಡುಗಡೆ! ನಿರೀಕ್ಷೆಗಳೇನು?
HIGHLIGHTS

ಮುಂಬರುವ Redmi 12 5G ಸ್ಮಾರ್ಟ್ಫೋನ್ ಭಾರತದಲ್ಲಿ ಆಗಸ್ಟ್ 1 ರಂದು ಅನಾವರಣಗೊಳ್ಳಲಿದೆ

Redmi 12 5G ಸ್ಮಾರ್ಟ್ಫೋನ್ ತನ್ನ Redmi Watch 3 Active ಜೊತೆಗೆ ಮಾರುಕಟ್ಟೆಗೆ ಕಾಲಿಡುವ ನಿರೀಕ್ಷೆ

Redmi 12 5G ಸ್ಮಾರ್ಟ್ಫೋನ್ 50MP ಬ್ಯಾಕ್ ಕ್ಯಾಮೆರಾ ಸೆಟಪ್ ಮತ್ತು 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ

ಭಾರತದಲ್ಲಿ ಅತಿ ನಿರೀಕ್ಷಿತ ಮುಂಬರಲಿರುವ Redmi 12 5G ಭಾರತದಲ್ಲಿ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಇಲ್ಲಿಯವರೆಗೆ ಕಂಪನಿಯು ಭಾರತಕ್ಕಾಗಿ Redmi 12 ಸರಣಿಯಲ್ಲಿ ಕೇವಲ 4G ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಿತ್ತು ಆದರೆ ಈಗ ಅದೇ ಸರಣಿಯನ್ನು ಹೊಸ ಫೀಚರ್ಗಳೊಂದಿಗೆ 5G ಅನ್ನು ಟ್ಯಾಗ್ ಮಾಡಿ Redmi 12 5G ಮಾರುಕಟ್ಟೆಗೆ ತರಲಿದೆ. ಹೆಚ್ಚುವರಿಯಾಗಿ Redmi Watch 3 Active ಅನ್ನು ಅದೇ ದಿನದಲ್ಲಿ ಘೋಷಿಸಲಾಗುತ್ತದೆ. ಇತ್ತೀಚೆಗೆ ಭಾರತದಲ್ಲಿ Redmi 12 5G ಬಗ್ಗೆ ಬೆಲೆ ಮತ್ತು ನಿರೀಕ್ಷಿತ ಮಾಹಿತಿಗಳನ್ನು ಮುಂದೆ ನೋಡೋಣ.

Redmi 12 5G

ಮೈಕ್ರೋಸೈಟ್ ಮೂಲಕ Redmi 12 5G ತನ್ನ ಜಾಗತಿಕ ಬಿಡುಗಡೆಯನ್ನು ಆಗಸ್ಟ್ 1 ರಂದು ಭಾರತದಲ್ಲಿ ಮಾಡುತ್ತದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಸ್ಮಾರ್ಟ್‌ಫೋನ್ 50MP ಹಿಂಬದಿಯ ಕ್ಯಾಮೆರಾ ಸೆಟಪ್, 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ ಎಂದು ವೆಬ್‌ಸೈಟ್ ಖಚಿತಪಡಿಸುತ್ತದೆ. ಟೀಸರ್ ಪ್ರಕಾರ ಮುಂಬರುವ Redmi 12 5G ಸ್ಮಾರ್ಟ್ಫೋನ್ ಅನ್ನು ಕಂಪನಿ Join the 5G Revolution ಅನ್ನು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದೆ.

Redmi 12 5G ನಿರೀಕ್ಷಿತ ವಿವರಗಳು

ಈ ಮುಂಬರಲಿರುವ Redmi 12 5G ಅನ್ನು ಇತ್ತೀಚೆಗೆ ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್ ಮತ್ತು 8GB RAM ನೊಂದಿಗೆ Geekbench ನಲ್ಲಿ ಗುರುತಿಸಲಾಗಿದೆ. ಇದಲ್ಲದೆ ಫೋನ್ ಕ್ರಿಸ್ಟಲ್ ಗ್ಲಾಸ್ ಡಿಸೈನ್ ಅನ್ನು ಹೊಂದಿದೆ. ಮತ್ತು ಮಳೆಬಿಲ್ಲು ವರ್ಣಗಳೊಂದಿಗೆ ಮೂನ್‌ಸ್ಟೋನ್ ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ವೈಶಿಷ್ಟ್ಯಗಳ ಪ್ರಕಾರ ಸ್ಮಾರ್ಟ್‌ಫೋನ್ 50MP ಪ್ರೈಮರಿ ಕ್ಯಾಮೆರಾ, 8GB RAM, 256GB ಇಂಟರ್ನಲ್ ಸ್ಟೋರೇಜ್ ಮತ್ತು 5000mAh ಬ್ಯಾಟರಿಯನ್ನು ಸಹ ಒಳಗೊಂಡಿರುತ್ತದೆ. 

Redmi 12 5G ನಿರೀಕ್ಷಿತ ಬೆಲೆ

ಇತ್ತೀಚೆಗೆ Redmi 12 5G ಮತ್ತು Redmi 12 4G ಯ ಭಾರತದ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿದೆ. ಎರಡೂ ಫೋನ್‌ಗಳು Android 13-ಆಧಾರಿತ MIUI 14 ನಲ್ಲಿ ರನ್ ಆಗುತ್ತವೆ ಮತ್ತು Amazon ನಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಲಭ್ಯವಿರುತ್ತವೆ. ಭಾರತದ ಬೆಲೆಗೆ ಸಂಬಂಧಿಸಿದಂತೆ Redmi 12 5G ಭಾರತದಲ್ಲಿ ಸುಮಾರು ರೂ 13,999 ರಿಂದ ಪ್ರಾರಂಭವಾಗುವ ನಿರೀಕ್ಷೆ. ಆದರೆ 4G ಮಾದರಿಯು ಈಗಾಗಲೇ ರೂ 9,999 ರಿಂದ ಪ್ರಾರಂಭವಾಗುತ್ತದೆ. ಈ ಫೋನ್ ಕೆಲವೇ ದಿನಗಳಲ್ಲಿ ಅಧಿಕೃತ ಬೆಲೆ ಮತ್ತು ಫೀಚರ್ ಎಲ್ಲವನ್ನು ನೀಡಲಿದ್ದು ಅದಕ್ಕಾಗಿ ನೀವು ಡಿಜಿಟ್ ಕನ್ನಡವನ್ನು ಫಾಲೋ ಮಾಡುತ್ತೀರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo