Redmi 11 vs Galaxy F23 vs POCO M4 Pro: ಪ್ರತಿಯೊಬ್ಬರೂ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಹೋದಾಗ ಮುಖ್ಯವಾಗಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ, RAM ಇತ್ಯಾದಿಯನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಎಷ್ಟು ಮುಖ್ಯವೋ ಅದರ ಕ್ಯಾಮೆರಾವೂ ಅಷ್ಟೇ ಮುಖ್ಯವಾಗಿರುತ್ತದೆ. ನೀವು ಸಹ ಬಜೆಟ್ ಶ್ರೇಣಿಯೊಳಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ ಈ ಸ್ಟೋರಿ ಮೂಲಕ Redmi 11 Prime, Samsung Galaxy S23 ಮತ್ತು Poco M4 Pro 5G ಗಳಲ್ಲಿ ಯಾವುದರ ಕ್ಯಾಮೆರಾ ಬೆಸ್ಟ್ ಎಂದು ತಿಳಿಯಿರಿ.
ನೀವು ಸಹ ಬಜೆಟ್ ಶ್ರೇಣಿಯೊಳಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ ಇವುಗಳ ಬೆಲೆಯನ್ನು ತಿಳಿಯಿರಿ. ವಿಶೇಷವೆಂದರೆ ಈ ಮೂರು ಸ್ಮಾರ್ಟ್‌ಫೋನ್‌ಗಳು ಬಜೆಟ್ ಶ್ರೇಣಿಯೊಳಗೆ ಬರುತ್ತವೆ. Xiaomi Redmi 11 Prime 5G ಬೆಲೆ 14,999 ರೂ, Poco M4 Pro 5G ಬೆಲೆ 11,999 ರೂ ಆಗಿದ್ದು Samsung Galaxy F23 5G ಬೆಲೆ 14,999 ರೂ ಆಗಿದೆ.
ಕ್ಯಾಮೆರಾ ಬಗ್ಗೆ ಮಾತನಾಡುವ ಮೊದಲು ನಿಮ್ಮ ಬಜೆಟ್ ಎಷ್ಟು ಎಂಬುದು ಬಹಳ ಮುಖ್ಯ. ನೀವು Poco M4 Pro 5G ಸ್ಮಾರ್ಟ್‌ಫೋನ್ ಖರೀದಿಸಿದರೆ ಉಳಿದ 2 ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಏಕೆಂದರೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಅದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಆದರೆ ನಾವು ಈ 3 ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಬಗ್ಗೆ ಮಾತನಾಡುವುದಾದರೆ ಅದು Samsung Galaxy F23 ಫೋನ್ ಆಗಿರುತ್ತದೆ.
Poco M4 Pro 5G ಸ್ಮಾರ್ಟ್‌ಫೋನ್‌ನಲ್ಲಿ ನೀವು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೋಡಬಹುದು. ಇದರಲ್ಲಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಜೊತೆಗೆ ಅಪರ್ಚರ್ f / 1.8 ಮತ್ತು ಇನ್ನೊಂದು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಅಪರ್ಚರ್ f / 2.2 ಅನ್ನು ಒಳಗೊಂಡಿದೆ. Xiaomi Redmi 11 Prime 5G ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ಗಳು ಅಪರ್ಚರ್ f / 1.8 ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ಗಳು ಅಪರ್ಚರ್ f/ 2.4 ಅನ್ನು ಹೊಂದಿದೆ. Samsung Galaxy F 23 5G ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹಿಂಭಾಗದಲ್ಲಿ ಕಂಡುಬರುತ್ತದೆ. f/1.8 ರ ಅಪರ್ಚರ್ ನೊಂದಿಗೆ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, ಎರಡನೆಯದು f/2.2 ರ ಅಪರ್ಚರ್ ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಮೂರನೆಯದು f/2.4 ರ ಅಪರ್ಚರ್ ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ.
ಈ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ Samsung Galaxy F 23 5G ಫೋನ್ ಅತ್ಯುತ್ತಮವಾದ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹಿಂಭಾಗದಲ್ಲಿ ಕಂಡುಬರುತ್ತದೆ. ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ದೊಡ್ಡ ಅಪರ್ಚರ್ ಅನ್ನು ಹೊಂದಿದೆ. ಕ್ಯಾಮೆರಾದ ಅಪರ್ಚರ್ ಹೆಚ್ಚಾದಂತೆ ಕ್ಯಾಮೆರಾದ ಒಳಗೆ ಬೆಳಕು ಚೆನ್ನಾಗಿ ಹೊಂದಿದ್ದು ಫೋಟೋಗಳ ಗುಣಮಟ್ಟವೂ ಉತ್ತಮವಾಗಿರುತ್ತದೆ.