Redmi 11 Prime vs Infinix Note 12i ಟಾಪ್ 5 ಫೀಚರ್‌ಗಳಲ್ಲಿ ಯಾವುದು ಬೆಸ್ಟ್? ಬೆಲೆ ಎಷ್ಟು?

Updated on 21-Feb-2023
HIGHLIGHTS

Redmi 11 Prime ಸ್ಮಾರ್ಟ್ಫೋನ್ 6.58 ಇಂಚಿನ IPS LCD ಅನ್ನು ಒಳಗೊಂಡಿದೆ.

Infinix Note 12i ಸ್ಮಾರ್ಟ್ಫೋನ್ 6.5 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.

Redmi 11 Prime vs Infinix Note 12i ಎರಡೂ ಫೋನ್‌ಗಳು 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಹೊಂದಿವೆ.

Redmi 11 Prime vs Infinix Note 12i: ಭಾರತದಲ್ಲಿ ಬಜೆಟ್ ವಿಭಾಗವನ್ನು ಅತಿ ಹೆಚ್ಚಾಗಿ ಹುಡುಕಾಡುವ ಕಾರಣ ಈ Redmi 11 Prime ಮತ್ತು Infinix Note 12 ಎರಡು ಸ್ಮಾರ್ಟ್‌ಫೋನ್‌ಗಳನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದು ಇವೆರಡು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಾಗಿವೆ. ಇಂದು ನಾವು ಇವುಗಳ ಸಂಪೂರ್ಣ ಫೀಚರ್ ಹೋಲಿಸುತ್ತಿದ್ದೇವೆ. ಬಜೆಟ್ ಸ್ನೇಹಿ ಫೋನ್‌ಗಳಿಗೆ ಹೆಸರುವಾಸಿಯಾದ Redmi 11 Prime ಮತ್ತು Infinix Note 12i ಎರಡನ್ನೂ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುಮಾರು ರೂ 13,000 ಕ್ಕೆ ಬಿಡುಗಡೆ ಮಾಡಲಾಯಿತು. ಇವುಗಳ ಫೀಚರ್‌ಗಳೇನು ಇವೆರಡರಲ್ಲಿ ಯಾವುದು ಉತ್ತಮ ನೋಡೋಣ.

Redmi 11 Prime vs Infinix Note 12i ಡಿಸೈನ್

Redmi 11 Prime ನ ಬ್ಯಾಕ್ ಪ್ಯಾನೆಲ್ ಮತ್ತು ಫ್ರೇಮ್ ಫ್ಲಾಟ್ ವಿನ್ಯಾಸವನ್ನು ಹೊಂದಿದ್ದು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಎಡಭಾಗದಲ್ಲಿ ನೀವು ಎರಡು ಸಿಮ್ ಸ್ಲಾಟ್‌ಗಳೊಂದಿಗೆ ಸಿಮ್ ಟ್ರೇ ಅನ್ನು ನೋಡಬಹುದು ಮತ್ತು ಬಲಭಾಗದಲ್ಲಿ ನೀವು ವಾಲ್ಯೂಮ್ ಸ್ಲೈಡರ್‌ಗಳು ಮತ್ತು ಪವರ್ ಬಟನ್ ಅನ್ನು ಕಾಣಬಹುದು. ಫೋನ್‌ನ ಹಿಂಭಾಗದಲ್ಲಿ ಎರಡು ದೊಡ್ಡ ಕ್ಯಾಮೆರಾ ರಿಂಗ್‌ಗಳೊಂದಿಗೆ ಆಯತಾಕಾರದ ಕ್ಯಾಮೆರಾವನ್ನು ಒಳೊಂಡಿದೆ. Infinix Note 12i ಅದೇ ರೀತಿ ಪ್ಲಾಸ್ಟಿಕ್‌ನಿಂದ ಕೂಡಿದ್ದು ಬ್ರೈಟ್ ನೆಸ್ ವಿನ್ಯಾಸದಿಂದಾಗಿ ಗ್ಲಾಸ್ನಂತೆ ಭಾಸವಾಗುತ್ತದೆ. ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಕ್ರಿಸ್ಟಲ್-ಟೈಪ್ ವಿನ್ಯಾಸವನ್ನು ಹೊಂದಿದೆ. ಇದ್ರಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್, ವಾಲ್ಯೂಮ್ ರಾಕರ್‌ಗಳೊಂದಿಗೆ ಪವರ್ ಬಟನ್ ಅನ್ನು ಪಡೆಯುತ್ತೇವೆ ಮತ್ತು ಸಿಮ್ ಟ್ರೇ ಎಡಭಾಗದಲ್ಲಿದೆ. ಈ ಫೋನ್‌ ಫೋರ್ಸ್ ಬ್ಲಾಕ್, ಆಲ್ಪೈನ್ ವೈಟ್ ಮತ್ತು ಮೆಟಾವರ್ಸ್ ಬ್ಲೂ ಕಲರ್‌ಗಳಲ್ಲಿ ಲಭ್ಯವಿದೆ.

Redmi 11 Prime vs Infinix Note 12i ಡಿಸ್ಪ್ಲೇ

Redmi 11 Prime ಫೋನ್ 6.58 ಇಂಚಿನ IPS LCD ಡಿಸ್ಪ್ಲೇಯೊಂದಿಗೆ 1080 x 2408 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ ಮತ್ತು 90Hz ನ ರಿಫ್ರೆಶ್ ದರವನ್ನು ಹೊಂದಿದೆ. ಮತ್ತೊಂದೆಡೆ Infinix Note 12i ಸ್ಮಾರ್ಟ್ಫೋನ್ 6.5 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 

Redmi 11 Prime vs Infinix Note 12i ಕಾರ್ಯಕ್ಷಮತೆ

Redmi 11 Prime ಸ್ಮಾರ್ಟ್ಫೋನ್ Mediatek ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು 4GB ಮತ್ತು 6GB RAM ನೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್ 12 ಆಧಾರಿತ MIUI 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಮೂರು ಸ್ಟೋರೇಜ್ ಸಾಮರ್ಥ್ಯಗಳನ್ನು ಹೊಂದಿದ್ದು ಅದು 64GB 4GB RAM, 128GB 4GB RAM ಮತ್ತು 128GB 6GB RAM ಆಗಿದೆ. ಇದು 5000mAh ಬ್ಯಾಟರಿ ಮತ್ತು ಫಾಸ್ಟ್‌ ಚಾರ್ಜಿಂಗ್‌ಗಾಗಿ 18-ವ್ಯಾಟ್ ಬೆಂಬಲವನ್ನು ಹೊಂದಿದೆ. Infinix Note 12i 4GB ಮತ್ತು  6GB RAM ಜೊತೆಗೆ MediaTek Helio G85 ಪ್ರೊಸೆಸರ್ ಅನ್ನು ಹೊಂದಿದೆ. 2 ಸ್ಟೋರೇಜ್ ಕಾನ್ಫಿಗರೇಶನ್‌ಗಳು ಲಭ್ಯವಿದ್ದು 64GB ಜೊತೆಗೆ 4GB RAM ಮತ್ತು 128GB ಜೊತೆಗೆ 6GB RAM ಅನ್ನು ಒಳಗೊಂಡಿದೆ. ಫೋನ್ ಆಂಡ್ರಾಯ್ಡ್ 12 ಆಧಾರಿತ Infinix OS XOS 10.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5000mAh ಬ್ಯಾಟರಿಯನ್ನು ಹೊಂದಿದ್ದು 33-ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Redmi 11 Prime vs Infinix Note 12i ಕ್ಯಾಮೆರಾ

Redmi 11 Prime ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್  ಸೆನ್ಸರ್ ಅನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಸೆಲ್ಫಿಗಾಗಿ ಫ್ರಂಟ್ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. Infinix Note 12i 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್  ಸೆನ್ಸರ್ ಅನ್ನು ಹೊಂದಿರುವ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದು ಫ್ರಂಟ್ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Redmi 11 Prime vs Infinix Note 12i ಬೆಲೆ

Redmi 11 Prime 4GB ಮತ್ತು 6GB RAM ನೊಂದಿಗೆ ಜೋಡಿಸಲಾಗಿದೆ. Infinix Note 12i 4GB ಮತ್ತು  6GB RAM ಜೋಡಿಸಲಾಗಿದೆ. Amazon ನಲ್ಲಿ Redmi Note 11 Prime ರೂ 13,999 ಕ್ಕೆ ಲಭ್ಯವಿದೆ. ಮತ್ತೊಂದೆಡೆ Flipkart Infinix Note 12i ಅನ್ನು ರೂ 9,999 ಕ್ಕೆ ನೀಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :