Realme 3 ವಾಟರ್ಡ್ರಾಪ್ ನಾಚ್ ಡಿಸ್ಪ್ಲೇ ಮತ್ತು 4230mAh ಬ್ಯಾಟರಿಯೊಂದಿಗೆ ಇಂದು ಅನಾವರಣಗೊಳ್ಳಲಿದೆ.

Updated on 04-Mar-2019
HIGHLIGHTS

Realme 3 ಡ್ಯೂಯಲ್ ಹಿಂಬದಿಯ ಕ್ಯಾಮರಾ ಸೆಟಪ್ ಅನ್ನು ಸ್ಪಷ್ಟವಾಗಿ ತೋರಿಸುತ್ತದೆ.

ರಿಯಲ್ಮಿಇಂದು ಭಾರತದಲ್ಲಿ ತನ್ನ ಹೊಸ ಫೋನನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಈ ಹೊಸ ಅದ್ದೂರಿಯ ಸ್ಮಾರ್ಟ್ಫೋನನ್ನು ಕಂಪನಿ Realme 3 ಎಂದು ಹೆಸರಿಸಿದೆ. ಈ ಫೋನ್ 12nm ಮೀಡಿಯಾ ಟೆಕ್ ಹೆಲಿಯೊ P70 ಸೋಕ್ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಮಾದರಿಯಲ್ಲಿ ಡ್ಯುಯಲ್ ಹಿಂಭಾಗದ ಕ್ಯಾಮೆರಾ ಸೆಟಪ್ ಇರುವಿಕೆಯನ್ನೂ ರಿಯಲ್ಮಿ ದೃಢಪಡಿಸಿದರು. ಇದಲ್ಲದೆ Realme 3 ಫಿಂಗರ್ಪ್ರಿಂಟ್ ಸೆನ್ಸರೊಂದಿಗೆ ಬರುತ್ತದೆ. ಮತ್ತು ಕನಿಷ್ಟ ಎರಡು ವಿಭಿನ್ನ ರೂಪಾಂತರಗಳಲ್ಲಿ ಬರುತ್ತದೆ. 

https://twitter.com/realmemobiles/status/1102465683139420160?ref_src=twsrc%5Etfw

ಇದು ಡೈಮಂಡ್ ಕಟ್ ಕೇಸ್ ಜೊತೆಗೆ ಇಂದು ಕಂಪನಿ Realme 3 Pro ತರುವ ಶಂಕೆ ಇದೆ ಆದರೆ ಇದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಈ ಹೊಸ Realme 3 ಬಿಡುಗಡೆ ಸಮಾರಂಭವು ನವ ದೆಹಲಿಯಲ್ಲಿ ನಡೆಯುತ್ತಿದೆ. ಈವೆಂಟ್ ಇಂದು ಮಧ್ಯಾಹ್ನ 12:00 ಗಂಟೆಗೆ  ಪ್ರಾರಂಭವಾಗಲಿದೆ. ಇದು ತನ್ನದೇಯಾದ YouTube ಚಾನಲಲ್ಲಿ ಲೈವ್ ಆಗಿ ಸ್ಟ್ರೀಮ್ ಮಾಡಲಾಗುತ್ತದೆ. ಇದಲ್ಲದೆ ನೀವು ಇಲ್ಲಿಯೇ Realme 3 ಇಂಡಿಯಾ ಪ್ರಾರಂಭಿಸುವ ಲೈವ್ ಅನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Realme 3 ಫೋನಲ್ಲಿ 12nm ಮೀಡಿಯಾ ಟೆಕ್ ಹೆಲಿಯೊ P70 SoC ನೀಡಲಾಗಿದೆ. ಅಲ್ಲದೆ ಹೊಸ ಮಾದರಿಯು ವಾಟರ್ಡ್ರಾಪ್ ನಾಚ್  ಡಿಸ್ಪ್ಲೇಯೊಂದಿಗೆ ಬರುತ್ತದೆ ಎಂದು ಮೈಕ್ರೊಸೈಟ್ ತೋರಿಸುತ್ತದೆ. Realme 3 ಸ್ಮಾರ್ಟ್ಫೋನ್ ಕೂಡ 4230mAh ಬ್ಯಾಟರಿ ಹೊಂದಿದೆಯೆಂದು ದೃಢೀಕರಿಸಿದೆ ಹಿಂದಿನ ಅಧಿಕೃತ ಟೀಸರ್ Realme 3 ಡ್ಯೂಯಲ್ ಹಿಂಬದಿಯ ಕ್ಯಾಮರಾ ಸೆಟಪ್ ಅನ್ನು ಸ್ಪಷ್ಟವಾಗಿ ತೋರಿಸುತ್ತದೆ.  ವಜ್ರದ ಇದಲ್ಲದೆ ಇದು ಬ್ಲೂಟೂತ್ v4.2 ಬೆಂಬಲದೊಂದಿಗೆ ಬರಲು ಊಹಿಸಲಾಗಿದೆ. ಇದರ ಹೆಚ್ಚಿನ ಮಾಹಿತಿ ಬಿಡುಗಡೆಯ ನಂತರ ನೀಡಲಾಗುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :