ಭಾರತದ ಮೊಟ್ಟ ಮೊದಲ 5G ಸ್ಮಾರ್ಟ್‌ಫೋನ್ ಕೊನೆಗೂ ಇಂದು ಬಿಡುಗಡೆಯಾಗೆ ಹೋಯ್ತು. ಈ ಸ್ಮಾರ್ಟ್‌ಫೋನ್ Realme X50 Pro 5G ಆಗಿದ್ದು ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 37,999 ರೂಗಳೊಂದಿಗೆ ಬರುತ್ತದೆ. ಈ ಬೆಲೆ 6GB RAM ಮತ್ತು 128GB ಸ್ಟೋರೇಜ್ ವೆರಿಯಂಟ್ ಹೊಂದಿದೆ. ಬಿಡುಗಡೆಯಾದ ದಿನದಿಂದಲೇ ಅಂದ್ರೆ 24ನೇ ಫೆಬ್ರವರಿ 2020 ಸಂಜೆ 6:00pm ಗಂಟೆಯಿಂದಲೇ flipkart.com ಮತ್ತು realme.com ಅಲ್ಲಿ ಪ್ರಾರಂಭವಾಗಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್ನೊಂದಿಗೆ ಭಾರತಕ್ಕೆ ಬಂದ ಮೊಟ್ಟ ಮೊದಲ ಸ್ಮಾರ್ಟ್ಫೋನ್ Realme X50 Pro 5G ಆಗಿದೆ. ಈ ಸ್ಮಾರ್ಟ್‌ಫೋನ್ 65W ಸೂಪರ್‌ಡಾರ್ಟ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ.
ಈ ಹೊಸ Realme X50 Pro 5G ಸ್ಮಾರ್ಟ್ಫೋನ್ 6.44 ಇಂಚಿನ FHD+ ಸೂಪರ್ ಅಮೋಲೆಡ್ ಸ್ಕ್ರೀನ್ ಜೊತೆಗೆ ಡ್ಯುಯಲ್ ಪಂಚ್ ಹೋಲ್ ಕಟೌಟ್ ಒಳಗೊಂಡಿದೆ. ಇದರ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು ಅದರ ಸ್ಕ್ರೀನ್ ಟು ಬಾಡಿ 92% ಪ್ರತಿಶತದಷ್ಟಿದೆ. ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೊಂದಿಗೆ ರಕ್ಷಿಸಲಾಗಿದೆ. ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್ ಮತ್ತು 12GB ವರೆಗಿನ RAM ಹೊಂದಿದೆ. ಈ ಫೋನ್‌ನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ.
ಇದರ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 64MP ಪ್ರೈಮರಿ ಕ್ಯಾಮೆರಾವನ್ನು ಒದಗಿಸಲಾಗಿದೆ. ನಂತರ 8MP ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಮತ್ತು 12MP ಟೆಲಿಫೋಟೋ ಲೆನ್ಸ್ ಕೊನೆಯದಾಗಿ 2MP ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಇದೆ. ಫೋನ್‌ನ ಮುಂಭಾಗದಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. 32MP ಮೆಗಾಪಿಕ್ಸೆಲ್ ಸೋನಿ IMX616 ಪ್ರೈಮರಿ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ದ್ವಿತೀಯಕ ಸೆನ್ಸರ್ ನೀಡಲಾಗಿದೆ.
ಭಾರತದಲ್ಲಿ ಇದರ ಆರಂಭಿಕ 6GB RAM +128GB ROM ವೇರಿಯಂಟ್ ಬೆಲೆ 37,999 ರೂಗಳು. ಅದೇ ಸಮಯದಲ್ಲಿ 8GB RAM +128GB ROM ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ರೂಪಾಂತರದ ಬೆಲೆ 39,999 ರೂಗಳು ಕೊನೆಯೆದಾಗಿ 12GB RAM +256GB ROM ಸ್ಟೋರೇಜ್ ಹೊಂದಿರುವ ರೂಪಾಂತರದ ಬೆಲೆ 44,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಮಾಸ್ ಗ್ರೀನ್ ಮತ್ತು ರಸ್ಟ್ ರೆಡ್ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.