ರಿಯಲ್‌ಮಿ ತನ್ನ ಮುಂಬರಲಿರುವ ಸ್ಮಾರ್ಟ್ಫೋನಲ್ಲಿ 320W SuperSonic ಚಾರ್ಜರ್ ನಾಳೆ ಬಿಡುಗಡೆಯಾಗಲಿದೆ!
ರಿಯಲ್‌ಮಿ ತನ್ನ ಮುಂಬರಲಿರುವ ಸ್ಮಾರ್ಟ್ಫೋನಲ್ಲಿ 320W SuperSonic ಚಾರ್ಜರ್ ಚೀನಾದಲ್ಲಿ ಅನಾವರಣಗೊಳಿಸಲಿದೆ
ಈ ಹೊಸ ಟೆಕ್ನಾಲಜಿಯ 320W SuperSonic ಚಾರ್ಜರ್ ಏನೇನು ಮಾಡುತ್ತದೆ ಎನ್ನುವುದನ್ನು ಈ ಕೆಳಗೆ ವಿಡಿಯೋದಲ್ಲಿ ನೋಡಬಹುದು.
ಪ್ರಸ್ತುತ ಕೇವಲ 5 ನಿಮಿಷಗಳಲ್ಲಿ 0% ಯಿಂದ 100% ಚಾರ್ಜ್ ಮಾಡುತ್ತದೆ ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ ಯಾಪಟ್ಟಿ ಫಾಸ್ಟ್ ಚಾರ್ಜರ್ ಅಂಥ.
ಜನಪ್ರಿಯ Realme ಸ್ಮಾರ್ಟ್ಫೋನ್ ತಯಾರಕ ನಾಳೆ ಚೀನಾದಲ್ಲಿ ಜಗತ್ತಿನ ಅತಿ ವೇಗದ ಚಾರ್ಜಿಂಗ್ (320W SuperSonic) ತಂತ್ರಜ್ಞಾನವನ್ನು ಚಾರ್ಜರ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ವಿಶ್ವದ ಅತ್ಯಂತ ವೇಗದ ಮೊಬೈಲ್ ಚಾರ್ಜಿಂಗ್ ತಂತ್ರಜ್ಞಾನವಾಗಿದೆ. ರಿಯಲ್‌ಮಿ ತನ್ನ ಈ 300W ಫಾಸ್ಟ್ ಚಾರ್ಜಿಂಗ್ ಅನ್ನು ಘೋಷಿಸಲಿದೆ. ಪ್ರಸ್ತುತ ಕೇವಲ 5 ನಿಮಿಷಗಳಲ್ಲಿ 0% ಯಿಂದ 100% ಚಾರ್ಜ್ ಮಾಡುತ್ತದೆ ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ. ಆದರೆ ಕಂಪನಿಯು ಈಗ ಅದು ವೇಗವಾಗಿರುತ್ತದೆ ಎಂದು ಖಚಿತಪಡಿಸಿದೆ. ಅಧಿಕೃತ ಲಾಂಚ್ ಪೋಸ್ಟರ್ ಚಾರ್ಜಿಂಗ್ ವೇಗ 320W SuperSonic ಎಂದು ಖಚಿತಪಡಿಸುತ್ತದೆ.
Also Read: ನಿಮ್ಮ Smartphone ಕ್ಯಾಮೆರಾ ಒಂದು ವೇಳೆ Hack ಹಾಗಿದ್ದರೆ ಈ ಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ
320W SuperSonic ಚಾರ್ಜರ್ ಚೀನಾದಲ್ಲಿ ಅನಾವರಣ!
ಇದರ ಬಗ್ಗೆ ವರದಿ ಮಾಡಿರುವ 91ಮೊಬೈಲ್ ಇದರ ಚಾರ್ಜಿಂಗ್ ವೀಡಿಯೊವನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ರಿಯಲ್‌ಮಿಯ ವಾಯ್ಸ್ ಪ್ರೆಸಿಡೆಂಟ್ ಮತ್ತು CMO ಅಧಿಕೃತ ಉಡಾವಣೆಗೆ ಮುಂಚಿತವಾಗಿ ಇದರ ಚಾರ್ಜಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸಿದ್ದಾರೆ. ಕಂಪನಿ ಕಳೆದ ಜೂನ್‌ನಲ್ಲಿ ಕಂಪನಿಯು 300W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ ಎಂದು ರಿಯಲ್‌ಮಿ ಬ್ರ್ಯಾಂಡ್ ಮಾರ್ಕೆಟಿಂಗ್ ಮುಖ್ಯಸ್ಥ ಫ್ರಾನ್ಸಿಸ್ ವಾಂಗ್ ಹೇಳಿದ್ದರು. ಕಂಪನಿಯು 320W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ತರಲು ಹೊರಟಿದೆ ಎಂಬ ಅಂಶದ ಒಂದು ನೋಟವನ್ನು ಸೋರಿಕೆಯಾದ ವೀಡಿಯೊ ನೀಡಿದೆ.
ವೀಡಿಯೊದಲ್ಲಿ Realme ಸಾಧನವು ಕೇವಲ 35 ಸೆಕೆಂಡುಗಳಲ್ಲಿ 0% ರಿಂದ 17% ವರೆಗೆ ಚಾರ್ಜ್ ಆಗುತ್ತದೆ. ರಿಯಲ್‌ಮಿ ಕಂಪನಿಯ ಈ ಮುಂಬರಲಿರುವ ತಮ್ಮ ಸ್ಮಾರ್ಟ್ಫೋನ್ ಅನುಗುಣವಾಗಿ ಈ 320W ವೇಗದ ಚಾರ್ಜಿಂಗ್ ಘೋಷಣೆಯು 300W ದಾಖಲೆಯನ್ನು ಮೀರಿಸಿದೆ. ಮಾತ್ರವಲ್ಲದೆ ಮೊಬೈಲ್ ಫೋನ್ ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಈ ಹಿಂದೆ ಕಂಪನಿಯು Realme GT Neo5 ನಲ್ಲಿ 240W ವೇಗದ ಚಾರ್ಜಿಂಗ್ ಅನ್ನು ಒದಗಿಸಿದೆ. ಈ ಮಾದರಿಯನ್ನು ಕೇವಲ 9 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ವೇಗದ ಚಾರ್ಜರ್ ಪರಿಚಯಲು Realme ಎತ್ತಿದ ಕೈ
ಹೌದು ಈ Realme ಸ್ಮಾರ್ಟ್ಫೋನ್ ಬ್ರಾಂಡ್ ಪ್ರಕಾರ ಈ ಹೊಸ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸಹಾಯದಿಂದ ಫೋನ್ ಅನ್ನು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದು. ಶೂನ್ಯದಿಂದ 100% ಪ್ರತಿಶತದವರೆಗೆ ಚಾರ್ಜಿಂಗ್ ಮಾಡಬಹುದು. ಇದರ ಅನುಗುಣವಾಗಿ ಫೋನ್ 3 ನಿಮಿಷಗಳಲ್ಲಿ 50% ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ವರದಿಯಾಗಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ 300W ಫಾಸ್ಟ್ ಚಾರ್ಜರ್ ಅನ್ನು ಸಹ ಕಳೆದ ವರ್ಷ Redmi ಬಿಡುಗಡೆ ಮಾಡಿದೆ. ಇದರ ನಂತರ 240W ವೇಗದ ಚಾರ್ಜರ್ ಅನ್ನು ಪರಿಚಯಿಸಿತು. ಈಗ ಈ ಹೊಸ ಮಾದರಿಯ 320W SuperSonic ಚಾರ್ಜರ್ ಬಗ್ಗೆ ಮತ್ತಷ್ಟು ವಿಶೇಷ ವಿಷಯಗಳನ್ನು ಪಡೆಯಲು ಕೊಂಚ ಸಮಯ ಕಾಯಬೇಕಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile