Realme P3 Ultra 5G launched in India: ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ರಿಯಲ್‌ಮಿ (Realme) ತನ್ನ ಹೊಚ್ಚ ಹೊಸ Realme P3 Ultra 5G ಸ್ಮಾರ್ಟ್ಫೋನ್ ಅನ್ನು ಇಂದು ಅಂದ್ರೆ 19ನೇ ಮಾರ್ಚ್ 2025 ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನೊಂದಿಗೆ ಮಾರಾಟವಾಗಲಿದ್ದು Realme P3 Ultra 5G ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿ ಮತ್ತು ಪವರ್ಫುಲ್ MediaTek Dimensity 8350 Ultra ಪ್ರೊಸೆಸರ್ನೊಂದಿಗೆ ಅತಿ ತೆಳ್ಳಗಿನ ಮತ್ತು ಕಲರ್ ಚೇಂಜಿಂಗ್ ಟೆಕ್ನಾಲಜಿಯೊಂದಿಗೆ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಗಳನ್ನು ಹೊಂದಿದೆ. ಹಾಗಾದ್ರೆ ಇದರ ಆಫರ್ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
Realme P3 Ultra 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹26,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹27,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹29,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು ಬ್ಯಾಂಕ್ಗಳ ಕಾರ್ಡ್ ಮತ್ತು ವಿನಿಮಯ ಆಫರ್ ಬಳಸಿಕೊಂಡು ಸುಮಾರು 4000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 22,999 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು. ಸ್ಮಾರ್ಟ್ಫೋನ್ ಇಂದಿನಿಂದ ಪ್ರಿ-ಆರ್ಡರ್ ಇಂದು ಮಧ್ಯಾಹ್ನ 2:00 ಗಂಟೆಯಿಂದ ಶುರುವಾಗಲಿದ್ದು ಮೊದಲ ಮಾರಾಟ 25ನೇ ಮಾರ್ಚ್ 2025 ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.
Realme P3 Ultra 5G ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ನೊಂದಿಗೆ 6.74 ಇಂಚಿನ 1.5K ಕ್ವಾಡ್ ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ Realme P3 Ultra 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ Sony IMX869 ಸೆನ್ಸರ್ ಕ್ಯಾಮೆರಾವನ್ನು ಒಳಗೊಂಡಿದ್ದು ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮೆಗಾಪಿಕ್ಸೆಲ್ ಸೆಲ್ಫಿ Sony IMX480 ಸೆನ್ಸರ್ ಕ್ಯಾಮೆರಾವ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
Realme P3 Ultra 5G ಸ್ಮಾರ್ಟ್ಫೋನ್ ಪವರ್ಫುಲ್ MediaTek Dimensity 8350 Ultra ಪ್ರೊಸೆಸರ್ನೊಂದಿಗೆ ಬರುತ್ತದೆ. Realme P3 Ultra 5G ಸ್ಮಾರ್ಟ್ಫೋನ್ ಹೆಚ್ಚುವರಿಯ ಆನ್‌ಬೋರ್ಡ್ ಮೆಮೊರಿಯನ್ನು ಸಹ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi 6, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.