Sony IMX896 ಕ್ಯಾಮೆರಾದೊಂದಿಗೆ Realme P3 Pro 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Sony IMX896 ಕ್ಯಾಮೆರಾದೊಂದಿಗೆ Realme P3 Pro 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
HIGHLIGHTS

Realme P3 Pro 5G ಸ್ಮಾರ್ಟ್ಫೋನ್ Sony IMX896 ಕ್ಯಾಮೆರಾದೊಂದಿಗೆ ಅಧಿಕೃತವಾಗಿ ಬಿಡುಗಡೆ.

Realme P3 Pro 5G ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಟಪ್ ಹೈಲೈಟ್ ಫೀಚರ್ಗಳೇನು ತಿಳಿಯಿರಿ.

Realme P3 Pro 5G ಸ್ಮಾರ್ಟ್ಫೋನ್ ಆರಂಭಿಕ 8GB RAM ರೂಪಾಂತರ ಕೇವಲ ₹21,999 ರೂಗಳಿಗೆ ಲಭ್ಯ.

Realme P3 Pro 5G launched in India: ಚೀನಾದ ಸ್ಮಾರ್ಟ್ಫೋನ್ ಕಂಪನಿ ರಿಯಲ್ಮಿ (Realme) ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ Realme P3 Pro 5G ಸ್ಮಾರ್ಟ್ಫೋನ್ Sony IMX896 ಕ್ಯಾಮೆರಾದೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ಅನೇಕ ಲೇಟೆಸ್ಟ್ ಇಂಟ್ರೆಸ್ಟಿಂಗ್ ಫೀಚರ್ಗಳಿಂದ ತುಂಬಿದ್ದು ಇದರ ಬಿಲ್ಡ್ ಡಿಸೈನಿಂಗ್ ನೋಡಿ ಫಿಧಾ ಆಗೋದಂತು ಪಕ್ಕ. ಯಾಕೆಂದರೆ ಇದರ ಪ್ಯಾನಲ್ ಮೇಲೆ ಬಣ್ಣ ಬದಲಾಯಿಸುವ (Color Changing) ಮೆಟೀರಿಯಲ್ಗಳಿಂದ ತುಂಬಿದೆ. ಸ್ಮಾರ್ಟ್ಫೋನ್ ಆರಂಭಿಕ ₹23,999 ರೂಗಳಿಂದ ಆರಂಭಿಸಿದೆ ಆದರೆ ಬಿಡುಗಡೆಯ ಕೊಡುಗೆಯಾಗಿ ಬೆಲೆ ಕಡಿಮೆಗೊಳಿಸಿ ಬಿಡುಗಡೆಗೊಳಿಸಿದೆ. ಹಾಗಾದ್ರೆ Realme P3 Pro 5G ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಫೀಚರ್ಗಳೇನು ತಿಳಿಯಿರಿ.

ಭಾರತದಲ್ಲಿ Realme P3 Pro 5G ಆಫರ್ ಬೆಲೆ ಮತ್ತು ಲಭ್ಯತೆಯ ವಿವರಗಳು:

ಇಂದು ಅಧಿಕೃತವಾಗಿ ಬಿಡುಗಡೆಯಾಗಿರುವ ಈ Realme P3 Pro 5G ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹23,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹24,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹26,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

Realme P3 Pro 5G launched in India
Realme P3 Pro 5G launched in India

ಆದರೆ ಆಸಕ್ತ ಬಳಕೆದಾರರು Realme P3 Pro 5G ಸ್ಮಾರ್ಟ್ಫೋನ್ ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು ₹2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ ₹21,999 ರೂಗಳಿಗೆ 25ನೇ ಫೆಬ್ರವರಿ ಮಧ್ಯಾಹ್ನ 12 ಗಂಟೆಯಿಂದ Nebula Glow, Galaxy Purple, Saturn Brown ಬಣ್ಣಗಳ ಆಯ್ಕೆಯನ್ನು ಮೊದಲ ಮಾರಾಟದಲ್ಲಿ ಖರೀದಿಸಬಹುದು.

Also Read: Aadhaar Card Photo: ಆಧಾರ್‌ನಲ್ಲಿರೋ ಹಳೆ ಫೋಟೋದಿಂದ ಬೇಸರವಾಗಿದ್ಯಾ? ಬದಲಾಯಿಸಲು ಅರ್ಜಿ ಸಲ್ಲಿಸುವುದು ಹೇಗೆ?

Realme P3 Pro 5G ಫೀಚರ್ ಮತ್ತು ವಿಶೇಷಣಗಳೇನು?

ಈ ಸ್ಮಾರ್ಟ್‌ಫೋನ್ 6.83 ಇಂಚಿನ 1.5K 120Hz ಕ್ವಾಡ್ ಕರ್ವ್ಡ್ ಎಡ್ಜ್‌ಫ್ಲೋ ಡಿಸ್ಪ್ಲೇ ಜೊತೆಗೆ 2500Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರ ಮತ್ತು 42 ಡಿಗ್ರಿ ಗೋಲ್ಡನ್ ಕರ್ವ್ರತೆಯನ್ನು ಹೊಂದಿದೆ. ಇದರ ಜೊತೆಗೆ ಇದು ಸ್ಮಾರ್ಟ್ ಆಂಟಿ-ಮಿಸ್‌ಟಚ್ ಮತ್ತು ನಾವು ಟಚ್ ಕಂಟ್ರೋಲ್ ಅನ್ನು ಹೊಂದಿದೆ. ಡಿಸ್ಪ್ಲೇ 93.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ದೊಡ್ಡ VC ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. Realme P3 Pro 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ Sony IMX896 ಸೆನ್ಸರ್ ಹೊಂದಿದ್ದು ಮತ್ತೊಂದು 2MP ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಕ್ಯಾಮೆರಾವನ್ನು ಸಹ ಹೊಂದಿದೆ.

Realme P3 Pro 5G launched in India
Realme P3 Pro 5G launched in India

Realme P3 Pro 5G ಸ್ಮಾರ್ಟ್ಫೋನ್ Snapdragon 7s Gen 3 5G ಚಿಪ್ನೊಂದಿಗೆ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಗೇಮರ್ಗಳಿಗಾಗಿ ವೀಡಿಯೊ ಗೇಮ್ ಡೆವಲಪರ್ KRAFTON ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ GT ಬೂಸ್ಟ್ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಆಪರೇಟಿಂಗ್ ಸಿಸ್ಟಮ್ ನೋಡುವುದಾದರೆ Realme UI 6.0 ಅಡಿಯಲ್ಲಿ ಫೋನ್ Android 15 ಅನ್ನು ಸಪೋರ್ಟ್ ಮಾಡುತ್ತದೆ. ಕೊನೆಯದಾಗಿ ಸ್ಮಾರ್ಟ್ಫೋನ್ ನಿಮಗೆ 6000mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವ ಅಡಾಪ್ಟರ್ ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo