ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕರಾಗಿರುವ ರಿಯಲ್ಮಿ (Realme) ತನ್ನ ಲೇಟೆಸ್ಟ್ Realme P2 Pro 5G ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದ್ದೂ ಇದರ 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಅತ್ಯುತ್ತಮ ಫೀಚರ್ಗಳ ಬಂಡಲ್ ಸ್ಮಾರ್ಟ್ಫೋನ್ ಇದಾಗಿದೆ. ಅದರಲ್ಲೂ ನೀವು ಹೆಚ್ಚು ಸೋಶಿಯಲ್ ಮೀಡಿಯಾ ಬಳಸುವವರಾಗಿದ್ದರೆ ಈ ಫೋನ್ ನಿಮಗೆ ಉತ್ತಮ ಆಯ್ಕೆಯಾಗಳಲಿದೆ. ಯಾಕೆಂದರೆ ಇದರಲ್ಲಿನ 32MP ಕ್ಯಾಮೆರಾ ಅತ್ಯುತ್ತಮ ಫೋಟೋ ಮತ್ತು ಸೂಪರ್ ಕೂಲ್ ವಿಡಿಯೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಲಿದೆ. ಹಾಗಾದ್ರೆ Realme P2 Pro 5G ಫ್ಲಿಪ್‌ಕಾರ್ಟ್ ಬೆಲೆ ಮತ್ತು ಆಫರ್ಗಳೇನು ಈ ಕೆಳಗೆ ತಿಳಿಯಿರಿ.
Also Read: PAN Card ಕಳೆದೊಗಿದ್ರೆ ಅಥವಾ ಡ್ಯಾಮೇಜ್ ಆಗಿದ್ರೆ ಮುಂದೇನು ಮಾಡೋದು? ಈ ರೀತಿ ಮತ್ತೆ ಪಡೆಯಬಹುದು
ನಿಮಗೆ ಅಥವಾ ನಿಮಗೆ ತಿಳಿದವರು ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಮತ್ತು ಉತ್ತಮ RAM ಹೊಂದಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ Flipkart ಡೀಲ್ ಬಗ್ಗೆ ಒಮ್ಮೆ ಪರಿಶೀಲಿಸಲೇಬೇಕು. Realme P2 Pro 5G ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ 21,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಆದರೆ ನೀವು ಇದರ ಮೇಲೆ ಯಾವುದೇ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಭಾರಿ ಡಿಸ್ಕೌಂಟ್ನೊಂದಿಗೆ ಕೇವಲ ₹19,999 ರೂಗಳಿಗೆ ಖರೀದಿಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. ಅಂದ್ರೆ Realme P2 Pro 5G ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಸುಮಾರು 15,999 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನ್ ಹೇಗಿದೆ ಮತ್ತು ಅದರ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನಿಮ್ಮ ಗಮನದಲ್ಲಿರಲಿ.
ಕಂಪನಿಯು ಈ ಫೋನ್‌ನಲ್ಲಿ 2412×1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.7 ಇಂಚಿನ ಪೂರ್ಣ HD+ ಕರ್ವ್ ಡಿಸ್‌ಪ್ಲೇಯನ್ನು ನೀಡುತ್ತಿದೆ. Realme P2 Pro 5G ಫೋನ್‌ನಲ್ಲಿ ನೀಡಲಾಗುತ್ತಿರುವ ಈ ಡಿಸ್‌ಪ್ಲೇ 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರ ಗರಿಷ್ಠ ಹೊಳಪಿನ ಮಟ್ಟ 2000 ನಿಟ್‌ಗಳು ಡಿಸ್ಪ್ಲೇ ರಕ್ಷಣೆಗಾಗಿ ಕಂಪನಿಯು ಈ ಫೋನ್‌ನಲ್ಲಿ ಗೊರಿಲ್ಲಾ ಗ್ಲಾಸ್ 71 ಅನ್ನು ನೀಡುತ್ತಿದೆ.
Realme P2 Pro 5G ಸ್ಮಾರ್ಟ್ಫೋನ್ 12GB ವರೆಗೆ LPDDR4x RAM ಮತ್ತು 512 GB UFS 3.1 ಸ್ಟೋರೇಜ್ ಅನ್ನು ಹೊಂದಿದೆ. ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ ಕಂಪನಿಯು ಈ ಫೋನ್‌ನಲ್ಲಿ Snapdragon 7s Gen 2 ಅನ್ನು ನೀಡುತ್ತಿದೆ. ಕಂಪನಿಯು ಈ ಫೋನ್‌ನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸುತ್ತಿದೆ. ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್‌ನೊಂದಿಗೆ 8MP ಮೆಗಾಪಿಕ್ಸೆಲ್ ಅಲ್ಯಾವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ.
Also Read: ಪ್ರತಿದಿನ 3GB ಡೇಟಾ ಮತ್ತು ಉಚಿತ Netflix ನೀಡುವ Jio ಪ್ಲಾನ್ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು?
ಕೊನೆಯದಾಗಿ ಈ ಫೋನ್ ಸೆಲ್ಸಿಗಾಗಿ ಫೋನ್ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನಲ್ಲಿ ನೀಡಲಾದ ಬ್ಯಾಟರಿ 5200mAh ಆಗಿದೆ. ಈ ಬ್ಯಾಟರಿ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಫೋನ್ ಇನ್-ಡಿಸ್ಸೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಓಎಸ್‌ಗೆ ಸಂಬಂಧಿಸಿದಂತೆ ಫೋನ್ ಆಂಡ್ರಾಯ್ಡ್ 14 ಆಧಾರಿತ Realme Ul 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.