ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಹೆಚ್ಚು ಸದ್ದಿಲ್ಲದೇ ತನ್ನ ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಕಂಪನಿ ಇತ್ತೀಚಿನ P ಸೀರೀಸ್ ಅಡಿಯಲ್ಲಿ ಈ Realme P2 Pro 5G ಸ್ಮಾರ್ಟ್ಫೋನ್ ಅನ್ನು 13ನೇ ಸೆಪ್ಟೆಂಬರ್ 2024 ರಂದು ಪರಿಚಯಿಸಲಾಯಿತು ಆದರೆ ಈ Realme P2 Pro 5G ಒಟ್ಟಾರೆಯಾಗಿ 2 ಬಣ್ಣಗಳಲ್ಲಿ ಮತ್ತು ಮೂರು RAM ಆಯ್ಕೆಗಳೊಂದಿಗೆ ಬರುವ ಮಧ್ಯಮ ಶ್ರೇಣಿಯ ಫೋನ್ ಆಗಿದೆ. Realme P2 Pro 5G ಸ್ಮಾರ್ಟ್ಫೋನ್ 5200mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ Realme P2 Pro 5G ಇಂದು ಸಂಜೆ 6:00pm ರಿಂದ 8:00pm ವರೆಗೆ ಕೇವಲ 2 ಗಂಟೆಗೆ ಮೊದಲ ಮಾರಾಟವಾಗಲಿದ್ದು ಸೇಲ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
Also Read: ಇನ್ಮೇಲೆ ಮನೆಯಿಂದ ಹೊಸ ಸಿಮ್ ಕಾರ್ಡ್ ಆಕ್ಟಿವೇಟ್ ಮಾಡಿಕೊಳ್ಳಲು Jio iActivate ಸೇವೆ ಪರಿಚಯ!
Realme P2 Pro 5G ಇಂದು ಸಂಜೆ ಕೇವಲ ಎರಡು ಗಂಟೆಗಳಿಗೆ ಮಾತ್ರ ಕಾಲ Flipkart ಮೂಲಕ ಖರೀದಿಸಲು ಈ ಲೇಟೆಸ್ಟ್ ನಲ್ಲಿ Realme P2 Pro 5G ಭರ್ಜರಿ ರಿಯಾಯಿತಿಯ ದರದಲ್ಲಿ ಖರೀದಿಸಲು ಅವಕಾಶವಿರುತ್ತದೆ. ಈ Realme P2 Pro 5G ಸ್ಮಾರ್ಟ್ಫೋನ್‌ನ ಆರಂಭಿಕ ಮಾರಾಟವು ಸಂಜೆ 6 ರಿಂದ ರಾತ್ರಿ 8 ರವರೆಗೆ ನಡೆಯಲಿದೆ.
Realme P2 Pro 5G ಖರೀದಿಸುವ ಆಸಕ್ತ ಗ್ರಾಹಕರಿಗೆ ICICI ಬ್ಯಾಂಕ್, HDFC ಬ್ಯಾಂಕ್, SBI ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಸಹಾಯದಿಂದ ಪಾವತಿಯ ಮೇಲೆ 3000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಲಿದ್ದಾರೆ.
Realme P2 Pro 5G ಸ್ಮಾರ್ಟ್ಫೋನ್ 6.7 ಇಂಚಿನ ಸ್ಯಾಮ್‌ಸಂಗ್ ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 2000nits ಗರಿಷ್ಠ ಹೊಳಪನ್ನು ಹೊಂದಿದೆ. Realme P2 Pro 5G ಸೋನಿ LYT-600 ಸೆನ್ಸರ್ ಮತ್ತು OIS ಬೆಂಬಲದೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ 50MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇದು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಅಲ್ ಅಲ್ಟ್ರಾ ಕ್ಲಾರಿಟಿ, ಅಲ್ ಸ್ಮಾರ್ಟ್ ರಿಮೂವಲ್, ಅಲ್ ಗ್ರೂಪ್ ಫೋಟೋ ವರ್ಧನೆ ಮತ್ತು ಅಲ್ ಆಡಿಯೋ ಜೂಮ್ ಸೇರಿದಂತೆ ಹಲವಾರು ಕ್ಯಾಮೆರಾ ಅಲ್ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ.
Realme P2 Pro 5G ಸ್ಮಾರ್ಟ್ಫೋನ್ ಸ್ನಾಪ್‌ಡ್ರಾಗನ್ 7s Gen 2 5G ಚಿಪ್‌ಸೆಟ್‌ನಿಂದ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ. ಸ್ಮಾರ್ಟ್ಫೋನ್ 5200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಅದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Realme P2 Pro ಆಂಡ್ರಾಯ್ಡ್ 14 ಅನ್ನು ಆಧರಿಸಿದ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.