6GB RAM ಮತ್ತು 50MP ಕ್ಯಾಮೆರಾದ REALME NARZO N65 5G ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು ತಿಳಿಯಿರಿ

Updated on 28-May-2024
HIGHLIGHTS

ಲೇಟೆಸ್ಟ್ REALME NARZO N65 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

MediaTek Dimensity 6300 ಪ್ರೊಸೆಸರ್ 50MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ನೀಡಲಾಗಿದೆ.

NARZO N65 5G ಬೆಲೆ ಮತ್ತು ಲಭ್ಯತೆಯೊಂದಿಗೆ ಬಿಡುಗಡೆಯ ಆಫರ್ ಮತ್ತು ಇದರ ಟಾಪ್ 5 ಫೀಚರ್ ವಿಶೇಷಣಗಳನ್ನು ಈ ಕೆಳಗೆ ತಿಳಿಯೋಣ.

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ಜನಪ್ರಿಯ ಸ್ಮಾರ್ಟ್ಫೋನ್ ತಯಾರಕರದ ರಿಯಲ್‌ಮಿ (Realme) ತಮ್ಮ ಲೇಟೆಸ್ಟ್ REALME NARZO N65 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ ಕಂಪನಿ MediaTek Dimensity 6300 ಪ್ರೊಸೆಸರ್ 50MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ನೀಡಲಾಗಿದೆ. ಸ್ಮಾರ್ಟ್ಫೋನ್ ಇತ್ತೀಚಿನ ಲೇಟೆಸ್ಟ್ ಫೀಚರ್ ಅನ್ನು ಕಂಪನಿ ಕೈಗೆಟಕುವ ಬೆಲೆಗೆ ಅಂದ್ರೆ ಸುಮಾರು 13,000 ರೂಗಳೊಳಗೆ ಬಿಡುಗಡೆಗೊಳಿಸಿದೆ. ಅಲ್ಲದೆ ರಿಯಲ್‌ಮಿ ತಮ್ಮ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ಗಳಲ್ಲಿ ನೀಡುವಂತೆ ಇದರಲ್ಲೂ ಸಹ ಮಿನಿ ಕ್ಯಾಪ್ಸುಲ್ ಫೀಚರ್ ನೀಡಿ ಸ್ಮಾರ್ಟ್ಫೋನ್ ಅನ್ನು ಮತ್ತಷ್ಟು ಪ್ರೀಮಿಯಂ ಆಗಿ ಕಾಣುವಂತೆ ಮಾಡಿದೆ. ಇದರ ಬೆಲೆ ಮತ್ತು ಲಭ್ಯತೆಯೊಂದಿಗೆ ಬಿಡುಗಡೆಯ ಆಫರ್ ಮತ್ತು ಇದರ ಟಾಪ್ 5 ಫೀಚರ್ ವಿಶೇಷಣಗಳನ್ನು ಈ ಕೆಳಗೆ ತಿಳಿಯೋಣ.

REALME NARZO N65 5G ಬೆಲೆ ಮತ್ತು ಮಾರಾಟದ ಆಫರ್‌ಗಳು

ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 4GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು ₹11,499 ರೂಗಳಿಗೆ ನಿಗದಿಪಡಿಸಿದ್ದು ಮತ್ತೊಂದು 6GB ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು ₹12,499 ರೂಗಳಿಗೆ ನಿಗದಿಪಡಿಸಿದೆ. ಅಲ್ಲದೆ ಸ್ಮಾರ್ಟ್ಫೋನ್ ಅನ್ನು ಆಸಕ್ತರು ಇದೆ ತಿಂಗಳ 31ನೇ ಮೇ 2024 ರಂದು ಮೊದಲ ಮಾರಾಟದಲ್ಲಿ ಖರೀದಿಸಬಹುದು. ಸ್ಮಾರ್ಟ್ಫೋನ್ ಬಿಡುಗಡೆಯ ಕೊಡುಗೆಯಾಗಿ ನಿಮಗೆ 1000 ರೂಗಳ ಕೂಪನ್ ಡಿಸ್ಕೌಂಟ್ ಸಹ ನೀಡಲಾಗುತ್ತಿದ್ದು ಈ ಮೇಲಿನ ಬೆಲೆಯಲ್ಲಿ ಈ ರಿಯಾಯಿತಿಯನ್ನು ಕಳೆದು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Realme Narzo N65 5G launched in India here price and top 5 features

ರಿಯಲ್‌ಮಿ NARZO N65 5G ಡಿಸ್ಪ್ಲೇ ಮಾಹಿತಿ

ಮೊದಲಿಗೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ 6.67 ಇಂಚಿನ IPS LCD ಪ್ಯಾನಲ್ನೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ಅನುಕೂಲಕ್ಕಾಗಿ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೆ 720 x 1604 ಪಿಕ್ಸೆಲ್ ರೆಸಲ್ಯೂಷನ್ನೊಂದಿಗೆ 625 ನಿಟ್ಸ್ ಬ್ರೈಟ್‌ನೆಸ್ ಅನ್ನು ಸಹ ನೀಡುವುದರೊಂದಿಗೆ ದಿನದ ಸಮಯದಲ್ಲೂ ಹೊರಗಿನ ಬೆಳಕಿನಲ್ಲಿ ಸರಳವಾಗಿ ಬಳಸಲು ಉತ್ತಮವಾಗಿರುತ್ತದೆ. REALME NARZO N65 5G ಸ್ಮಾರ್ಟ್ಫೋನ್ Rainwater Smart Touch ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದ್ದು ಇದರೊಂದಿಗೆ ನಿಮ್ಮ ಕೈ ಒದ್ದೆಯಾಗಿದ್ದರು ಸಹ ಸುಲಭವಾಗಿ ಬಳಸಲು ಅವಕಾಶ ಮಾಡಿಕೊಡುತ್ತದೆ. ಈ ಫೀಚರ್ ನಿಮಗೆ ಯಾವುದೇ ಸನ್ನಿವೇಶಗಳಲ್ಲೂ ಬಳಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ನಿಮಗೆ ಸ್ಮಾರ್ಟ್ಫೋನ್ ಜೊತೆಗೆ ಸದಾ ಕನೆಕ್ಟ್ ಆಗಿರಲು ಅವಕಾಶವನ್ನು ಕಲ್ಪಿಸುತ್ತದೆ.

Also Read: 70 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 1.5GB ಡೇಟಾ ನೀಡುವ Vodafone Idea ಪ್ಲಾನ್ ಬೆಲೆ ಎಷ್ಟು ಗೊತ್ತಾ?

REALME NARZO N65 5G ಕ್ಯಾಮೆರಾ ಹೇಗಿದೆ?

ಎರಡನೇಯದಾಗಿ REALME NARZO N65 5G ಕ್ಯಾಮೆರಾ ಮಾಹಿತಿಯನ್ನು ನೋಡುವುದಾದರೆ ನಿಮಗೆ ಇದರಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ನೀಡಿದ್ದು ಮೊದಲ ಪ್ರೈಮರಿ ಕ್ಯಾಮೆರಾ 50MP AI ವೈಡ್ ಲೆನ್ಸ್ ನೀಡಿದ್ದು f/1.8 ಅಪರ್ಚರ್ ಜೊತೆಗೆ ಬರುತ್ತದೆ. ಇದರ ಕ್ರಮವಾಗಿ ಮತ್ತೊಂದು ಸಣ್ಣ Auxiliary ಲೆನ್ಸ್ ಕ್ಯಾಮೆರಾ ನೀಡಲಾಗಿದ್ದು ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾವನ್ನು f/2.0 ಅಪರ್ಚರ್ ಜೊತೆಗೆ ವೈಡ್ ಸೆನ್ಸರ್ ಅನ್ನು ನೀಡಲಾಗಿದೆ. ಈ ಕ್ಯಾಮೆರಾ ಬಳಸಿಕೊಂಡು ನಿಮ್ಮ ದಿನನಿತ್ಯದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಯೋಗ್ಯವಾಗುವ ಫೋಟೋ ಮತ್ತು ವಿಡಿಯೋವನ್ನು ಸೆರೆಹಿಡಿಯಬಹುದು.

ರಿಯಲ್‌ಮಿ NARZO N65 5G ಹಾರ್ಡ್ವೇರ್ ವಿಶೇಷತೆಗಳೇನು?

ಈ ಸ್ಮಾರ್ಟ್ಫೋನ್ ಮೂರನೇ ಅಂಶವೆಂದರೆ REALME NARZO N65 5G ಹಾರ್ಡ್ವೇರ್ ಮಾಹಿತಿಯಾಗಿದೆ ಇದರಲ್ಲಿ ಸ್ಮಾರ್ಟ್ಫೋನ್ MediaTek Dimensity 6300 ಪ್ರೊಸೆಸರ್ ಚಿಪ್ ಹೊಂದಿದ್ದು ಎರಡು ಮಾದರಿಯ RAM ಮತ್ತು ಸ್ಟೋರೇಜ್ ಮಾದರಿಗಳನ್ನು ಹೊಂದಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ Realme UI 5.0 ಅನ್ನು ನಡೆಸುತ್ತದೆ. ಸ್ಮಾರ್ಟ್ಫೋನ್ Octa-core 2.4GHz ಸಿಪಿಯುವನ್ನು ಹೊಂದಿದ್ದು ನಿಮಗೆ ಉತ್ತಮ ಬಳಕೆಯ ಅನುಭವವನ್ನು ನೀಡಲು ಉತ್ತಮವಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ಒಳಗೆ SD ಕಾರ್ಡ್ ಹಾಕಿ ಸುಮಾರು 1024GB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.

Realme Narzo N65 5G launched in India here price and top 5 features

REALME NARZO N65 5G ಬ್ಯಾಟರಿ ಮತ್ತು ಸೆನ್ಸರ್ ವಿಶೇಷತೆಗಳೇನು?

ಈ ಸ್ಮಾರ್ಟ್ಫೋನ್ ನಿಮಗೆ ಪೂರ್ತಿ ದಿನ ಸೋಶಿಯಲ್ ಮೀಡಿಯಾ ಬಳಕೆಯೊಂದಿಗೆ ಕಳೆಯಲು 5000mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಬ್ಯಾಟರಿ ಖಾಲಿಯಾದರೆ ವೇಗವಾಗಿ ಇದರ ಪವರ್ ಬೂಸ್ಟ್ ಮಾಡಲು 15W ಫಾಸ್ಟ್ ಚಾರ್ಜ್ ಅನ್ನು ಬೆಂಬಲಿಸುವ ಚಾರ್ಜರ್ ಸಹ ನೀಡಲಾಗಿದೆ. ಇದರಲ್ಲಿ ಸ್ಮಾರ್ಟ್ಫೋನ್ ಸೈಡ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ನೀಡಲಾಗಿದ್ದು USB Type-C 2.0 ಮತ್ತು 3.5mm ಆಡಿಯೋ ಜಾಕ್ ಸಹ ಸಪೋರ್ಟ್ ಮಾಡುತ್ತದೆ. ಅಲ್ಲದೆ ಡುಯಲ್ ಬ್ಯಾಂಡ್ WiFi ಜೊತೆಗೆ Bluetooth 5.3 ಅನ್ನು ಸಪೋರ್ಟ್ ಮಾಡುತ್ತದೆ. ಸ್ಮಾರ್ಟ್ಫೋನ್ ಅಂಬೇರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :