Realme Narzo N55 ಭಾರತದಲ್ಲಿ ಏ.12 ಕ್ಕೆ ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ

Realme Narzo N55 ಭಾರತದಲ್ಲಿ ಏ.12 ಕ್ಕೆ ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ
HIGHLIGHTS

ರಿಯಲ್‌ಮಿ ತನ್ನ Realme Narzo N55 ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.

Realme Narzo N55 ಸ್ಮಾರ್ಟ್‌ಫೋನ್ ಏಪ್ರಿಲ್ 12 ರಂದು ದೇಶಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ.

Realme Narzo N55 ನಲ್ಲಿ ನಯವಾದ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್‌ಗಳು ಇರುತ್ತವೆ ಎಂದು ಹೇಳಲಾಗಿದೆ.

Realme Narzo N55: ಕೈಗೆಟಕುವ ಫೋನ್ಗಳ ಶ್ರೇಣಿಯ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ರಿಯಲ್‌ಮಿ ಇತ್ತೀಚೆಗೆ ತನ್ನ  ಮುಂಬರುವ Realme Narzo N55 ಸ್ಮಾರ್ಟ್‌ಫೋನ್‌ನ ಹೆಸರು ಮತ್ತು ಪ್ರಮುಖ ವಿವರಗಳ ಸೋರಿಕೆಯ ನಂತರ ಇದೀಗ ಬಿಡುಗಡೆಯ ದಿನಾಂಕವನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಿದೆ. Realme Narzo N55 ವಾಸ್ತವವಾಗಿ ಭಾರತದಲ್ಲಿ ಏಪ್ರಿಲ್ 12, 2023 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಕಂಪನಿಯ ಪ್ರಕಾರ Realme Narzo N55 ಆಧುನಿಕ ನೋಟ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುತ್ತದೆ. ಅಲ್ಲದೆ ಈ ಮಬೈಲ್‌ ಪೋನ್‌ ಅನ್ನು ಬಳಕೆದಾರರಿಗೆ ವಿಶಿಷ್ಟವಾದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ.

Realme Narzo N55 ಬಿಡುಗಡೆಯ ದಿನಾಂಕ ಫಿಕ್ಸ್ 

Realme ತನ್ನ Realme Narzo N55 ಸ್ಮಾರ್ಟ್‌ಫೋನ್‌ಗೆ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಭಾರತದಲ್ಲಿ Realme Narzo N55 ಏಪ್ರಿಲ್ 12, 2023 ರಂದು ಮಧ್ಯಾಹ್ನದ ವೇಳೆಗೆ ಬಿಡುಗಡೆಯಾಗಲಿದೆ. 4GB RAM ಮತ್ತು 64GB ಸ್ಟೋರೇಜ್ ನೊಂದಿಗೆ ಮೂಲ ರೂಪಾಂತರ, 6GB RAM ಮತ್ತು 128GB ಸ್ಟೋರೇಜ್ ನೊಂದಿಗೆ ಮಧ್ಯ-ಶ್ರೇಣಿಯ ರೂಪಾಂತರ ಮತ್ತು 8GB RAM ಮತ್ತು 128GB ಸ್ಟೋರೇಜ್ ನೊಂದಿಗೆ ಉನ್ನತ-ಶ್ರೇಣಿಯ ಆಯ್ಕೆಗಳಲ್ಲಿ ಫೋನ್ ಲಭ್ಯವಿರುತ್ತದೆ.

Realme Narzo N55 ಸ್ಮಾರ್ಟ್ಫೋನ್ ಪ್ರೈಮ್ ಬ್ಲ್ಯಾಕ್ ಮತ್ತು ಪ್ರೈಮ್ ಬ್ಲೂ ಫೋನ್‌ನ ಆರಂಭಿಕ ಕಲರ್‌ಗಳ ಆಯ್ಕೆಗಳಾಗಿರುತ್ತದೆ. ಈ ಸ್ಮಾರ್ಟ್‌ಫೋನ್‌ ಅನ್ನು Realme ಸ್ವಂತ ವೆಬ್‌ಸೈಟ್ ಮತ್ತು Amazon India ಮೂಲಕ ಮಾರಾಟ ಮಾಡಲಾಗುತ್ತದೆ. Amazon ನಲ್ಲಿ ಮೊಬೈಲ್‌ನ ಲ್ಯಾಂಡಿಂಗ್ ಪುಟದಲ್ಲಿ ಈಗಾಗಲೇ ಲೈವ್ ಮಾಡಲಾಗಿದೆ.

Realme Narzo N55 ನಿರೀಕ್ಷಿತ ಫೀಚರ್ಗಳು

ಹೆಚ್ಚುವರಿಯಾಗಿ Realme Narzo N55 ಕೆಳಭಾಗದಲ್ಲಿ USB ಟೈಪ್-C ಚಾರ್ಜಿಂಗ್ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರುತ್ತದೆ. ಈ ಫೋನ್‌ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಟೋನ್ ರೇರ್ ಫಿನಿಷ್  ಹೊಂದಿರುತ್ತದೆ. ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಇರುತ್ತದೆ. Realme Narzo N55 ನ ಉಳಿದ ಫೀಚರ್‌ಗಳು ಸದ್ಯಕ್ಕೆ ಮುಚ್ಚಿಡಲಾಗಿದ್ದು ಆದರೆ ಬಿಡುಗಡೆಯ ದಿನಾಂಕವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಅಲ್ಲದೆ ಇದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಬ್ರ್ಯಾಂಡ್ ನ  ಹೆಚ್ಚಿನ ಟೀಸರ್‌ಗಳನ್ನು ನಾವು ನಿರೀಕ್ಷಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo