Realme Narzo N55: ರಿಯಲ್‌ಮಿ ದೇಶದಲ್ಲಿ ತನ್ನ ಅದ್ದೂರಿಯ 4G ಫೋನ್ ತನ್ನ ಮೊದಲ ಮಾರಾಟದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ. ಯಾವ ಆ ಹೊಸ ಸ್ಮಾರ್ಟ್ಫೋನ್ ಅಂತೀರಾ ಅದೇ Realme Narzo N55 ಸ್ಮಾರ್ಟ್ಫೋನ್. ನೆನಪಿರಲಿ ಇದು 5G ಫೋನ್ ಅಲ್ಲ ಈ ಫೋನ್ 4G ಅನ್ನು ಮಾತ್ರ ಬೆಂಬಲಿಸುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಧೂಳ್ ಎಬ್ಬಿಸಿದೆ. 18ನೇ ಏಪ್ರಿಲ್ 2023 ರಲ್ಲಿ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊದಲ ದಿನದ ಮಾರಾಟದಲ್ಲಿಯೇ 10,000 ರಿಂದ 15,000 ಬೆಲೆ ಶ್ರೇಣಿಯಲ್ಲಿ ಅತಿ ಹೆಚ್ಚು ಮಾರಾಟವಾದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ಗಳಲ್ಲಿ ಒಂದಾಗಿದೆ.
Realme Narzo N55 ಸ್ಮಾರ್ಟ್ಫೋನ್ ವಿಶೇಷವಾಗಿ 64MP ಅಲ್ ಕ್ಯಾಮೆರಾದೊಂದಿಗೆ 33W ಚಾರ್ಜಿಂಗ್ ಅನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು 90Hz ಪೂರ್ಣ HD+ ಡಿಸ್ಪ್ಲೇ, ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್, 12GB ವರೆಗಿನ ಡೈನಾಮಿಕ್ RAM ಮತ್ತು ಕ್ರಮವಾಗಿ 4GB+64GB ಮತ್ತು 6GB+128GB ಯ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ನಂತೆ ಈ ಸ್ಮಾರ್ಟ್‌ಫೋನ್ ವಿಶೇಷ ಸಣ್ಣ ಕ್ಯಾಪ್ಸುಲ್ ಫೀಚರ್ ಅನ್ನು ಸಹ ಹೊಂದಿದೆ.
ಫೋನ್ ಅನ್ನು ಎರಡು ವೇರಿಯಂಟ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. 4GB + 64GB ವೇರಿಯಂಟ್ನ ಬೆಲೆ 10,999 ರೂ ಮತ್ತು 6GB + 128GB ವೇರಿಯಂಟ್ನ ಬೆಲೆ 12,999 ರೂ ಆಗಿದೆ. ಹೆಚ್ಚುವರಿಯಾಗಿ HDFC, ICICI ಮತ್ತು SBI ನಿಂದ ಖರೀದಿ ಮಾಡುವ ಗ್ರಾಹಕರು ರಿಯಾಯಿತಿಗಳನ್ನು ಪಡೆಯುತ್ತಾರೆ. Amazon ಮತ್ತು Realme ತನ್ನ ಧಿಕೃತ ವೆಬ್‌ಸೈಟ್‌ಗಳ ಮೂಲಕ ನೀವು ಬ್ಯಾಂಕ್ ಕೊಡುಗೆಯ ವಿವರಗಳನ್ನು ಮತ್ತು ಫೋನ್ ಹೆಚ್ಚುವರಿ ಮಾಹಿತಿಯನ್ನು ಪರಿಶೀಲಿಸಬಹುದು.
ಹೊಸ ಜನರೇಶನ್ ಅನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ಕಂಪನಿಯು ವಿಶೇಷವಾಗಿ ರಚಿಸಿದೆ. ಈ ಫೋನ್‌ನ 6.72 ಇಂಚಿನ ಪೂರ್ಣ HD+ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದ್ದು 90 Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.ಇದು ಮೀಡಿಯಾ ಟೆಕ್ G88 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಈ ಫೋನ್ 8GB RAM ಮತ್ತು 128GB ವರೆಗೆ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದು Android 13 ಅನ್ನು ಆಧರಿಸಿದ Realme UI 4.0 ಅನ್ನು ರನ್ ಮಾಡುತ್ತದೆ.
ಇದರಲ್ಲಿ ಫೋಟೋಗ್ರಫಿಗಾಗಿ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 64MP ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 8MP ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್‌ನಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮೋಡ್ ಮತ್ತು ನೈಟ್ ಮೋಡ್‌ನಂತಹ ವಿಶೇಷ ಕ್ಯಾಮೆರಾ ಫೀಚರ್‌ಗಳ ಆಯ್ಕೆಗಳು ಸಹ ಲಭ್ಯವಿದೆ. ಅಲ್ಲದೆ ಈ ಫೋನ್ 33W SuperVO0C ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.