Realme NARZO 70x 5G Sale: ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ರಿಯಲ್ಮಿ ಇತ್ತೀಚಿಗೆ ಬಿಡುಗಡೆಯಾದ ಹೊಸ Realme NARZO 70x 5G ಅನ್ನು ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 50MP AI ಕ್ಯಾಮೆರಾದೊಂದಿಗೆ ಮಾರಾಟ ಮಾಡುತ್ತಿರುವ ಅಮೆಜಾನ್ ಸಿಕ್ಕಾಪಟ್ಟೆ ಡಿಸ್ಕೌಂಟ್ ಸಹ ನೀಡುತ್ತಿದೆ. ಪ್ರಸ್ತುತ Realme NARZO 70x 5G ಸ್ಮಾರ್ಟ್‌ಫೋನ್ ನಿಮಗೆ ಮೂರು RAM ರೂಪಾಂತರದಲ್ಲಿ ಲಭ್ಯವಿದೆ ಆದರೆ ಇಲ್ಲಿ ಕೇವಲ ಅಮೆಜಾನ್ ಹೆಚ್ಚು ಡೀಲ್ ಮತ್ತು ಡಿಸ್ಕೌಂಟ್ ಹೊಂದಿರುವ ಸ್ಮಾರ್ಟ್‌ಫೋನ್ ಅಂದ್ರೆ 6GB RAM ಮತ್ತು 128GB ಸ್ಟೋರೇಜ್ ಬಗ್ಗೆ ಮಾತ್ರ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.
ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್‌ಫೋನ್ ನಿಮಗೆ ಒಟ್ಟು ಮೂರು RAM ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಅದರಲ್ಲಿ ಅಮೆಜಾನ್ ಪ್ರಸ್ತುತ ಕೇವಲ 6GB RAM ಮತ್ತು 128GB ಸ್ಟೋರೇಜ್ ಮೇಲೆ ಮಾತ್ರ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಅಮೆಜಾನ್ ಅತಿ ಕಡಿಮೆ ಬೆಲೆಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹10,749 ರೂಗಳಿಗೆ Ice Blue ಮತ್ತು Forest Green ಎಂಬ ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೆ RBL Bank Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ ಮತ್ತೆ 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Realme NARZO 70x 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 10,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 6550mAh ಬ್ಯಾಟರಿಯೊಂದಿಗೆ Redmi Turbo 4 ಸ್ಮಾರ್ಟ್‌ಫೋನ್ ಲಾಂಚ್! ಟಾಪ್ ಫೀಚರ್ ಮತ್ತು ಬೆಲೆ ಎಷ್ಟು?
Realme Narzo 60x 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ FHD+ LCD ಡಿಸ್ಪ್ಲೇ ನಿಮಗೆ 2400×1080 ಪಿಕ್ಸೆಲ್‌ಗಳ FHD ರೆಸುಲ್ಯೂಷನ್ ಜೊತೆಗೆ ಹೊಂದಿದೆ. ಈ Realme Narzo 60x 5G ಸ್ಮಾರ್ಟ್‌ಫೋನ್ ಡ್ಯುಯಲ್ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಇದರ ಪ್ರೈಮರಿ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತೊಂದು 2MP ಮೆಗಾಪಿಕ್ಸೆಲ್ ಮೊನೋ ಕ್ಯಾಮೆರಾ ಸೆನ್ಸರ್ ಲೆನ್ಸ್ ಅನ್ನು ಹೊಂದಿದೆ. ಅಲ್ಲದೆ Realme Narzo 60x 5G ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ.
Realme Narzo 60x 5G ಸ್ಮಾರ್ಟ್‌ಫೋನ್ ಒಕ್ಟಾ-ಕೋರ್ 2.2GHz ಸ್ಪೀಡ್ ಅನ್ನು MediaTek Dimensity 6100+ 5G ಪ್ರೊಸೆಸರ್‌ನೊಂದಿಗೆ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೋಡಿಸಲ್ಪಟ್ಟಿದೆ. ಅಲ್ಲದೆ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿದೆ. ಇದು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರಲು ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟೆಡ್ ಬಿಲ್ಡ್‌ನೊಂದಿಗೆ ಬರಲು ಲೇವಡಿ ಮಾಡಲಾಗಿದೆ.