Realme Narzo 70 Turbo ಗೇಮಿಂಗ್ ಸ್ಮಾರ್ಟ್ಫೋನ್ 8GB RAM ಮತ್ತು ಪವರ್ಫುಲ್ ಚಿಪ್‌ಸೆಟ್‌ನೊಂದಿಗೆ ಬಿಡುಗಡೆ!

Realme Narzo 70 Turbo ಗೇಮಿಂಗ್ ಸ್ಮಾರ್ಟ್ಫೋನ್ 8GB RAM ಮತ್ತು ಪವರ್ಫುಲ್ ಚಿಪ್‌ಸೆಟ್‌ನೊಂದಿಗೆ ಬಿಡುಗಡೆ!
HIGHLIGHTS

ರಿಯಲ್‌ಮಿ ಕಂಪನಿ ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Realme Narzo 70 Turbo ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Realme Narzo 70 Turbo ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್ಫೋನ್

6GB LPDDR4X RAM ಮತ್ತು MediaTek Dimensity 7300-Energy ಪ್ರೊಸೆಸರ್ನೊಂದಿಗೆ ಬರುತ್ತದೆ.

ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ಕಂಪನಿ ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Realme Narzo 70 Turbo ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ Realme Narzo 70 Turbo ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್ಫೋನ್ ವಿಭಾಗದಡಿಯಲ್ಲಿ ಬಿಡುಗಡೆಗೊಳಿಸಿದೆ. ಹೌದು ಇದರಲ್ಲಿನ ಫೀಚರ್ಗಳು ನಿಜಕ್ಕೂ ಉತ್ತಮವಾಗಿದ್ದು ನಿಮಗೆ ಅಥವಾ ನಿಮಗೆ ತಿಳಿದವರು ಬಜೆಟ್ ಬೆಲೆಗೆ ಹೊಸ ಗೇಮಿಂಗ್ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಈ ಡೀಲ್ ನಿಮಗೆ ಸೂಕ್ತವಾಗಿದೆ. ಇದರಲ್ಲಿ ನಿಮಗೆ 6GB LPDDR4X RAM ಮತ್ತು MediaTek Dimensity 7300-Energy ಪ್ರೊಸೆಸರ್ನೊಂದಿಗೆ ದೊಡ್ಡ ಡಿಸ್ಪ್ಲೇಯನ್ನು ಹೊಂದಿರುವುದು ಸ್ಮಾರ್ಟ್ಫೋನ್ ಖರೀದಿಯಲು ಹೆಚ್ಚು ಆಕರ್ಷಕಗೊಳಿಸುತ್ತದೆ.

Also Read: Top 5 Android Settings: ನಿಮ್ಮ ಪ್ರೈವಸಿ ಮತ್ತು ಡೇಟಾ ಸುರಕ್ಷತೆಗಾಗಿ ನಿಮ್ಮ ಫೋನಲ್ಲಿ ಈ ಸೆಟ್ಟಿಂಗ್ ತಕ್ಷಣ ಆಫ್ ಮಾಡಿ!

Realme Narzo 70 Turbo ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಮಾಹಿತಿಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅವೆಂದರೆ 6GB RAM ಮತ್ತು 128GB ಸ್ಟೋರೇಜ್ ಆಗಿದ್ದು 16,999 ರೂಗಳಿಗೆ ಬಿಡುಗಡೆಯಾಗಿದೆ. ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಸ್ಟೋರೇಜ್ ಆಗಿದ್ದು 17,999 ರೂಗಳಿಗೆ ಬಿಡುಗಡೆಯಾಗಿದೆ. ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಆಗಿದ್ದು 20,999 ರೂಗಳಿಗೆ ಬಿಡುಗಡೆಯಾಗಿದೆ.

Realme Narzo 70 Turbo Gaming Phone launched with 8GB RAM in India
Realme Narzo 70 Turbo Gaming Phone launched with 8GB RAM in India

ಸ್ಮಾರ್ಟ್ಫೋನ್ ಬಿಡುಗಡೆಯ ಕೊಡುಗೆಯಾಗಿ 2000 ರೂಗಳ ಕೂಪನ್ ಡಿಸ್ಕೌಂಟ್ ಅನ್ನು ದೀಪಾವಳಿಗೂ ಮುಂಚೆ ಖರೀದಿಸುವವರಿಗೆ ನೀಡಲಾಗುತ್ತಿದೆ. ಸ್ಮಾರ್ಟ್ಫೋನ್ ಅನ್ನು ನೀವು 16ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ realme.com, Realme Store App ಮತ್ತು ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದು.

Realme Narzo 70 Turbo ಫೀಚರ್ ಮತ್ತು ವಿಶೇಷಣತೆಗಳೇನು?

Realme Narzo 70 Turbo ಸ್ಮಾರ್ಟ್ಫೋನ್ 6.67 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಫೋನ್‌ನ ಡಿಸ್‌ಪ್ಲೇಯ ಗರಿಷ್ಠ ಹೊಳಪು 2000 ನಿಟ್‌ಗಳವರೆಗೆ ಇರುತ್ತದೆ. ಈ Realme ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಫೋನ್ 50MP ಪ್ರೈಮರೀ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.

Realme Narzo 70 Turbo Gaming Phone launched with 8GB RAM in India
Realme Narzo 70 Turbo Gaming Phone launched with 8GB RAM in India

Realme ನ ಈ ಫೋನ್ MediaTek ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, 12GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯ ಬೆಂಬಲ ಲಭ್ಯವಿದೆ. ಈ ಗೇಮಿಂಗ್ ಫೋನ್‌ನ RAM ಅನ್ನು ವಾಸ್ತವಿಕವಾಗಿ 14GB ವರೆಗೆ ವಿಸ್ತರಿಸಲು ನಿಮಗೆ ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಮೈಕ್ರೋ SD ಕಾರ್ಡ್ ಮೂಲಕ ಫೋನ್‌ನ ಸ್ಟೋರೇಜ್ ಅನ್ನು 1TB ವರೆಗೆ ಹೆಚ್ಚಿಸಬಹುದು. ಈ ಫೋನ್ 45W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ Realme UI ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ನ ಇತರ ವೈಶಿಷ್ಟ್ಯಗಳಲ್ಲಿ ವೈ-ಫೈ 6, ಬ್ಲೂಟೂತ್ 5.4, ಡ್ಯುಯಲ್ 5G, 3.5 ಎಂಎಂ ಜ್ಯಾಕ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಹೆಚ್ಚಿನವು ಸೇರಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo