ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ರಿಯಲ್‌ಮಿ (Realme) ಸ್ಮಾರ್ಟ್ಫೋನ್ ತನ್ನ ಜನಪ್ರಿಯ Realme Narzo 70 Turbo 5G ಸ್ಮಾರ್ಟ್ಫೋನ್ ಮೇಲೆ ಸದ್ದಿಲ್ಲದೆ ಅದ್ದೂರಿಯ ಬೆಲೆ ಕಡಿತಗೊಳಿಸಿದೆ. ಭಾರತದಲ್ಲಿ ಈ ಹೊಸ Realme Narzo 70 Turbo 5G ಸ್ಮಾರ್ಟ್‌ಫೋನ್ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಮಾರಾಟವಾಗುತ್ತಿದ್ದು ಈಗ ಇದರ ಹೊಸ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಬಹುದು. ಯಾಕೆಂದರೆ ಕಂಪನಿ ಈ Realme Narzo 70 Turbo 5G ಸ್ಮಾರ್ಟ್‌ಫೋನ್ ಮೇಲೆ ಬರೋಬ್ಬರಿ ₹2500 ರೂಗಳ ಉಚಿತ ಕೂಪನ್ ಡಿಸ್ಕೌಂಟ್‌ನೊಂದಿಗೆ ಆರಂಭಿಕ 6GB ಕೇವಲ 14,499 ರೂಗಳಿಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ.
Realme Narzo 70 Turbo 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಲಭ್ಯವಾಗಲಿದ್ದು ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ₹16,998 ರೂಗಳಿಗೆ ಮತ್ತು ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ₹17,998 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಕೇವಲ ₹20,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಆರಂಭಿಕದ ಮೇಲೆ 2500 ರೂಗಳನ್ನು ಮತ್ತೆರಡು ರೂಪಾಂತರಗಳಿಗೆ 2000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ನೀಡುತ್ತಿದೆ.
ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. Realme Narzo 70 Turbo 5G ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಆರಂಭಿಕಗೆ ಸುಮಾರು 16,998 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
Also Read: Unlimited 5G ಮತ್ತು ವಾಯ್ಸ್ ಕರೆಗಳನ್ನು 200 ದಿನಗಳಿಗೆ ನೀಡುವ Jio ಜಬರ್ದಸ್ತ್ ರಿಚಾರ್ಜ್ ಪ್ಲಾನ್!
ಸ್ಮಾರ್ಟ್ಫೋನ್ 6.67 ಇಂಚಿನ ಪೂರ್ಣ HD+ (1080 x 2400 ಪಿಕ್ಸೆಲ್‌ಗಳು) Samsung E4 OLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಈ ಡಿಸ್ಪ್ಲೇಯನ್ನು OLED ಎಸ್ಪೋರ್ಟ್ಸ್ ಡಿಸ್ಪ್ಲೇ ಎಂದು ಕರೆಯಲಾಗುತ್ತದೆ. ಇದು ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ. Realme Narzo 70 Turbo 5G ಸ್ಮಾರ್ಟ್‌ಫೋನ್ ಇಷ್ಟಪಡುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಕಂಪನಿಯು 50MP ಮೆಗಾಪಿಕ್ಸೆಲ್ Ai ಬೆಂಬಲಿತ ಪ್ರೈಮರಿ ಹಿಂಬದಿಯ ಕ್ಯಾಮರಾ ಮತ್ತು 2MP ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮರಾವನ್ನು ನೀಡಿದೆ. ಅದೇ ಸಮಯದಲ್ಲಿ ಇದು ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ MediaTek Dimensity 7300 Energy 5G ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು Mali-G615 GPU ನೊಂದಿಗೆ ಜೋಡಿಸಲಾಗಿದೆ. ಇದು 12GB ವರೆಗೆ LPDDR4X RAM ಮತ್ತು 256GB UFS 3.1 ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು ವಾಸ್ತವಿಕವಾಗಿ 26GB ವರೆಗೆ ವಿಸ್ತರಿಸಬಹುದು. Realme Narzo 70 Turbo 5G ಗೇಮಿಂಗ್ ಸಮಯದಲ್ಲಿ ಫೋನ್‌ನ ಶಾಖವನ್ನು ಕಡಿಮೆ ಮಾಡುತ್ತದೆ. ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳಂತಹ ವೈಶಿಷ್ಟ್ಯಗಳು ಸಹ ಇದರಲ್ಲಿ ಲಭ್ಯವಿದೆ.