ಭಾರತದಲ್ಲಿ ಕೆಲವೇ ದಿನಗಳಲ್ಲಿ ರಿಯಲ್ಮಿ ಸ್ಮಾರ್ಟ್ಫೋನ್ ಕಂಪನಿ ತನ್ನ ಲೇಟೆಸ್ಟ್ Realme 13+ ಸರಣಿಯನ್ನು ಬಿಡುಗಡೆಗೊಳಿಸಿದ ನಂತರ ಈಗ ಇನ್ನೂ ಕೆಲವೇ ದಿನಗಳಲ್ಲಿ ಕಂಪನಿಯು ಮುಂದಿನ ವಾರ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ Realme Narzo 70 Turbo 5G Series ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದನ್ನು ಕಂಪನಿ 9ನೇ ಸೆಪ್ಟೆಂಬರ್ 2024 ರಂದು ಬಿಡುಗಡೆಗೊಳಿಸುವುದಾಗಿ ಕಂಫಾರ್ಮ್ ಮಾಡಿದೆ. ಇದರ ಹೆಸರೇ ಸೂಚಿಸುವಂತೆ ಹೊಸ ಸ್ಮಾರ್ಟ್‌ಫೋನ್ Realme Narzo 70 ಸರಣಿಯ ಭಾಗವಾಗಿರುತ್ತದೆ. ಈ ಸರಣಿಯಲ್ಲಿ ಕಂಪನಿ ಇದು ಈಗಾಗಲೇ ಮೂರು ಸ್ಮಾರ್ಟ್‌ಫೋನ್‌ಗಳನ್ನು Realme Narzo 70 5G, Realme Narzo 70x 5G ಮತ್ತು Realme Narzo 70 Pro 5G ಒಳಗೊಂಡಿದೆ.
Also Read: Flipkart Big Billion Sale 2024 ದಿನಾಂಕ ಕಂಫಾರ್ಮ್! ವಿಶೇಷವಾಗಿ ಪ್ಲಸ್ ಸದಸ್ಯರಿಗೆ ಮೊದಲ ಪ್ರವೇಶ!
ಈ ಮುಂಬರಲಿರುವ Realme Narzo 70 Turbo 5G ಸ್ಮಾರ್ಟ್ಫೋನ್ ಈಗಾಗಲೇ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ OPPO Reno 12 5G, iQOO Z9s ಮತ್ತು CMF Phone (1) ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಿರುವ ಅದೇ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ಪರಿಗಣಿಸಲಾಗಿದ್ದು ಇದರ ಅಡಿಯಲ್ಲಿ ಬೆಲೆಯನ್ನು ಲೆಕ್ಕ ಹಾಕುವುದಾದರೆ ಸುಮಾರು 30,000 ರೂಗಳೊಳಗೆ 6GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
Realme Narzo 70 Turbo 5G ಅನ್ನು Mediatek Dimensity 7300 Energy 5G ಚಿಪ್‌ಸೆಟ್‌ನಿಂದ ನಡೆಸಲಾಗುವುದು ಎಂದು Realme ದೃಢಪಡಿಸಿದೆ. ಹೊರತಾಗಿ ಸ್ಮಾರ್ಟ್‌ಫೋನ್ “ಮೋಟಾರ್‌ಸ್ಪೋರ್ಟ್-ಪ್ರೇರಿತ ವಿನ್ಯಾಸವನ್ನು ಹೊಂದಿದೆ ಎಂದು ಕಂಪನಿಯು ಬಿಡುಗಡೆಗೆ ಮುಂಚಿತವಾಗಿ ಬಹಿರಂಗಪಡಿಸಿದೆ. ಫೋನ್‌ನಲ್ಲಿ ಹಂಚಿಕೊಂಡಿರುವ ಟೀಸರ್ ಚಿತ್ರಗಳಲ್ಲಿಯೂ ಅದೇ ಬಹಿರಂಗವಾಗಿದೆ. 7.6 ಎಂಎಂ ದಪ್ಪದೊಂದಿಗೆ ಸ್ಮಾರ್ಟ್‌ಫೋನ್ ನಯವಾಗಿರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.
ಹೆಚ್ಚುವರಿಯಾಗಿ Realme Narzo 70 Turbo 5G ಸ್ಮಾರ್ಟ್ಫೋನ್ LED ಫ್ಲ್ಯಾಷ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಟೀಸರ್‌ಗಳು ಬಹಿರಂಗಪಡಿಸುತ್ತವೆ. ಈ ಸಂಪೂರ್ಣ ಸೆಟಪ್ ಅನ್ನು ಸ್ಮಾರ್ಟ್‌ಫೋನ್‌ನ ಹಿಂಭಾಗದ ಪ್ಯಾನೆಲ್‌ನ ಮೇಲಿನ ಮಧ್ಯಭಾಗದಲ್ಲಿರುವ ಚದರ ಲೈಟ್ ನಲ್ಲಿ ಇರಿಸಲಾಗುತ್ತದೆ. Realme ಬಣ್ಣದ ಯೋಜನೆಯು ಬದಿಯಲ್ಲಿ ತೆಳುವಾದ ಕಪ್ಪು ಬ್ಯಾಂಡ್‌ಗಳನ್ನು ಹೊಂದಿರುವ ಸ್ಪೋರ್ಟಿ ಹಳದಿ ಬಣ್ಣದ್ದಾಗಿದೆ. ಕ್ಯಾಮೆರಾ ಲೈಟ್ ಕಪ್ಪು ವಿನ್ಯಾಸದೊಂದಿಗೆ ಹೆಚ್ಚು ಆಕರ್ಷಕ ಮತ್ತು ಇಂಟಸ್ಟಿಂಗ್ ಆಗಿ ಎದ್ದು ಕಾಣುತ್ತದೆ.