ಭಾರತದಲ್ಲಿ ಈಗ ಅತಿ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ಸ್ಮಾರ್ಟ್ಫೋನ್ ರಿಯಲ್‌ಮಿ ಕಂಪನಿಯ Realme Narzo 60X 5G ಬಿಡುಗಡೆಯಲು ಸಜ್ಜಾಗಿದೆ. ಈ ಚೀನೀ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಭಾರತದಲ್ಲಿ ತನ್ನ ನಾರ್ಜೊ ಶ್ರೇಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಹ್ಯಾಂಡ್‌ಸೆಟ್ ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮೈಕ್ರೋಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಅಮೆಜಾನ್ ವರದಿಗಳು ಇದನ್ನು Realme Narzo 60X 5G ತಿಳಿಸಿದ್ದು ಇದರ ಬಿಡುಗಡೆಯ ದಿನಾಂಕವನ್ನು ನಾಳೆ ಮಧ್ಯಾಹ್ನ 12:00 ಗಂಟೆಗೆ ಆಯೋಜಿಸಿದ್ದು ಇದರೊಂದಿಗೆ ಕಂಪನಿ ಬಡ್ಸ್ ಅನ್ನು ಸಹ ಬಿಡುಗಡೆ ಮಾಡಲು ಸಜ್ಜಾಗಿದೆ.
ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್ಫೋನ್ ಭಾರತದಲ್ಲಿ ನಾಳೆ ಅಂದ್ರೆ 6ನೇ ಸೆಪ್ಟೆಂಬರ್ 2023 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗಲಿದೆ. ಇದರೊಂದಿಗೆ ಕಂಪನಿ ತನ್ನ ಹೊಸ ಬಡ್ಸ್ Realme Buds T300 ಅನ್ನು ಸಹ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದನ್ನು ನೀವು ಅಮೆಜಾನ್ ಮೂಲಕ ಖರೀದಿಸಬಹುದು. Realme Narzo 60X ಮೊಬೈಲ್ ಫೋನ್ 33W ಫಾಸ್ಟ್ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಲಿದೆ. ಅಲ್ಲದೆ ಈ ಪ್ಯಾಕೇಜ್‌ನಲ್ಲಿ ಈ ಫೋನ್ ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಮುಂದೆ ತಿಳಿಯಿರಿ.
https://twitter.com/realmenarzoIN/status/1698999467872031151?ref_src=twsrc%5Etfw
ರಿಯಲ್‌ಮಿ ಕಂಪನಿಯ ಈ ಹೊಸ ಮುಂಬರಲಿರುವ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ Realme Narzo 60X 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ವೇರಿಯಂಟ್ಗಳಲ್ಲಿ ಬರಲಿದ್ದು 6GB RAM ಮತ್ತು 128GB ಸ್ಟೋರೇಜ್ ಆಗಿದ್ದು ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಮತ್ತು ಕೊನೆಯಾಗಿ 8GB RAM ಮತ್ತು 256GB ಸ್ಟೋರೇಜ್ ಇದರ ಬೆಲೆಯನ್ನು ಸುಮಾರು 14,999 ರೂಗಳಿಂದ ಆರಂಭವಾಗುವ ನಿರೀಕ್ಷೆಗಳಿವೆ. ಇದರೊಂದಿಗೆ ಹೊಸ Realme Buds ಸಹ 4,499 ರೂಗಳಿಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ಸ್ಮಾರ್ಟ್ಫೋನ್ ಫುಲ್ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.74 ಇಂಚಿನ IPS LCD ಸ್ಕ್ರೀನ್ ಅನ್ನು ನಿರೀಕ್ಷಿಸಬಹುದು. ಇದರ ಹಿಂಭಾಗದಲ್ಲಿ 64MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಜೊತೆಗೆ 2MP ಕ್ಯಾಮೆರಾವನ್ನು ಹೊಂದಲಿದೆ. ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಗಳಿವೆ. ಇದರಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಬಳಸಿಕೊಂಡು ಅನ್‌ಲಾಕ್ ಮಾಡಬಹುದು. ಅನ್‌ಲಾಕ್ ಮಾಡಿದ ನಂತರ Realme UI 4.0 ಮೂಲಕ ಆಂಡ್ರಾಯ್ಡ್ 13 ಅನ್ನು ಆಧರಿಸಿದೆ. ಇದರೊಂದಿಗೆ ಮೀಡಿಯಾಟೆಕ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್ ಹೊಂದುವ ನಿರೀಕ್ಷೆ. ಕೊನೆಯದಾಗಿ Realme Narzo 60X 5G ಸ್ಮಾರ್ಟ್ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡಲಿದೆ.
ಇದರ ನಂತರ ಹೊಸ ಆಡಿಯೋ ಬಡ್ಸ್ ಬಗ್ಗೆ ಮಾತನಾಡುವುದಾದರೆ ಹೆಚ್ಚು ಬಾಸ್ ಸ್ನೇಹಿ ವಾಯ್ಸ್ ನೀಡಲು ಇದರಲ್ಲಿ 12.4mm ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ . ಇದರಲ್ಲಿ ಸರೌಂಡ್ ಸೌಂಡ್ ಅನುಭವಕ್ಕಾಗಿ TWS ಜೋಡಿಯು 360-ಡಿಗ್ರಿ ಪ್ರಾದೇಶಿಕ ಆಡಿಯೊವನ್ನು ಬೆಂಬಲಿಸುತ್ತದೆ.ಇದರಲ್ಲಿ ನಿಮಗೆ 30dB ANC (Active Noise Cancellation) ಹೊಂದಿದ್ದು 4 ಮೈಕ್ರೊಫೋನ್-ಸಕ್ರಿಯಗೊಳಿಸಿದ ನೋಯಿಸ್ ಕ್ಯಾನ್ಸಲೇಷನ್ ಮೂಲಕ ಉತ್ತಮ ಕರೆಗಳಿಗೆ ಸಹಾಯ ಮಾಡಬಹುದು. ಇದರಲ್ಲಿ ನಿಮಗೆ 40 ಗಂಟೆಗಳ ಬ್ಯಾಟರಿಯನ್ನು ಹೊಂದಿದ್ದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ಸುಮಾರು 7 ಗಂಟೆಗಳ ಪ್ಲೇಟೈಮ್ ಅನ್ನು ಸೂಚಿಸುತ್ತವೆ. ಇದರ ಬಗ್ಗೆ ಸಂಪೂರ್ಣ ಅಧಿಕೃತ ಮಾಹಿತಿಯನ್ನು ನಾವು ನಿಮಗೆ ನಾಳೆ ಮಧ್ಯಾಹ್ನ ನೀಡಲಿದ್ದೇವೆ.