Realme ತನ್ನ Narzo ಸರಣಿಯೊಂದಿಗೆ ಮರಳಿ ತನ್ನ ಹೊಚ್ಚ ಹೊಸ Realme Nazo N55 ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಆಪಲ್‌ನ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೋಲುವ ಮಿನಿ ಕ್ಯಾಪ್ಸುಲ್ ಅನ್ನು ಸಹ ಫೋನ್ ಒಳಗೊಂಡಿದೆ. ಕಂಪನಿಯು ಇದು 33W ಚಾರ್ಜಿಂಗ್ ಬೆಂಬಲ ಮತ್ತು 64MP AI ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಸ್ಮಾರ್ಟ್‌ಫೋನ್‌ನ ಆನ್‌ಲೈನ್ ಲೈವ್ ಮಾರಾಟವು ಏಪ್ರಿಲ್ 13 ರಂದು ಪ್ರಾರಂಭವಾಗುತ್ತದೆ ಮತ್ತು ಹೆಚ್ಚುವರಿ ರಿಯಾಯಿತಿಗಳೊಂದಿಗೆ ವಿಶೇಷ ಬಿಡುಗಡೆಯ ಕೊಡುಗೆ ಅವಧಿಯು ಏಪ್ರಿಲ್ 18 ರಿಂದ ಏಪ್ರಿಲ್ 21 ರವರೆಗೆ Realme ಮತ್ತು Amazon ಮೂಲಕ ಪ್ರಾರಂಭವಾಗಲಿದೆ.
Realme N55 ಎರಡು ವೇರಿಯಂಟ್ಗಳಲ್ಲಿದ್ದು ಮೂಲ ವೇರಿಯಂಟ್ 4GB RAM ಮತ್ತು 64GB ಸ್ಟೋರೇಜ್ ಅನ್ನು ಹೊಂದಿದೆ. ಇದರ ಬೆಲೆ ರೂ 10,999. ಫೋನ್‌ನ ಟಾಪ್-ಎಂಡ್ ವೇರಿಯಂಟ್ 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಇದರ ಬೆಲೆ ರೂ 12,999 ಆಗಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ 12GB ವರೆಗೆ ಡೈನಾಮಿಕ್ RAM ಅನ್ನು ಬೆಂಬಲಿಸುತ್ತದೆ. ಪ್ರೈಮ್ ಬ್ಲೂ ಮತ್ತು ಪ್ರೈಮ್ ಬ್ಲ್ಯಾಕ್ ಎಂಬ ಎರಡು ಕಲರ್‌ಗಳ ಆಯ್ಕೆಯಲ್ಲಿ Realme N55 ಲಭ್ಯವಿದೆ.
https://twitter.com/realmeIndia/status/1646111121567301633?ref_src=twsrc%5Etfw
Realme N55 4GB RAM ವೇರಿಯಂಟ್ ನ ಫೋನ್ ಬಿಡುಗಡೆಯ ಆಫರ್ ಆಗಿ 10,499 ರೂ ಮತ್ತು 6GB RAM ವೇರಿಯಂಟ್ 11,999 ರೂಗಳಲ್ಲಿ ಲಭ್ಯವಿರುತ್ತವೆ. ಈ ಬೆಲೆ ಏಪ್ರಿಲ್ 18 ಮತ್ತು ಏಪ್ರಿಲ್ 21 ರ ನಡುವೆ ಮಾತ್ರ ಅನ್ವಯಿಸುತ್ತವೆ. Realme N55 ಏಪ್ರಿಲ್ 18 ರಂದು Amazon ಮತ್ತು realme.com ನಲ್ಲಿ ಓಪನ್ ಸೇಲ್ನ ಮೂಲಕ ಮಾರಾಟವಾಗಲಿದೆ. ಆ ಸಮಯದಲ್ಲಿ ಆಸಕ್ತ ಖರೀದಿದಾರರು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಓಪನ್ ಸೇಲ್ ಮಾರಾಟಕ್ಕಾಗಿ ಕಾಯಲು ಸಾಧ್ಯವಾಗದವರಿಗೆ ಏಪ್ರಿಲ್ 13 ರಂದು Realme ಅರ್ಲಿ ಆಕ್ಸೆಸ್ ಸೇಲ್ ಅಥವಾ ಲೈವ್ ಸೇಲ್ ಅನ್ನು ಸಹ ನಡೆಸಲಿದೆ.
Realme N55 ಸ್ಮಾರ್ಟ್ಫೋನ್ FHD+ ರೆಸಲ್ಯೂಶನ್ ಮತ್ತು 90HZ ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಫೋನ್ ಹೋಲ್ ಪಂಚ್ ವಿನ್ಯಾಸದೊಂದಿಗೆ 6.72 ಇಂಚಿನ ಫುಲ್ ಸ್ಕ್ರೀನ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು MediaTek Helio G88 ಪ್ರೊಸೆಸರ್ ಅನ್ನು ಹೊಂದಿದ್ದು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಫೋನ್ Android 13 ನಿಂದ Realme UI 4.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
Realme N55 64MP ಪ್ರೈಮರಿ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ರೆಸಲ್ಯೂಶನ್ ಹೊಂದಿರುವ B&W ಲೆನ್ಸ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ. ಖುಷಿ ವಿಚಾರ ಏನೆಂದರೆ ಸಾಮಾನ್ಯವಾಗಿ ನಿಮ್ಮ ಫೋಟೋಗ್ರಾಫಿಕ್ ಅನುಭವವನ್ನು ಸುಧಾರಿಸಲು Realme ಸಾಕಷ್ಟು ಕ್ಯಾಮೆರಾ ಫೀಚರ್‌ಗಳನ್ನು ನೀಡುತ್ತದೆ. ಬೊಕೆ ಫ್ಲೇರ್ ಪೋರ್ಟ್ರೇಟ್, AI ಕಲರ್ ಪೋರ್ಟ್ರೇಟ್, ಮತ್ತು ಸ್ಟಾರಿ ಮೋಡ್ ನಂತಹ ವಿಶೇಷ ಫೀಚರ್‌ಗಳು ಈ ಫೋನ್ ನಲ್ಲಿ ಲಭ್ಯವಿದೆ.
Realme N55 5000mAh ಬ್ಯಾಟರಿಯನ್ನು ಹೊಂದಿದ್ದು ಇದು 33W SuperVOOC ಚಾರ್ಜಿಂಗ್ ವಿಧಾನವನ್ನು ಬೆಂಬಲಿಸುತ್ತದೆ. ಇನ್ನು ಈ ಫೋನ್ 50% ಚಾರ್ಜ್ ಆಗಲು ಸುಮಾರು 29 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು 100% ಚಾರ್ಜ್ ಆಗಲು 63 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.