ಭಾರತದಲ್ಲಿ ಇಂದು realme ಕಂಪನಿ ಇಂದು C ಸರಣಿಯ ಮೂರು ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ Realme C20, Realme C21 ಮತ್ತು Realme C25 ಅನ್ನು ಒಳಗೊಂಡಿದೆ. ಈ ಹ್ಯಾಂಡ್‌ಸೆಟ್‌ಗಳು ಕಂಪನಿಯ C ಸರಣಿಗೆ ಸೇರಲಿದ್ದು ಅದು ಈಗಾಗಲೇ Realme C11 ಮತ್ತು Realme C12 ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಈ ಕಂಪನಿಯ ಮೈಕ್ರೋಸೈಟ್ ಪ್ರಕಾರ ಈ ಹೊಸ Realme C20, Realme C21 ಮತ್ತು Realme C25 ಸ್ಮಾರ್ಟ್ಫೋನ್ಗಳು ಚೌಕ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹಿಂಭಾಗದಲ್ಲಿ ಜೋಡಿಸಲಾಗಿದ್ದು ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿರುತ್ತದೆ. ಈ ಸ್ಮಾರ್ಟ್ಫೋನ್ಗಳು ಈಗಾಗಲೇ ಭಾರತದ ಹೊರಗೆ ಬಿಡುಗಡೆಯಾಗಿದ್ದು Realme C20 ಈಗಾಗಲೇ ವಿಯೆಟ್ನಾಂನಲ್ಲಿ ಪಾದಾರ್ಪಣೆ ಮಾಡಿದೆ. Realme C21 ಈಗ ಮಲೇಷ್ಯಾದಲ್ಲಿ ಖರೀದಿಸಲು ಲಭ್ಯವಿದೆ. ಮತ್ತು Realme C25 ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿದೆ.
ಈ C ಸರಣಿಯ ಮೂರು ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳ ಬಿಡುಗಡೆಯ ಕಾರ್ಯಕ್ರಮವು ಇಂದು ಮಧ್ಯಾಹ್ನ 12.30ಕ್ಕೆ ಭಾರತೀಯ ಸಮಯದ ಪ್ರಕಾರ ಪ್ರಾರಂಭವಾಗಲಿದೆ. ಇದರ ಲೈವ್ ಅಪ್ಡೇಟ್ ಪಡೆಯಲು ನೀವು ಕಂಪನಿಯ ಯೂಟ್ಯೂಬ್ ಮತ್ತು ಫೇಸ್‌ಬುಕ್ ಪೇಜ್ಗಳಿಗೆ ಭೇಟಿ ನೀಡಬಹುದು. ಈ ಕೆಳಗೆ ನೀಡಿರುವ ಲೈವ್‌ಸ್ಟ್ರೀಮ್ ಲಿಂಕ್ ಅನ್ನು ಸಹ ನೀವು ಟ್ಯಾಪ್ ಮಾಡಿ ನೋಡಬವುದು. ಸ್ನೇಹಿತರೇ ಈ ಸ್ಮಾರ್ಟ್ಫೋನ್ಗಳ ಬಿಡುಗಡೆಯೊಂದಿಗೆ ನಿಮಗೆ ಇದರ ಸಂಪೂರ್ಣ ಮಾಹಿತಿಯನ್ನು ಡಿಜಿಟ್ ಕನ್ನಡಲ್ಲಿ ನೀಡಲಾಗುತ್ತದೆ. ನೀವು ಇದರ ಹೆಚ್ಚಿನ ಅಪ್ಡೇಟ್ಗಳಿಗಾಗಿ ಡಿಜಿಟ್ ಕನ್ನಡ ಟ್ವಿಟ್ಟರ್ ಅನ್ನು ಸಹ ಫಾಲೋ ಫಾಲೋ ಮಾಡಬವುದು.
ವಿಯೆಟ್ನಾಂ ರೂಪಾಂತರದ ವಿಶೇಷಣಗಳ ಪ್ರಕಾರ Realme C20 ಸ್ಮಾರ್ಟ್ಫೋನ್ 6.5 ಇಂಚಿನ HD+ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬರಲಿದ್ದು ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುತ್ತದೆ. ಇದು ಮೀಡಿಯಾ ಟೆಕ್ ಹೆಲಿಯೊ G35 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 2GB RAM ಮತ್ತು 32GB ಸಂಗ್ರಹವನ್ನು ನೀಡುತ್ತದೆ. ಇದು ಆಂಡ್ರಾಯ್ಡ್ 10 ಆಧಾರಿತ Realme ಯುಐನಲ್ಲಿ ಚಾಲನೆಯಲ್ಲಿದೆ. ಸ್ಮಾರ್ಟ್ಫೋನ್ 8MP ಹಿಂಬದಿಯ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕೂಲ್ ಬ್ಲೂ ಮತ್ತು ಕೂಲ್ ಗ್ರೇ ಕಲರ್ ರೂಪಾಂತರಗಳಲ್ಲಿ ಬರಲಿದೆ.
Realme C21 ಸ್ಮಾರ್ಟ್ಫೋನ್ 6.5 ಇಂಚಿನ HD+ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ನಿಂದ ಕೂಡಿದ್ದು 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಸ್ಮಾರ್ಟ್ಫೋನ್ 13MP ಪ್ರೈಮರಿ ಸಂವೇದಕ 2MP ಮ್ಯಾಕ್ರೋ ಸೆನ್ಸರ್ ಮತ್ತು 2MP ಏಕವರ್ಣದ ಸಂವೇದಕವನ್ನು ಹೊಂದಿದೆ. ಇದು 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ. Realme C21 ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆ ಇದ್ದು 10w ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕ್ರಾಸ್ ಬ್ಲೂ ಮತ್ತು ಕ್ರಾಸ್ ಬ್ಲ್ಯಾಕ್ ಕಲರ್ ರೂಪಾಂತರಗಳಲ್ಲಿ ಬರಲಿದೆ.
Realme C25 ಸ್ಮಾರ್ಟ್ಫೋನ್ 6.5 ಇಂಚಿನ HD+ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬರಲಿದೆ. ಇದು ಮೀಡಿಯಾ ಟೆಕ್ ಹೆಲಿಯೊ G70 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 4GB RAM ಮತ್ತು 128GB ವರೆಗೆ ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಇದು ಆಂಡ್ರಾಯ್ಡ್ 11 ಆಧಾರಿತ Realme ಯುಐ 2.0 ನಲ್ಲಿ ಚಾಲನೆಯಾಗುವ ನಿರೀಕ್ಷೆಯಿದೆ. ಕ್ಯಾಮೆರಾದಂತೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅದು 48MP ಪ್ರೈಮರಿ ಸಂವೇದಕ 2MP ಏಕವರ್ಣದ ಸಂವೇದಕ ಮತ್ತು 2MP ಮ್ಯಾಕ್ರೋ ಸಂವೇದಕವನ್ನು ಹೊಂದಿದೆ. ಇದು 8MP ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ. Realme C25 ನಲ್ಲಿ 6000mAh ಬ್ಯಾಟರಿ ಅಳವಡಿಸಲಿದ್ದು ಅದು 18w ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.