Snapdragon ಚಿಪ್‌ನೊಂದಿಗೆ Realme GT Neo 6 ಬಿಡುಗಡೆಗೆ ಸಜ್ಜು! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 09-May-2024
HIGHLIGHTS

ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಹೊಸ Realme GT Neo 6 ಸ್ಮಾರ್ಟ್ಫೋನ್ ಬಿಡುಗಡೆಗೆ ಸಿದ್ದ.

ಪ್ರಸ್ತುತ Realme GT Neo 6 ಸ್ಮಾರ್ಟ್ಫೋನ್ Snapdragon 7+ Gen 3 ಚಿಪ್‌ನೊಂದಿಗೆ ಬರುವ ಭಾರತದ ಮೊದಲ ಸ್ಮಾರ್ಟ್ಫೋನ್.

Realme GT Neo 6 ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಸೆಟಪ್‌ನೊಂದಿಗೆ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ ನಿರೀಕ್ಷೆಗಳಿವೆ.

Realme GT Neo 6 teased ahead of official launch in India: ಭಾರತದಲ್ಲಿ ಅತಿ ಜನಪ್ರಿಯ ಮತ್ತು ಹೆಚ್ಚು ಬಜೆಟ್ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ರಿಯಲ್‌ಮಿ (Realme) ಈಗ ತನ್ನ ಮುಂಬರಲಿರುವ ಹೊಸ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಒಂದಿಷ್ಟು ಮಾಹಿತಿಯನ್ನು ನೋಡುವುದಾದರೆ ಪ್ರಸ್ತುತ Realme GT Neo 6 ಸ್ಮಾರ್ಟ್ಫೋನ್ Snapdragon ಚಿಪ್‌ನೊಂದಿಗೆ ಬಿಡುಗಡೆಯಾಗುವುದಾಗಿ ಖಚಿತಪಡಿಸಿದೆ. Realme GT Neo 6 ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಸೆಟಪ್‌ನೊಂದಿಗೆ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ ನಿರೀಕ್ಷೆಗಳಿವೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ.

ಚೀನಾದಲ್ಲಿ Realme GT Neo 6 ಫೀಚರ್ ಮತ್ತು ಬೆಲೆ!

ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ Realme GT Neo 6 ಸ್ಮಾರ್ಟ್ಫೋನ್ ಮೂರೂ ಬಣ್ಣಗಳಲ್ಲಿ ಬಿಡುಗಡೆಯಾಗಿದ್ದು 5500mAh ಬ್ಯಾಟರಿಯೊಂದಿಗೆ Snapdragon 8s ಚಿಪ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಇಂದೇ ತಿಂಗಳು 15ನೇ ಮೇ 2024 ರಿಂದ ಮೊದಲ ಮಾರಾಟವಾಗಲಿದೆ. ಇದನ್ನು ಸುಮಾರು 2099 Yuan ಅಂದ್ರೆ ಭಾರತದಲ್ಲಿ ಸರಿ ಸುಮಾರು 24,999 ರೂಗಳಿಗೆ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಭಾರತದ ಸ್ಮಾರ್ಟ್ಫೋನ್ ಈಗಾಗಲೇ ಚಿಪ್‌ನೊಂದಿಗೆ ಕೊಂಚ ಬದಲಾವಣೆಗಳನ್ನು ಮಾಡಿದ್ದೂ ಬೆಲೆಯನ್ನು ಸಹ ಸುಮಾರು 29,999 ರೂಗಳಿಗೆ ಬಿಡುಗಡೆಯಾಗುವುದಾಗಿ ನಿರೀಕ್ಷೆಗಳಿವೆ.

Realme GT Neo 6 teased ahead of official launch in India 2024

ರಿಯಲ್‌ಮಿ GT Neo 6 ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ Realme GT Neo 6 ಸರಣಿಯ ಸ್ಮಾರ್ಟ್ಫೋನ್ ಪ್ರಸ್ತುತ ಒಂದಿಷ್ಟು ಫೀಚರ್ ಮತ್ತು ವಿಶೇಷಣಗಳನ್ನು ಬಿಡುಗಡೆಗೆ ಮುಂಚೆ ಅನಾವರಣಗೊಳಿಸಿದೆ. ಈ ಮೂಲಕ 2022 ರಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್ಫೋನ್ ಈಗ ಪೂರ್ತಿ 2 ವರ್ಷಗಳ ನಂತರ ಮತ್ತೆ ಈ ಸರಣಿಯಲ್ಲಿ ಕಂಪನಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸುತ್ತಿದೆ. ಮೊದಲಿಗೆ ಈ ಸ್ಮಾರ್ಟ್ಫೋನ್ Snapdragon 7+ Gen 3 ಚಿಪ್‌ನೊಂದಿಗೆ ಬರುವ ಭಾರತದ ಮೊದಲ ಸ್ಮಾರ್ಟ್ಫೋನ್ ಎಂದು ಕಂಪನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದೆ.

Also Read: 2 ಕೋಟಿಗೂ ಅಧಿಕ ಭಾರತೀಯರ WhatsApp Blocked ಆಗಲು ಇದೇ ಕಾರಣವಂತೆ! ನೀವು ಈ ತಪ್ಪನ್ನು ಮಾಡ್ತಿದ್ದೀರಾ?

Realme GT Neo 6 ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಬರುವುದಾಗಿ ನಿರೀಕ್ಷಿಸಬಹುದು. ಇದರೊಂದಿಗೆ ಸ್ಮಾರ್ಟ್ಫೋನ್ ಈಗಾಗಲೇ ಒಂದಿಷ್ಟು ಟೆಸ್ಟ್ ಅನ್ನು ಪೂರ್ಣಗೊಳಿಸಿದ್ದು ಸುಮಾರು 1.5M ಮಿಲಿಯನ್ ಪಾಯಿಂಟ್ ಅನ್ನು AnTuTu ಮೂಲಕ ಗಳಿಸಿ ಇದೊಂದು ಉತ್ತಮ ಖರೀದಿಯ ಸ್ಮಾರ್ಟ್ಫೋನ್ ಆಗಲು ಉತ್ತಮ ಕಾರಣವೆಂದು ತಮ್ಮ ಗ್ರಾಹಕರಿಗೆ ತೋರಿಸಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಜೊತೆಗೆ Realme UI ಜೊತೆಗೆ ಬರುವ ನಿರೀಕ್ಷೆಗಳಿವೆ.

Realme GT Neo 6 teased ahead of official launch in India 2024

Realme GT Neo 6 ಸ್ಮಾರ್ಟ್ಫೋನ್ 6.78 ಇಂಚಿನ 8T LTPO AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಹೊಂದಿದ್ದು ಸುಮಾರು 6000 ನೈಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಅಲ್ಲದೆ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಹೊಂದಿರುವ ನಿರೀಕ್ಷೆಗಳಿವೆ. ಅಲ್ಲದೆ 50MP ಪ್ರೈಮರಿ ಲೆನ್ಸ್ Sony IMX882 ಸೆನ್ಸರ್ನೊಂದಿಗೆ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದುವ ನಿರೀಕ್ಷೆಗಳಿವೆ. ಕೊನೆಯದಾಗಿ 5000mAh ಬ್ಯಾಟರಿಯೊಂದಿಗೆ 120W SuperVOOC ಫಾಸ್ಟ್ ಚಾರ್ಜರ್ ನೀಡುವ ನಿರೀಕ್ಷೆಗಳಿವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :