Realme GT Neo 5 ಮುಂದಿನ ತಿಂಗಳು 240W ಫಾಸ್ಟ್ ಚಾರ್ಜಿಂಗ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.!
Realme GT Neo 5 ಮುಂದಿನ ತಿಂಗಳು 240W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರಲು ಸಜ್ಜಾಗಿದೆ.
Realme GT Neo 4 ಅನ್ನು ಬಿಟ್ಟು ನೇರವಾಗಿ Realme GT Neo 5 ಅನ್ನು ಪ್ರಾರಂಭಿಸುತ್ತಿದೆ.
Realme ಈ ವರ್ಷ ತನ್ನ ಮುಂದಿನ ಪ್ರಮುಖ ಫೋನ್‌ಗಳೊಂದಿಗೆ 240W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಸೇರಿಸುವುದಾಗಿ ಭರವಸೆ ನೀಡಿದೆ.
Realme ಈ ವರ್ಷ ತನ್ನ ಮುಂದಿನ ಪ್ರಮುಖ ಫೋನ್‌ಗಳೊಂದಿಗೆ 240W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಸೇರಿಸುವುದಾಗಿ ಭರವಸೆ ನೀಡಿದೆ. ಮತ್ತು GT Neo 5 ಕಂಪನಿಯ ಮೊದಲ ಫೋನ್ ಇದಾಗಿದೆ. Realme GT Neo 3 ಮತ್ತು 150W ಫಾಸ್ಟ್ ಚಾರ್ಜಿಂಗ್ ಅನ್ನು ಸಂಸ್ಥೆಯು 2022 ರಲ್ಲಿ ಪರಿಚಯಿಸಿತು. ವರದಿಗಳ ಪ್ರಕಾರ ಫೋನ್ ಸ್ನಾಪ್‌ಡ್ರಾಗನ್ 8+ Gen 1 ನಿಂದ ಚಾಲಿತವಾಗಿದೆ. ಇನ್ನೂ ನಿಖರವಾದ ಬಿಡುಗಡೆ ದಿನಾಂಕ ಲಭ್ಯವಿಲ್ಲದಿದ್ದರೂ ಚೀನಾ ತಯಾರಕರ ಪ್ರಕಾರ Realme GT Neo 5 ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.
Realme GT Neo 5 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ
Realme GT Neo 5 ವೇಗವಾಗಿ 240W ಚಾರ್ಜಿಂಗ್ ತಂತ್ರಜ್ಞಾನವನ್ನು ಬಳಸುವ ಬ್ರ್ಯಾಂಡ್‌ನ ಮೊದಲ ಫೋನ್ ಆಗಿದೆ. ಫೋನ್ ಫೆಬ್ರವರಿಯಲ್ಲಿ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. 13 ಇನ್ ಬಿಲ್ಟ್ ಟೆಂಪರೇಚರ್ ಸೆನ್ಸೋರ್ಸ್, PS3 ಫೈರ್ ಪ್ರೊಟೆಕ್ಷನ್ ಮತ್ತು ಪೂರ್ಣ-ಲಿಂಕ್ ಸುರಕ್ಷತಾ ಮಾನಿಟರಿಂಗ್ ಸಿಸ್ಟಮ್ ಎಲ್ಲವನ್ನೂ Realme GT Neo 5 ಹೊಂದಿರುತ್ತದೆ. ಇದು 6580mm² ಟೆಂಪರೇಚರ್ ಪ್ರಸರಣ ಪ್ರದೇಶವನ್ನು ಸಹ ಒಳಗೊಂಡಿರುತ್ತದೆ.
ಮುಂಬರುವ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು 240W ಡ್ಯುಯಲ್ GaN ಮೈಕ್ರೋ ಚಾರ್ಜಿಂಗ್ ಅಡಾಪ್ಟರ್ ಅನ್ನು ಬಳಸುತ್ತದೆ ಎಂದು ಹೇಳಿದೆ. ಇದು ಕಡಿಮೆ-ವೋಲ್ಟೇಜ್ ಚಾರ್ಜಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ. 98.7% ಸೂಪರ್-ಹೈ ಪವರ್ ಕನ್ವರ್ಶನ್ ದರದಿಂದ ಬೆಂಬಲಿತವಾಗಿದೆ. ಹೆಚ್ಚುವರಿಯಾಗಿ ಕಂಪನಿಯು ಒಂದೇ USB-C ಪೋರ್ಟ್ ಮತ್ತು 21AWG ದಪ್ಪವಾದ ತಾಮ್ರದ ತಂತಿಗಳೊಂದಿಗೆ 12A ಚಾರ್ಜಿಂಗ್ ಕೇಬಲ್ ಅನ್ನು ಬಿಡುಗಡೆ ಮಾಡುತ್ತದೆ.
240W ಬ್ಯಾಟರಿ ಬಾಳಿಕೆ
ತಯಾರಕರ ಪ್ರಕಾರ 20V 12A ಇನ್‌ಪುಟ್ ಮತ್ತು 10V 24A ಔಟ್‌ಪುಟ್‌ನೊಂದಿಗೆ ಮೂರು-ಮಾರ್ಗದ 100W ಚಾರ್ಜ್ ಪಂಪ್ ಸಮಾನಾಂತರ ವಿನ್ಯಾಸವನ್ನು ಬಳಸುವುದರಿಂದ 98.5% ಪ್ರತಿಶತದಷ್ಟು ಚಾರ್ಜಿಂಗ್ ಪರಿವರ್ತನೆ ದಕ್ಷತೆಗೆ ಕಾರಣವಾಗುತ್ತದೆ. ಇದಲ್ಲದೆ 0-100% ಪ್ರತಿಶತ ಪೂರ್ಣ ಚಾರ್ಜಿಂಗ್ ಸೈಕಲ್‌ಗಳ ನಂತರವೂ ಬ್ಯಾಟರಿ ಬಾಳಿಕೆ ಇನ್ನೂ 80% ಕ್ಕಿಂತ ಹೆಚ್ಚಿದೆ ಎಂದು ಪರೀಕ್ಷೆಗಳ ಮೂಲಕ ತಿಳಿಸಲಾಗಿದೆ. ಅಷ್ಟೇ ಅಲ್ಲದೆ 240W ಬ್ಯಾಟರಿ ಬಾಳಿಕೆ ಮೇಲೆ ಯಾವುದೇ ಎಫೆಕ್ಟ್ ಬೀರುವುದಿಲ್ಲ ಎಂದು ಸಮರ್ಥಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile