Realme GT Neo 5 ಫೆಬ್ರವರಿ 9 ರಂದು ಬಿಡುಗಡೆಯಾಗಲಿದ್ದು ಕಂಪನಿಯು 240W ಫಾಸ್ಟ್ ಚಾರ್ಜಿಂಗ್ ಹೊಂದಿದೆ. Realme ತನ್ನ 240W ಚಾರ್ಜಿಂಗ್ ಟೆಕ್ನಾಲಜಿಯನ್ನು ಈ ತಿಂಗಳ ಆರಂಭದಲ್ಲಿ ಘೋಷಿಸಿತು ಮತ್ತು ಕಂಪನಿಯ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ ಇದನ್ನು ಸೇರಿಸಲಾಗುವುದು. ವದಂತಿಗಳ ಪ್ರಕಾರ ಕಂಪನಿಯು ಮುಂದಿನ Realme GT Neo 5 ನೊಂದಿಗೆ ಇದನ್ನು ಬಂಡಲ್ ಮಾಡುತ್ತದೆ ಎಂದು ವರದಿಯಾಗಿದೆ. ಫೆಬ್ರವರಿ 9 ರಂದು ಕಂಪನಿಯು ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಈ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸುತ್ತದೆ.
Realme ಈಗ GT Neo 5 ಗಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮತ್ತು ಸ್ಮಾರ್ಟ್‌ಫೋನ್ ವಾಸ್ತವವಾಗಿ 240W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಖಚಿತಪಡಿಸುತ್ತದೆ. ಇತ್ತೀಚಿನ ಪ್ರೈಸ್‌ಬಾಬಾ ವರದಿ ಪ್ರಕಾರ ಕಂಪನಿಯು MWC 2023 ರ ಸಮಯದಲ್ಲಿ ಡಿವೈಸ್ ಅನ್ನು ಪರಿಚಯಿಸಲು ಯೋಜಿಸಿದೆ. ಇದು ಬಾರ್ಸಿಲೋನಾದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯುತ್ತದೆ. Realme GT Neo 5 ಸ್ಮಾರ್ಟ್ಫೋನ್ ಬಿಡುಗಡೆಯೊಂದಿಗೆ ಏನನ್ನು ನಿರೀಕ್ಷಿಸಬಹುದು.
ಚೈನೀಸ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೈಬೊದಲ್ಲಿ Realme ಪೋಸ್ಟ್ ಮಾಡಿದ ಅಧಿಕೃತ ಟೀಸರ್ ಪ್ರಕಾರ Realme GT Neo 5 ಚೀನಾದಲ್ಲಿ ಫೆಬ್ರವರಿ 9 ರಂದು ಸ್ಥಳೀಯ ಸಮಯ ಮಧ್ಯಾಹ್ನ 2:00 ಗಂಟೆಗೆ ಬಿಡುಗಡೆಯಾಗಲಿದೆ. ಇದು ತನ್ನ ಹೊಚ್ಚಹೊಸ 240W ಚಾರ್ಜಿಂಗ್ ಪರಿಹಾರದೊಂದಿಗೆ ಬರುತ್ತಿದೆ ಎಂದು ಟೀಸರ್ ಬಹಿರಂಗಪಡಿಸಿದೆ. ಟೀಸರ್ ಚಿಕ್ಕದಾಗಿ ಕೊನೆಗೊಂಡಿದ್ದು ಮತ್ತು ಡಿವೈಸ್‌ನ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ. Realme GT Neo 5 ಸ್ಮಾರ್ಟ್ಫೋನ್ TENAA ಪಟ್ಟಿಯು 240W ಮತ್ತು 150W ಮಾದರಿಗಳ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ಮೊದಲು ಬಹಿರಂಗಪಡಿಸಿತು.
https://twitter.com/realmeglobal/status/1610894706237669377?ref_src=twsrc%5Etfw
TENAA ಜೊತೆಗೆ ಸ್ಮಾರ್ಟ್‌ಫೋನ್ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್ ಗೀಕ್‌ಬೆಂಚ್‌ನಿಂದ ಕೂಡಿದೆ. ಕೆಲವು ಹಾರ್ಡ್‌ವೇರ್ ವಿವರಗಳನ್ನು ಮತ್ತು ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳ ಫಲಿತಾಂಶಗಳನ್ನು ಹೊರಹಾಕಿತು. Snapdragon 8+ Gen1 ಮತ್ತು 16GB RAM ನಲ್ಲಿ ರನ್ ಆಗುತ್ತಿರುವಾಗ Realme GT Neo 5 ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1279 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 3902 ಅಂಕಗಳನ್ನು ಗಳಿಸಿದೆ. ಪರೀಕ್ಷೆಯ ಸಮಯದಲ್ಲಿ ಡಿವೈಸ್ Android-13 ಆಧಾರಿತ Realme UI 4.0 ಕಸ್ಟಮ್ ಸ್ಕಿನ್ ಮೂಲಕ ಕಾರ್ಯನಿರ್ವಹಿಸುತ್ತಿದೆ. Qualcomm Snapdragon 8 Plus Gen 1 6 ಜಿಬಿ ಪ್ರೊಸೆಸರ್ ಹೊಂದಿದೆ. 6.7 ಇಂಚಿನ ಡಿಸ್ಪ್ಲೇ ಹಾಗೂ 50 MP + 8 MP + 2 MP ಬ್ಯಾಂಕ್ ಕ್ಯಾಮೆರಾ ಮತ್ತು 16 MP ಸೆಲ್ಫಿ ಕ್ಯಾಮೆರವನ್ನು ಹೊಂದಿದ್ದು 5000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ ರೂ. 38,990 ರಿಂದ ಪ್ರಾರಂಭವಾಗುವ ನಿರೀಕ್ಷೆ.