Realme GT 7 Pro ಸ್ಮಾರ್ಟ್ಫೋನ್ Snapdragon 8 Elite ಚಿಪ್‌ನೊಂದಿಗೆ ಬಿಡುಗಡೆ! ಬೆಲೆ ಮತ್ತು ಮಾರಾಟ ಯಾವಾಗ?
Realme GT 7 Pro ಸ್ಮಾರ್ಟ್ಫೋನ್ 5800mAh ಬ್ಯಾಟರಿಯೊಂದಿಗೆ ಅನಾವರಣಗೊಂಡಿದೆ.
Realme GT 7 Pro ಸ್ಮಾರ್ಟ್ಫೋನ್ Snapdragon 8 Elite ಚಿಪ್‌ನೊಂದಿಗೆ 59,999 ರೂಗಳಿಗೆ ಬಿಡುಗಡೆ.
12GB RAM ಮತ್ತು 256GB ಆರಂಭಿಕ ರೂಪಾಂತರವನ್ನು ಕೇವಲ 56,999 ರೂಗಳಿಗೆ ಬಿಡುಗಡೆಗೊಳಿಸಿದೆ.
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ರಿಯಲ್ಮಿ (Realme) ಇಂದು ಭಾರತದಲ್ಲಿ Realme GT 7 Pro ಸ್ಮಾರ್ಟ್ಫೋನ್ 5800mAh ಬ್ಯಾಟರಿಯೊಂದಿಗೆ ಪವರ್ಫುಲ್ Snapdragon 8 Elite ಚಿಪ್‌ನೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ಖರೀದಿಸಿದರೆ ನೀವು ಫಾಸ್ಟ್ ಮತ್ತು ಕಾರ್ಯಕ್ಷಮತೆಯ ಬಗ್ಗೆ ಅಷ್ಟಾಗಿ ಯೋಚಿಸಬೇಕಾಗಿಲ್ಲ. ಅಲ್ಲದೆ ಸ್ಮಾರ್ಟ್ಫೋನ್ 12GB RAM ಮತ್ತು 256GB ಆರಂಭಿಕ ರೂಪಾಂತರವನ್ನು ಕೇವಲ 56,999 ರೂಗಳಿಗೆ ಬಿಡುಗಡೆಗೊಳಿಸಿದೆ. ಇದನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದರ ಕ್ಯಾಮೆರಾ, ಡಿಸ್ಪ್ಲೇಯೊಂದಿಗೆ ಇದರ ಬೆಲೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Realme GT 7 Pro ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
ಫೋನ್ 6.78 ಇಂಚಿನ 8T LPTO Samsung Eco2 1.5K OLED ಪಂಚ್ ಹೋಲ್ ಸ್ಕ್ರೀನ್ ಅನ್ನು ಹೊಂದಿದ್ದು ಡಿಸ್ಪ್ಲೇಯ ರಿಫ್ರೆಶ್ ರೇಟ್ 120Hz ಮತ್ತು ಗರಿಷ್ಠ ಹೊಳಪು 6500 ನಿಟ್ಸ್ ಹೊಂದಿದೆ. Realme GT 7 Pro ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನವನ್ನು ಸಹ ಒದಗಿಸಲಾಗಿದೆ.
Also Read: Nothing Phone (3) ಸ್ಮಾರ್ಟ್ಫೋನ್ Snapdragon 7s Gen 3 ಪ್ರೊಸೆಸರ್‌ನೊಂದಿಗೆ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದೆ!
Realme GT 7 Pro ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ನೀಡಿದ್ದು ಮೊದಲನೇಯದು 50MP IMX906 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೆನ್ಸರ್ ಅನ್ನು ಸಹ ಹೊಂದಿದೆ. ಮತ್ತೊಂದು 50MP IMX882 ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಬರುತ್ತದೆ. ಕೊನೆಯದಾಗಿ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಅಲ್ಲದೆ ಈ Realme GT 7 Pro ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಒದಗಿಸಿದೆ.
ಪವರ್ಫುಲ್ Snapdragon 8 Elite ಚಿಪ್‌ನೊಂದಿಗೆ 12GB RAM ಜೊತೆಗೆ 256GB ಸ್ಟೋರೇಜ್ ಹೊಂದಿದೆ. ಅಲ್ಲದೆ ಭಾರತದ ರೂಪಾಂತರದಲ್ಲಿ ನಿಮಗೆ 5800mAh (ಚೀನಾದಲ್ಲಿ 6500mAh) ಬ್ಯಾಟರಿಯೊಂದಿಗೆ 120W ಫಾಸ್ಟ್ ಚಾರ್ಜರ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ ಲೇಟೆಸ್ಟ್ ಆಂಡ್ರಾಯ್ಡ್ 15 ಜೊತೆಗೆ OriginOS ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Realme GT 7 Pro Price in India
ಇಂದು ಬಿಡುಗಡೆಯಾದ ಈ ಲೇಟೆಸ್ಟ್ Realme GT 7 Pro ಸ್ಮಾರ್ಟ್ಫೋನ್ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಅನ್ನು ₹59,999 ರೂಪಾಯಿಗಳಿಗೆ ಪರಿಚಯಿಸಿದ್ದು ಇದರ ಕ್ರಮವಾಗಿ ಇದರ 16GB RAM ಮತ್ತು 512GB ಸ್ಟೋರೇಜ್ ಅನ್ನು ₹62,999 ರೂಪಾಯಿಗಳಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಸ್ಮಾರ್ಟ್ಫೋನ್ ಬಿಡುಗಡೆಯ ಆಫರ್ ಅಡಿಯಲ್ಲಿ ಬರೋಬ್ಬರಿ 3000 ರೂಗಳ ತ್ವರಿತ ಬ್ಯಾಂಕ್ ಡಿಸ್ಕೌಂಟ್ ನೀಡುವುದರೊಂದಿಗೆ ಆರಂಭಿಕ ಕೇವಲ 56,999 ರೂಗಳಿಗೆ ಖರೀದಿಸುವ ಅವಕಾಶವನ್ನು ಪಡೆಯುವಿರಿ.
ಈ ಸ್ಮಾರ್ಟ್ಫೋನ್ ಅನ್ನು ನೀವು ಒಟ್ಟು ಎರಡು Mars Orange ಮತ್ತು Galaxy Grey ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಪಡೆಯಬಹುದು. ಸ್ಮಾರ್ಟ್ಫೋನ್ ಅನ್ನು ಕಂಪನಿ ಇದೇ 29ನೇ ನವೆಂಬರ್ 2024 ರಿಂದ ಮೊದಲ ಮಾರಾಟಕ್ಕೆ ತರಲಿದ್ದು ಸ್ಮಾರ್ಟ್ಫೋನ್ ಎಷ್ಟು ಪವರ್ಫುಲ್ ಆಗಿದ್ಯೋ ಅಷ್ಟೇ ಹಗುರವಾಗಿದೆ ಅಂದ್ರೆ ಚಪ್ಪಾಳೆ ಹೊಡೆಯಲೇಬೇಕು. ಈ ಸ್ಮಾರ್ಟ್ಫೋನ್ ಕೇವಲ 22.28 ಗ್ರಾಂ ತೂಕವನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile