ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ರಿಯಲ್ಮಿ (Realme) ತನ್ನ ಲೇಟೆಸ್ಟ್ Realme GT 7 Pro ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಇದೇ 26ನೇ ನವೆಂಬರ್ 2024 ರಂದು ಮಧ್ಯಾಹ್ನ 12 ಗಂಟೆಗೆ ಪ್ರತ್ಯೇಕ ಅಮೆಜಾನ್ ಮೂಲಕ ಬಿಡುಗಡೆಗೂ ಮಾಡಲು ಸಿದ್ಧವಾಗಿದೆ. ಅಲ್ಲದೆ ಈ Realme GT 7 Pro ಸ್ಮಾರ್ಟ್ಫೋನ್ ಇಂದು ಅಂದ್ರೆ 18ನೇ ನವೆಂಬರ್ 2024 ರಿಂದ ಕೇವಲ ₹999 ರೂಗಳಿಗೆ ಪ್ರೀ-ಬುಕಿಂಗ್ ಶುರು ಮಾಡಿದೆ. ನೀವು ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಹೇಗೆ ಬುಕ್ ಮಾಡಬಹುದು? ಮತ್ತು ಇದರ ನಿರೀಕ್ಷಿತ ಬೆಲೆ ಮತ್ತು ಟಾಪ್ ಫೀಚರ್ಗಳೇನು ಎನ್ನುವುದನ್ನು ಎಲ್ಲವನ್ನು ತಿಳಿಯೋಣ.
Also Read: Jio Fiber vs Jio AirFiber ಈ ಫೈಬರ್ ಸೇವೆಯ ಬೆಲೆ ಮತ್ತು ಫೀಚರ್‌ಗಳ ವ್ಯತ್ಯಾಸಗಳೇನು ತಿಳಿಯಿರಿ!
ಈ ಮುಂಬರಲಿರುವ ಸ್ಮಾರ್ಟ್ಫೋನ್ ಅನ್ನು ನೀವು ಬೀಡುಗಡೆಗೂ ಮುಂಚಿತವಾಗಿ ಕೇವಲ ₹999 ರೂಗಳಿಗೆ ಪ್ರೀ-ಬುಕಿಂಗ್ ಮಾಡಬೇಕಾದರೆ ನೀವು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಿಂದ ಬುಕ್ ಮಾಡಬಹುದು. ಈ Realme GT 7 Pro ಸ್ಮಾರ್ಟ್ಫೋನ್ ಇಂದು ಅಂದ್ರೆ 18ನೇ ನವೆಂಬರ್ 2024 ರಿಂದ ಕೇವಲ ₹999 ರೂಗಳಿಗೆ ಪ್ರೀ-ಬುಕಿಂಗ್ ಲಭ್ಯವಿರುತ್ತದೆ. ಇದಕ್ಕಾಗಿ ನೀವು ನೇರವಾಗಿ Realme GT 7 Pro Pre-Booking ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ಈ Realme GT 7 Pro ಸ್ಮಾರ್ಟ್ಫೋನ್ ಅನ್ನು ನೀವು ಪ್ರೀ-ಬುಕಿಂಗ್ ಮಾಡಿ ಖರೀದಿಸಿದರೆ ನಿಮಗೆ ಒಂದು ವರ್ಷದವೆರೆಗಿನ ಫೋನ್ ಮೇಲಿನ ಯಾವುದೇ ಸ್ಕಿನ್ ಸಂಭದಿತ ಹಾನಿ ವಿಮೆಯನ್ನು ಹೊಂದುವಿರಿ. ಅಲ್ಲದೆ ಮತ್ತೊಂದು ವಿಶೇಷವೆಂದರೆ ಈ ರೀತಿ ಮುಂಗಡ ಬುಕಿಂಗ್ ಮಾಡುವುದರಿಂದ 1 ವರ್ಷದ ಅಧಿಕ ವಿಸ್ತೃತ ವಾರಂಟಿಯನ್ನು ಸಹ ಪಡೆಯುತ್ತಾರೆ. Realme GT7 Pro ಅನ್ನು ಬುಕ್ ಮಾಡುವ ಗ್ರಾಹಕರು 12 ತಿಂಗಳ ನೋ ಕಾಸ್ಟ್ EMI ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೇ ಆಫ್‌ಲೈನ್ ಚಿಲ್ಲರೆ ಬುಕಿಂಗ್‌ನಲ್ಲಿ ಬರೋಬ್ಬರಿ 24 ತಿಂಗಳ ಸುಲಭ EMI ಸೌಲಭ್ಯದಲ್ಲಿ ಖರೀದಿಸಲು ಅವಕಾಶ ನೀಡುತ್ತದೆ.
Realme GT7 Pro ಸ್ಮಾರ್ಟ್ಫೋನ್ ಫೋನ್ 6.67 ಇಂಚಿನ 8T LTPO Samsung Eco2 1.5K OLED ಪಂಚ್‌ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದ್ದು 6000 nits HDR ಬ್ರೈಟ್‌ನೆಸ್ ಮತ್ತು 450PPI ಅನ್ನು ಬೆಂಬಲಿಸುತ್ತದೆ. Realme GT7 Pro ವಾಟರ್ ಮತ್ತು ಡಸ್ಟ್ ವಿರುದ್ಧ ರಕ್ಷಿಸಲು IP69+1P68 ಪ್ರಮಾಣೀಕರಿಸಲ್ಪಟ್ಟಿದೆ. ಅಲ್ಲದೆ ಈ ಫೋನ್ Snapdragon 8 Elite ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಅನ್ನು ನಿರೀಕ್ಷಿಸಲಾಗಿದೆ.
Realme GT7 Pro ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಬೆಂಬಲಿಸುತ್ತದೆ. ಇದು 50MP IMX906 OIS ಪ್ರೈಮರಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು ಮತ್ತೊಂದು 50MP IMX882 ಪೆರಿಸ್ಕೋಪ್ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಬೆಂಬಲಿಸುತ್ತದೆ. ಪ್ರಸ್ತುತ ಈ ಫೋನ್ 6500mAh ಬ್ಯಾಟರಿಯಿಂದ ಚಾಲಿತವಾಗಲಿದ್ದು ಇದು 120W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದಾಗಿ ನಿರೀಕ್ಷಿಸಲಾಗಿದೆ.