ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಮುಂಬರಲಿರುವ Realme GT 7 Pro 5G ಸ್ಮಾರ್ಟ್ಫೋನ್ ಮುಂದಿನ ತಿಂಗಳು Snapdragon 8 Elite ಚಿಪ್‌ನೊಂದಿಗೆ ಬಿಡುಗಡೆ ಕಂಫಾರ್ಮ್ ಮಾಡಿದೆ. ಅಂದರೆ ಈ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಲಿರುವ ಮೊದಲ ಭಾರತೀಯ ಮಾರುಕಟ್ಟೆಯ ಸ್ಮಾರ್ಟ್ಫೋನ್ ಈ ಆಗಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಹ್ಯಾಂಡ್‌ಸೆಟ್‌ನ ಲಭ್ಯತೆಯನ್ನು ದೃಢಪಡಿಸಿದೆ. ಈ Realme GT 7 Pro ಸ್ಮಾರ್ಟ್ಫೋನ್ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ಆಯ್ಕೆ ಮಾಡಿದೆ ಆದರೂ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.
Also Read: ದೀಪಾವಳಿಗೊಂದು ಹೊಸ Home Theatre ಬೇಕಿದ್ದರೆ ಅಮೆಜಾನ್‌ನ ಈ ಕೈಗೆಟಕುವ ಬೆಸ್ಟ್ ಡೀಲ್‌ಗಳನೊಮ್ಮೆ ಪರಿಶೀಲಿಸಿ!
ಈ ಮುಂಬರಲಿರುವ Realme GT 7 Pro ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಆದಾಗ್ಯೂ ಕಂಪನಿಯು ದಿನಾಂಕವನ್ನು ಖಚಿತಪಡಿಸಿಲ್ಲವಾದರೂ ಈ ಮುಂಬರುವ Realme GT 7 Pro ಅಮೆಜಾನ್ ಇಂಡಿಯಾ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ Realme GT 7 Pro ಸ್ಮಾರ್ಟ್ಫೋನ್ ಫೀಚರ್ ಆಧಾರ ಮೇರೆಗೆ ಸುಮಾರು 40,000 ರಿಂದ 50,000 ರೂಗಳಿಂದ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದು ದೇಶಾದ್ಯಂತ ಗ್ರಾಹಕರಿಗೆ ಸುಲಭವಾಗಿ ಪ್ರವೇಶಿಸಬಹುದಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್ಫೋನ್ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ಆಯ್ಕೆ ಮಾಡಿದೆ ಆದರೂ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.
ಈ ಸ್ಮಾರ್ಟ್ಫೋನ್ ಬರೋಬ್ಬರಿ 6.7 ಇಂಚಿನ AMOLED ಡಿಸ್ಪ್ಲೇಯನ್ನು 2800×1260 ಪಿಕ್ಸೆಲ್ ರೆಸಲ್ಯೂಷನ್ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದುವ ನಿರೀಕ್ಷೆಗಳಿವೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಮೊದಲಿಗೆ 50MP ಪ್ರೈಮರಿ ಕ್ಯಾಮೆರಾ Sony IMX 906 ಸೆನ್ಸರ್ ಮತ್ತೊಂದು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ Sony IMX 882 ಲೆನ್ಸ್ ಅನ್ನು ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡುತ್ತದೆ.
ಈ Realme GT 7 Pro ಸ್ಮಾರ್ಟ್‌ಫೋನ್ ಮರುವಿನ್ಯಾಸಗೊಳಿಸಲಾದ ಕ್ಯಾಮೆರಾ ಲೈಟ್ ಹೊಂದಿದ್ದು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. Geekbench ಪಟ್ಟಿಯ ಪ್ರಕಾರ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ನಲ್ಲಿ ರನ್ ಆಗುತ್ತದೆ ಮತ್ತು 16GB RAM ನೊಂದಿಗೆ ಬರುತ್ತದೆ. ರಿಯಲ್‌ಮಿ ಫೋನ್‌ನಲ್ಲಿ ಇದುವರೆಗೆ ನೋಡಿದ ಅತಿದೊಡ್ಡ 6500mAh ಬ್ಯಾಟರಿಯೊಂದಿಗೆ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಂತೆ ಹ್ಯಾಂಡ್‌ಸೆಟ್ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡುವ ನಿರೀಕ್ಷೆಗಳಿವೆ. ಮತ್ತಷ್ಟು ಸೇರಿಸುವ ಮೂಲಕ Realme GT 7 Pro ಅನ್ನು ಸ್ಯಾಮ್‌ಸಂಗ್ ಕ್ವಾಡ್ ಮೈಕ್ರೋ ಕರ್ವ್ಡ್ ಸ್ಕ್ರೀನ್ ಜೊತೆಗೆ ಅಳವಡಿಸಬಹುದಾಗಿದೆ.