12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Realme GT 6T ಖರೀದಿಸುವ ಮುಂಚೆ ಟಾಪ್ 5 ಫೀಚರ್ ಪರಿಶೀಲಿಸಿಕೊಳ್ಳಿ!
Realme GT 6T ಫೋನ್ 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.
Realme GT 6T ಹಲವಾರು ರೂಪಾಂತರಗಳಲ್ಲಿ ಲಭ್ಯವಿದೆ ಪ್ರತಿಯೊಂದೂ ಆಕರ್ಷಕ ಬೆಲೆ ಮತ್ತು ಪ್ರಚಾರಗಳನ್ನು ನೀಡುತ್ತದೆ.
ಸ್ಮಾರ್ಟ್ಫೋನ್ ನಿಮಗೆ 8GB RAM ಮತ್ತು 128GB ಸ್ಟೋರೇಜ್ ಸುಮಾರು 30,999 ರೂಗಳಿಂದ ಶುರುವಾಗಿದೆ.
ಭಾರತದಲ್ಲಿ ಜನಪ್ರಿಯ ಮತ್ತು ಬೆಸ್ಟ್ ಫೀಚರ್ ನೀಡುವ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (Realme) ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸುದ್ದಿಗಳಿಗೆ ಕಾರಣವಾಗಿದೆ. ಕಂಪನಿಯ ಹೊಚ್ಚ ಹೊಸ Realme GT 6T ಸ್ಮಾರ್ಟ್ಫೋನ್ ಭಾರತದಲ್ಲಿ ಅದ್ದೂರಿಯಾದ ಬೆಲೆ ಮತ್ತು ಲೇಟೆಸ್ಟ್ ಫೀಚರ್ಗಳೊಂದಿಗೆ 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದಂತಹ ಹಲವಾರು ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.
ಭಾರಿ ಕೊಡುಗೆಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವವರಿಗೆ Realme GT 6T ಅನ್ನು ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ. ಈ Realme GT 6T ಸ್ಮಾರ್ಟ್ಫೋನ್ ಖರೀದಿಸುವ ಮುಂಚೆ ಒಮ್ಮೆ ತಪ್ಪದೆ ಇದರ ಟಾಪ್ 5 ಫೀಚರ್ಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಖರೀದಿಯಲ್ಲಿ ಹೆಚ್ಚು ಸಹಕಾರಿಯಾಗಲಿದೆ.
Realme GT 6T Display ಡೀಟೇಲ್ಸ್ ಇಲ್ಲಿದೆ
ಈ ಲೇಟೆಸ್ಟ್ Realme GT 6T ಫೋನ್ 6.78 ಇಂಚಿನ AMOLED ಡಿಸ್ಪ್ಲೇ ಜೊತೆಗೆ 2780×1264 (1.5K) ಜೊತೆಗೆ 120Hz ನಿಂದ ಅಡಾಪ್ಟಿವ್ ರಿಫ್ರೆಶ್ ದರಗಳು, 94.20% ಸ್ಕ್ರೀನ್-ಟು-ಬಾಡಿ ಅನುಪಾತ, ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನು 2500Hz ಗೆ ಹೆಚ್ಚಿಸಲಾಗಿದೆ. ಇದರ ಡಿಸ್ಪ್ಲೇ ನಿಮಗೆ 6000 ನಿಟ್‌ಗಳ ಗರಿಷ್ಠ ಹೊಳಪನ್ನು ಅಂದ್ರೆ ದಿನದ ಹೊರಗಡೆ ಬಿಸಿಲಿನಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಸ್ಮಾರ್ಟ್ಫೋನ್ ಬಳಕೆಯನ್ನು ಬೆಂಬಲಿಸುತ್ತದೆ. ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ DCI-P3 ಬಣ್ಣದ ಹರವು 100% ಪ್ರತಿಶತವನ್ನು ಒಳಗೊಂಡಿದೆ.
Also Read: ಮನೆಯಲ್ಲಿ ಕಾಲಿಟ್ರೆ Network ಮಾಯವಾಗುತ್ತಿದ್ಯಾ? ಈ ಸೆಲ್ಯೂಲರ್ ಬೂಸ್ಟರ್ ಡಿವೈಸ್‌ನಿಂದ ಸಂಪೂರ್ಣ ಮುಕ್ತಿ ಪಡೆಯಿರಿ
Realme GT 6T Camera ಮಾಹಿತಿ
ಈ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ f/1.88 ಅಪರ್ಚರ್ ಜೊತೆಗೆ Sony LYT-600 ಸೆನ್ಸರ್ ಬಳಸಿಕೊಂಡು OIS ಜೊತೆಗೆ 50MP ಮುಖ್ಯ ಕ್ಯಾಮರಾವನ್ನು ಒಳಗೊಂಡಿದೆ. ಇದು 60FPS ನಲ್ಲಿ 4K ವರೆಗೆ ರೆಕಾರ್ಡ್ ಮಾಡಬಹುದು. ಮತ್ತೊಂದು 8MP ಸೆನ್ಸರ್ ಸಹ Sony IMX355 ವೈಡ್-ಆಂಗಲ್ ಲೆನ್ಸ್ ಜೊತೆಗೆ f/2.2 ಅಪರ್ಚರ್ ಹೊಂದಿದ್ದು 30FPS ನಲ್ಲಿ 2K ಸಾಮರ್ಥ್ಯವಿದೆ. ಫೋನ್ ಮುಂಭಾಗದ ಕ್ಯಾಮೆರಾವು 32MP ಸೋನಿ IMX615 ಸೆನ್ಸರ್ ಅನ್ನು 90 ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು f/2.4 ಅಪರ್ಚರ್ ಹೊಂದಿದೆ. ಈ ಮೂಲಕ ನಿಮಗೆ ಅತ್ಯುತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ಹೆಚ್ಚು ಸಹಕಾರಿಯಾಗಲಿದೆ.
ರಿಯಲ್‌ಮಿ GT 6T Hardware ಹೇಗಿದೆ?
ಈ ಸ್ಮಾರ್ಟ್ಫೋನ್ TSMCಆಧಾರಿತ 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ Qualcomm Snapdragon 7+ Gen 3 ಪ್ರೊಸೆಸರ್ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ CPU ಸಂರಚನೆಯೊಂದಿಗೆ ಫೋನ್ ಬಹು ಮೆಮೊರಿ ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಸ್ಮಾರ್ಟ್ಫೋನ್ 8GB + 128GB, 8GB + 256GB, 12GB + 256GB, ಮತ್ತು 12GB + 512GB ಎಂಬ 4 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದು 4 ವರ್ಷಗಳ ಸಾಫ್ಟ್‌ವೇರ್ ಅಪ್ಡೇಟ್ಗಳು ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ಗಳೊಂದಿಗೆ ಆಂಡ್ರಾಯ್ಡ್ 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ರಿಯಲ್‌ಮಿ GT 6T Battery ಮತ್ತು Sensor
Realme GT 6T ಸ್ಮಾರ್ಟ್ಫೋನ್ ನಿಮಗೆ ಒಳ್ಳೆಯ ವಿಷಯವೆಂದರೆ ನೀವು 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಪಡೆಯುತ್ತೀರಿ. ಸಂಪರ್ಕಕ್ಕಾಗಿ ಫೋನ್ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ Wi-Fi 6, ಬ್ಲೂಟೂತ್ ಮತ್ತು USB C ಪೋರ್ಟ್ ಅನ್ನು ನೀಡುತ್ತದೆ. ವಿವಿಧ 5G ಬ್ಯಾಂಡ್‌ಗಳು, ಡ್ಯುಯಲ್-ಮೋಡ್ SA/NAS, ಬ್ಲೂಟೂತ್ 5.4 ಅನ್ನು ಬೆಂಬಲಿಸುತ್ತದೆ.
Realme GT 6T Price ಮತ್ತು Offers
ಈ Realme GT 6T ಸ್ಮಾರ್ಟ್ಫೋನ್ ನಿಮಗೆ ಎರಡು ಫ್ಲೂಯಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್‌ನಲ್ಲಿ ಬಣ್ಣಗಳಲ್ಲಿ ಖರೀದಿಸಲು ಲಭ್ಯವಿದೆ. ಅಲ್ಲದೆ ICICI ಬೆಸ್ಟ್ ಬ್ಯಾಂಕ್ ಆಫರ್‌ನೊಂದಿಗೆ ರೂ. 4,000 ರಿಯಾಯಿತಿಯೊಂದಿಗೆ ಮತ್ತೆ 2,000 ರೂಗಳ ಎಕ್ಸ್‌ಚೇಂಜ್ ಆಫರ್ ಮತ್ತು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI, ಆಫರ್ ಬೆಲೆಯನ್ನು ತರುತ್ತದೆ.
8GB RAM ಮತ್ತು 128GB ROM ಬೆಲೆ ₹30,999 ರೂಗಳಾಗಿದ್ದು 8GB RAM ಮತ್ತು 256GB ROM ಬೆಲೆ ₹32,999 ರೂಗಳಾಗಿದ್ದು 12GB RAM ಮತ್ತು 256GB ROM ಬೆಲೆ ₹35,999 ರುಗಳಾದರೆ ಕೊನೆಯದಾಗಿ 12GB RAM ಮತ್ತು 512GB ROM ಬೆಲೆ ₹39,999 ರೂಗಳಾಗಿವೆ. Realme ನ ಅಧಿಕೃತ ವೆಬ್‌ಸೈಟ್ Amazon.in ಮತ್ತು ಮೇನ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ 29ನೇ ಮೇ 2024 ರಂದು ಮಧ್ಯಾಹ್ನ 12ಕ್ಕೆ ಮೊದಲ ಮಾರಾಟ ಶುರುವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile