32MP ಸೆಲ್ಫಿ ಕ್ಯಾಮೆರಾದ Realme GT 6 ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್‌ಗಳೇನು ತಿಳಿಯಿರಿ!
ಭಾರತದಲ್ಲಿ ಇಂದು ರಿಯಲ್‌ಮಿ (Realme) ತನ್ನ ಲೇಟೆಸ್ಟ್ 32MP ಸೆಲ್ಫಿ ಕ್ಯಾಮೆರಾದ Realme GT 6 ಬಿಡುಗಡೆಗೊಳಿಸಿದೆ.
Realme GT 6 ಸ್ಮಾರ್ಟ್ಫೋನ್ ಭಾರತದಲ್ಲಿ ಬರೋಬ್ಬರಿ 40,000 ರೂಗಳಿಂದ ಅನಾವರಣಗೊಳಿಸಿದೆ.
ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ Realme GT 6 ಆಫರ್ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನ್ನು ಪರಿಶೀಲಿಸಿಕೊಳ್ಳಿ.
ಭಾರತದಲ್ಲಿ ಇಂದು ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (Realme) ತನ್ನ ಲೇಟೆಸ್ಟ್ GT ಸರಣಿಯಲ್ಲಿ ಮತ್ತೊಂದು ಹೊಸ Realme GT 6 ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ Realme GT 6 ಸ್ಮಾರ್ಟ್ಫೋನ್ ಭಾರತದಲ್ಲಿ ಬರೋಬ್ಬರಿ 40,000 ರೂಗಳಿಂದ ಅನಾವರಣಗೊಳಿಸಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ವಿಶೇಷೆಗಳೆಂದರೆ AI ಫೀಚರ್ಗಳೊಂದಿಗೆ AMOLED ಡಿಸ್ಪ್ಲೇ ಉತ್ತಮವಾದ Camera ಹಾಗು ಬೆಸ್ಟ್ Snapdragon ಪ್ರೊಸೆಸರ್‌ನೊಂದಿಗೆ LPDDR5X RAM ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಹೆಚ್ಚು ಆಕರ್ಷಕವಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಅಥವಾ ನಿಮಗೆ ತಿಳಿದವರು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ Realme GT 6 ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನ್ನು ಪರಿಶೀಲಿಸಿಕೊಳ್ಳಿ.
Also Read: WhatsApp Profile Photo: ಅಪರಿಚಿತರಿಂದ ನಿಮ್ಮ ವಾಟ್ಸಾಪ್ ಪ್ರೊಫೈಲ್ ಮುಚ್ಚಿಡೋದು ಹೇಗೆ ತಿಳಿಯಿರಿ!
ಭಾರತದಲ್ಲಿ Realme GT 6 ಬೆಲೆ ಮತ್ತು ಆಫರ್ಗಳು ಹೇಗಿದೆ?
ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು ಈ ಆಫರ್ ಎಲ್ಲದಕ್ಕೂ ಅನ್ವಯಿಸುತ್ತದೆ. ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 40,999 ರೂಗಳಾಗಿದೆ ಆದರೆ ನೀವು ಇದನ್ನು ICICI, HDFC ಮತ್ತು SBI ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಸ್ಮಾರ್ಟ್ಫೋನ್ ಮೇಲೆ ಮೇಲೆ 4000 ರೂಗಳ ಡಿಸ್ಕೌಂಟ್ ಪಡೆಯಬಹುದು.
ಅಲ್ಲದೆ ನಿಮ್ಮ ಯಾವುದೇ ಸ್ಮಾರ್ಟ್ಫೋನ್ ವಿನಿಮಯ ಮಾಡಿಕೊಂಡರೆ ಗರಿಷ್ಠ 1000 ರೂಗಳ ಆಫರ್ ಸಹ ನೀಡುತ್ತಿದ್ದು ಸುಮಾರು 5000 ರೂಗಳ ಡಿಸ್ಕೌಂಟ್ ನಂತರ ಈ ಸ್ಮಾರ್ಟ್ಫೋನ್ ಅನ್ನು ಕೇವಲ 35,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ಕ್ರಮವಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 42,999 ಮತ್ತು 16GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ 44,999 ರೂಗಳಾಗಿದೆ.
ಭಾರತದಲ್ಲಿ ರಿಯಲ್‌ಮಿ GT 6 ಡಿಸ್ಪ್ಲೇ ಮಾಹಿತಿ!
ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ ಇದು 6.78 ಇಂಚಿನ ಪೂರ್ಣ HD+ (1,264×2,780 ಪಿಕ್ಸೆಲ್ ರೆಸಲ್ಯೂಷನ್) ಜೊತೆಗೆ 8T LTPO AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ HD ಕಂಟೆಂಟ್ ಸ್ಟ್ರೀಮಿಂಗ್ ಮಾಡಲು HDR 10+ ಬೆಂಬಲ ಮತ್ತು ಉತ್ತಮ ಆಡಿಯೋ ಅನುಭವಕ್ಕಾಗಿ ಡಾಲ್ಬಿ ವಿಷನ್ ಬೆಂಬಲವನ್ನು ಹೊಂದಿದೆ. ಅಲ್ಲದೆ ದಿನದಲ್ಲಿ ಹೊರಗಡೆ ಯಾವುದೇ ತೊಂದರೆಗಳಿಲ್ಲದೆ ಬಳಸಲು 6,000nits ಬ್ರೈಟ್‌ನೆಸ್ ಹೊಂದಿದ್ದು ಬಳಕೆಯಲ್ಲಿ 360Hz ಟಚ್ ಸ್ಯಾಂಪ್ಲಿಂಗ್ ದರವನ್ನು ಸಹ ಸಪೋರ್ಟ್ ಮಾಡುತ್ತದೆ.
ಭಾರತದಲ್ಲಿ Realme GT 6 ಕ್ಯಾಮೆರಾ ಹೇಗಿದೆ?
ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದ್ದು ಇದರ ಪ್ರೈಮರಿ 50MP ಮೆಗಾಪಿಕ್ಸೆಲ್ Sony LYT-808 ಸೆನ್ಸರ್ ಜೊತೆಗೆ ಬರುತ್ತದೆ. ಎರಡನೇಯಾದಾಗಿ 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ Sony IMX355 ಸೆನ್ಸರ್ ಸಪೋರ್ಟ್ ಹೊಂದಿದೆ. ಇದರೊಂದಿಗೆ ಕೊನೆಯದಾಗಿ 50MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. ಇದರ ಕ್ರಮವಾಗಿ ಡಿಸ್ಪ್ಲೇಯಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಭಾರತದಲ್ಲಿ ರಿಯಲ್‌ಮಿ GT 6 ಹಾರ್ಡ್ವೇರ್ ವಿವರಗಳು
ಸ್ಮಾರ್ಟ್ಫೋನ್ Qualcomm Snapdragon 8s Gen 3 ಪ್ರೊಸೆಸರ್ನೊಂದಿಗೆ ಸೆಟ್ ಆಗಿದ್ದು Realme GT 6 ಸ್ಮಾರ್ಟ್ಫೋನ್ ನಿಮಗೆ 8GB LPDDR5X RAM ಸಪೋರ್ಟ್ ಜೊತೆಗೆ 256GB UFS 4.0 ಸ್ಟೋರೇಜ್ ಆರಂಭದೊಂದಿಗೆ ಹೊಂದಿದೆ. ಅಲ್ಲದೆ ಇದರ ಆಪರೇಟಿಂಗ್ ಸಿಸ್ಟಮ್ (OS) ತನ್ನದೇಯಾದ realme UI 5.0 ಅನ್ನು ರನ್ ಮಾಡುವುದರೊಂದಿಗೆ ಲೇಟೆಸ್ಟ್ ಆಂಡ್ರಾಯ್ಡ್ 14 ಅನ್ನು ಹೊಂದಿದೆ. ಇದರ ಇವೆಲ್ಲ ಹೊಂದಾಣಿಕೆಯೊಂದಿಗೆ CPU ಬರೋಬ್ಬರಿ 3.0GHz ವೇಗದಲ್ಲಿ ನಡೆಯುತ್ತದೆ.
ಭಾರತದಲ್ಲಿ Realme GT 6 ಬ್ಯಾಟರಿ ಮತ್ತು ಸೆನ್ಸರ್ಗಳು
ಈ ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು ಹೊಂದಿದ್ದು 120W SUPERVOOC ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ಫೋನ್ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸೆನ್ಸರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್‌ನಂತಹ ಸೆನ್ಸರ್ ಒಳಗೊಂಡಿರುತ್ತವೆ. ಸ್ಕ್ರೀನ್ ತಿರುಗುವಿಕೆ, ಹಂತದ ಟ್ರ್ಯಾಕಿಂಗ್ ಮತ್ತು ಸ್ವಯಂಚಾಲಿತ ಹೊಳಪು ಹೊಂದಾಣಿಕೆಯಂತಹ ವಿವಿಧ ಕಾರ್ಯಚಟುವಟಿಕೆಗಳಿಗೆ ಇವು ಅತ್ಯಗತ್ಯವಾಗಿರುತ್ತದೆ. ಸ್ಮಾರ್ಟ್ಫೋನ್ ಒಟ್ಟು ಎರಡು Razor Green ಮತ್ತು Fluid Silver ಬಣ್ಣಗಳ ಆಯ್ಕೆಯಲ್ಲಿ ಖರೀದಿಸಲು ಲಭ್ಯವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile