ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿ Realme GT 6 ಗ್ಲೋಬಲ್ ಬಿಡುಗಡೆಗೆ ಡೇಟ್ ಅನ್ನು ಕಂಫಾರ್ಮ್ ಮಾಡಿದ್ದೂ ಇದೆ 20ನೇ ಜೂನ್ 2024 ರಂದು ಹಮ್ಮಿಕೊಳ್ಳಲಾಗಿದೆ. ಇದನ್ನು ಕಂಪನಿ AI Flagship Killer ಎಂದು ಹೇಳುತ್ತಿದ್ದು ಇದರ ಒಂದಿಷ್ಟು ಮಾಹಿತಿಗಳನ್ನು ರಿಯಲ್‌ಮಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಗೆಗೂ ಮುಂಚೆಯೇ ಬಳಕೆದಾರರಿಗೆ ನೀಡಲಾಗಿದೆ. ಸ್ಮಾರ್ಟ್ಫೋನ್ ಬೆಸ್ಟ್ ಸೆಲ್ಫಿ ಮತ್ತು ದೊಡ್ಡ ಡಿಸ್ಪ್ಲೇಯೊಂದಿಗೆ ಉತ್ತಮವಾದ ಪ್ರೊಸೆಸರ್ ಮತ್ತು ಧೀರ್ಘಕಾಲದ ಬ್ಯಾಟರಿ ಮತ್ತು ಫರ್ಸ್ಟ್ ಚಾರ್ಜ್ ಅನ್ನು ನಿರೀಕ್ಷಿಸಲಾಗಿದೆ. ಈ Realme GT 6 ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು? ಎಂಬುದರ ಬಗ್ಗೆ ಈ ಕೆಳಗೆ ತಿಳಿಯಿರಿ.
Also Read: BSNL ಕೇವಲ 6 ರೂಗಳ ಖರ್ಚಿನಲ್ಲಿ Unlimited ಕರೆ ಮತ್ತು ಡೇಟಾದ ಪ್ರಯೋಜನವನ್ನು 395 ದಿನಗಳಿಗೆ ನೀಡುತ್ತಿದೆ
ರಿಯಲ್‌ಮಿಯ ಈ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಭಾರತ ಸೇರಿದಂತೆ ಮತ್ತು ಜಾಗತಿಕವಾಗಿ 20ನೇ ಜೂನ್ 2024 ರಂದು ಮಧ್ಯಾಹ್ನ ಸರಿ ಸುಮಾರು 1:30PM IST ಗಂಟೆಗೆ ನಿಗದಿಪಡಿಸಿದೆ. ಅಷ್ಟೇಯಲ್ಲದೆ ಈ ಬಿಡುಗಡೆ ದಿನಾಂಕವನ್ನು ದೃಢೀಕರಿಸುವ ಅಧಿಕೃತ ಚಿತ್ರವು ಫ್ಲಿಪ್‌ಕಾರ್ಟ್ ಲೋಗೋವನ್ನು ಹೊಂದಿದ್ದು ಇ-ಕಾಮರ್ಸ್ ಸೈಟ್ ಮೂಲಕ ಫೋನ್ ದೇಶದಲ್ಲಿ ಖರೀದಿಸಲು ಲಭ್ಯವಿರುತ್ತದೆ ಎಂದು ಸೂಚಿಸುತ್ತದೆ. ಈ ಚಿತ್ರದ ಹಿಂಭಾಗದ ಪ್ಯಾನಲ್ನಲ್ಲಿ LED ಜೊತೆಗೆ ಡ್ಯುಯಲ್ ಬ್ಯಾಕ್ ಕ್ಯಾಮರಾ ಸಿಸ್ಟಮ್‌ನೊಂದಿಗೆ ಫ್ಲಾಶ್ ಯೂನಿಟ್ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿದೆ.
ಪ್ರಸ್ತುತ ಸಿಕ್ಕಿರುವ ವರದಿಗಳ ಪ್ರಕಾರ ಸ್ಮಾರ್ಟ್ರ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ Realme GT Neo 6 ಸ್ಮಾರ್ಟ್ಫೋನ್ ಮಾದರಿಯನ್ನೇ ಮರು ನಾಮಕರಣದೊಂದಿಗೆ ಭಾರತ ಸೇರಿ ಜಾಗತಿಕವಾಗಿ Realme GT 6 ಅನ್ನು ಅಧಿಕೃತವಾಗಿ ಬಿಡುಗಡೆಯಾಗುವದನ್ನು ಹಲವಾರು ವರದಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಇದನ್ನು ಆಧಾರವನ್ನಾಗಿಸಿಕೊಂಡು ಇದರ ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಒಂದಿಷ್ಟು ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ. ಫೋನ್ 16GB RAM ಮತ್ತು ಸುಮಾರು 1TB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಜೋಡಿಸಲಾದ Snapdragon 8s Gen 3 ಪ್ರೊಸೆಸರ್ನೊಂದಿಗೆ ಚಾಲಿತವಾಗಬಹುದು.
ಈ ಮುಂಬರಲಿರುವ ಸ್ಮಾರ್ಟ್ಫೋನ್ 6.78 ಇಂಚಿನ 120Hz 1.5K LTPO AMOLED ಸ್ಕ್ರೀನ್ ಅನ್ನು ಹೊಂದುವ ನಿರೀಕ್ಷೆಯಿದೆ. ಕ್ಯಾಮೆರಾ ವಿಭಾಗದಲ್ಲಿ Realme GT 6 ಹಿಂಭಾಗದಲ್ಲಿ 8MP ಮೆಗಾಪಿಕ್ಸೆಲ್ Sony IMX355 ಅಲ್ಟ್ರಾ-ವೈಡ್ ಶೂಟರ್ ಜೊತೆಗೆ 50MP ಮೆಗಾಪಿಕ್ಸೆಲ್ Sony IMX882 ಪ್ರೈಮರಿ ಸೆನ್ಸರ್ ಅನ್ನು ಹೊಂದಿದೆ. ಅಲ್ಲದೆ ಇದರ ಕ್ರಮವಾಗಿ ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ Sony IMX615 ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ. Realme GT 6 ನಿಮಗೆ ಸುಮಾರು 120W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5500mAh ಬ್ಯಾಟರಿಯಿಂದ ಹ್ಯಾಂಡ್‌ಸೆಟ್ ಅನ್ನು ಸಹ ಬೆಂಬಲಿಸುವ ನಿರೀಕ್ಷೆಗಳಿವೆ.